ಘಟಪ್ರಭಾ: ಮುಖ್ಯಮಂತ್ರಿಗಳ ನಗರೋತ್ಥಾನ ಹಂತ&4 ಅನುದಾನದಡಿ ಶೇ.24.11 ಮತ್ತು 7.25 ಯೋಜನೆಯಡಿ ಬಾಕಿ ಉಳಿದ ಅನುದಾನದಲ್ಲಿ ಎಸ್ಸಿ, ಎಸ್ಟಿ ಮತ್ತು ಇತರೆ ಬಡ ಜನಾಂಗದವರಿಗೆ ಭಾರಿಶಸ್ತ್ರ ಚಿಕಿತ್ಸೆ, ನಿವೇಶನ ಖರೀದಿಗೆ ಸಹಾಯಧನ, ಎಂಬಿಬಿಎಸ್/ಬಿಇ ವ್ಯಾಸಂಗ ಮಾಡುವ ವಿದ್ಯಾರ್ಥಿಗಳಿಗೆ ಲ್ಯಾಪ್ಟಾಪ್, ಕಚ್ಚಾಮನೆ ರಿಪೇರಿ ಹಾಗೂ ನೀರಿನ ಜೋಡಣೆ ಒದಗಿಸುವುದು ಹಾಗೂ ಸಣ್ಣ ಉದ್ದಿಮೆದಾರರಿಗೆ ಪಕ್ಕಾಮನೆ ನಿರ್ಮಾಣಕ್ಕಾಗಿ ಸಹಾಯಧನಕ್ಕಾಗಿ ಅರ್ಜಿ ಆಹ್ವಾನಿಸಲಾಗಿದೆ. ಅ.28ರೊಳಗೆ ಅರ್ಹ ಪಲಾನುಭವಿಗಳು ಪುರಸಭೆಗೆ ಅರ್ಜಿ ಸಲ್ಲಿಸಬೇಕು. ಈಗಾಗಲೇ ಸದರಿ ಯೋಜನೆಗಳಲ್ಲಿ ಸೌಲಭ್ಯ ಪಡೆದ ಲಾನುಭವಿಗಳು ಅರ್ಜಿ ಸಲ್ಲಿಸಲು ಅನರ್ಹರಾಗಿರುತ್ತಾರೆ. ಮಾಹಿತಿಗೆ ನಗರಸಭೆಯ ವಿಷಯನಿರ್ವಾಹಕರಿಂದ ಪಡೆಯಬಹುದಾಗಿದೆ ಎಂದು ಪ್ರಕಟಣೆ ತಿಳಿಸಿದೆ.