ಬೆಂಗಳೂರು: ಬಿಬಿಎಂಪಿ ವ್ಯಾಪ್ತಿಗೆ ಒಳಪಡುವ ಭಾರತೀಯ ವಿದ್ಯಾಭವನ ಹಾಗೂ ಪ್ರೀ ನರ್ಸರಿ ತರಗತಿಗೆ ಪ್ರಸಕ್ತ ಸಾಲಿನ ಪ್ರವೇಶಕ್ಕಾಗಿ ಪಾಲಿಕೆ ಅರ್ಜಿ ಆಹ್ವಾನಿಸಿದೆ.
ಶ್ರೀರಾಮಪುರದ ಸರ್ವಜ್ಞ ರಸ್ತೆಯಲ್ಲಿ ಇರುವ ಭಾರತೀಯ ವಿದ್ಯಾಭವನ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಪಬ್ಲಿಕ್ ಸ್ಕೂಲ್ನಲ್ಲಿ ಮಾ.27ರಿಂದ ಏ.10 ರೊಳಗೆ ಅರ್ಜಿ ವಿತರಿಸಲಾಗುತ್ತದೆ. ಏ.11ರಿಂದ ಏ.25ರೊಳಗೆ ಭರ್ತಿ ಮಾಡಿದ ಅರ್ಜಿಯನ್ನು ಬಿಬಿಎಂಪಿ ಕೇಂದ್ರ ಕಚೇರಿಯ ಅನೆಕ್ಸ್- 3 ಕಟ್ಟಡದಲ್ಲಿರುವ ಹಿರಿಯ ಸಹಾಯಕ ನಿರ್ದೇಶಕರ (ಶಿಕ್ಷಣ) ಸಲ್ಲಿಸಬೇಕು. ಏ.29ರಂದು ಅರ್ಜಿಗಳ ಪರಿಶೀಲನೆ ಕಾರ್ಯ ನಡೆಯಲಿದೆ.
ಮಗುವಿನ ಪಾಸ್‌ಪೋರ್ಟ್ ಅಳತೆಯ ಐದು ಭಾವಚಿತ್ರ, ಜನನ ಪ್ರಮಾಣ ಪತ್ರ, ಮಗುವಿನ ಜತೆ ಇರುವ ಪಾಲಕರ ಭಾವಚಿತ್ರ, ಅದಾಯ ಮತ್ತು ಜಾತಿ ಪ್ರಮಾಣ ಪತ್ರ, ಪಾಲಕರ ಮತ್ತು ಮಗುವಿನ ಆಧಾರ್ ಕಾರ್ಡ್ ಪ್ರತಿ, ಪಾಲಕರ ಕಾಯಂ ವಿಳಾಸ ಇರುವ ಗುರುತಿನ ಚೀಟಿ ಪ್ರತಿ (ಭಾರತೀಯ ವಿದ್ಯಾಭವನ ಶಾಲೆಗೆ 3 ಕಿ.ಮೀ. ಸುತ್ತಮುತ್ತ ವಾಸಿಸುತ್ತಿರುವವರು),ಮಗುವಿನ ಎತ್ತರ, ತೂಕ,ರಕ್ತದ ಗುಂಪು ಇರುವ ವೈದ್ಯಕೀಯ ಪ್ರಮಾಣ ಪತ್ರವನ್ನು ಅರ್ಜಿ ಜತೆ ಸಲ್ಲಿಸಬೇಕು.
ಹೆಚ್ಚಿನ ವಿವರಕ್ಕಾಗಿ 94806 83774ಕ್ಕೆ ಸಂಪರ್ಕಿಸಬಹುದು.