ಜಿಲ್ಲೆ

ಅಂಧರ ವಸತಿ ನಿಲಯಕ್ಕೆ ಅರ್ಜಿ ಆಹ್ವಾನ

Dharwada - Basavaraj Idli

ಹುಬ್ಬಳ್ಳಿ: ಇಲ್ಲಿಯ ನವನಗರದ ಚಿಕೇನಕೊಪ್ಪ ಶ್ರೀ ಚನ್ನವಿರ ಶರಣರ ಅಂಧರ ಕಲ್ಯಾಣ ಆಶ್ರಮದಲ್ಲಿ ಅಂಧ ಹಾಗೂ ಅಂಗವಿಕಲ ವಿದ್ಯಾರ್ಥಿಗಳ ಉಚಿತ ವಸತಿ ನಿಲಯಕ್ಕೆ ಅರ್ಜಿ ಆಹ್ವಾನಿಸಲಾಗಿದೆ.

ಊಟ, ವಸತಿ, ಬಟ್ಟೆ ಹಾಗೂ ಕಾಲೇಜು ಶುಲ್ಕ ಕಟ್ಟುವ ಜತೆಗೆ ಸಂಗೀತ ಪಾಠ, ಕುರ್ಚಿ ರಿವೈರಿಂಗ್ ತಯಾರಿಕೆ ತರಬೇತಿ ನೀಡಲಾಗುತ್ತದೆ. ಆಸಕ್ತ ವಿದ್ಯಾರ್ಥಿಗಳು ಜೂನ್ 15ರೊಳಗೆ ಅರ್ಜಿ ಸಲ್ಲಿಸಲು ಕೋರಲಾಗಿದೆ.
ಹೆಚ್ಚಿನ ಮಾಹಿತಿಗೆ ಆಶ್ರಮವನ್ನು ಸಂಪರ್ಕಿಸಲು ಉಪಾಧ್ಯಕ್ಷ ಬಸವರಾಜ ದೊಡ್ಡಮನಿ ಕೋರಿದ್ದಾರೆ.