ಬೆಂಗಳೂರು: ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯು ರಾಜ್ಯ ಮಹಿಳಾ ನಿಲಯಗಳಲ್ಲಿ ಅಗತ್ಯವಿರುವ ಸಮಾಲೋಚಕರು (1) ಮತ್ತು ಬೋಧಕರ (1) ಹುದ್ದೆಗಳಿಗೆ ಗೌರವಧನದ ಆಧಾರದ ಮೇಲೆ ಒಂದು ವರ್ಷದ ಅವಧಿಗೆ ಅರ್ಹ ಮಹಿಳಾ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಸಮಾಲೋಚಕರ ಹುದ್ದೆಗೆ ಎಂಎಸ್‌ಡಬ್ಲ್ಯು / ಎಂಎಸ್‌ಸಿ, ಹೋಮ್ ಸೈನ್ಸ್ (ಹ್ಯೂಮನ್ ಡೆವಲಪ್‌ಮೆಂಟ್ ಮತ್ತು ಫ್ಯಾಮಿಲಿ ರಿಲೇಷನ್) ಎಂಎಸ್‌ಸಿ, ಸೈಕಾಲಜಿ/ ಎಂಎಸ್‌ಸಿ ಸೈಕಿಯಾಟ್ರಿ ಪದವಿ ಹೊಂದಿರಬೇಕು. ಬೋಧಕರ ಹುದ್ದೆಗೆ ಎಸ್‌ಎಸ್‌ಎಲ್ಸಿ ನಂತರ ಟಿಸಿಎಚ್ ಅಥವಾ ಡಿಎಡ್ ಪದವಿ ಆಗಿರಬೇಕು. ವಿದ್ಯಾರ್ಹತೆಯ ಜೊತೆಗೆ ಸರ್ಕಾರಿ/ ಸ್ವಯಂ ಸೇವಾ ಸಂಸ್ಥೆಗಳಲ್ಲಿ ಕನಿಷ್ಠ 3 ವರ್ಷಗಳ ಸಮಾಲೋಚನ ಅನುಭವ ಹಾಗೂ ಕಂಪ್ಯೂಟರ್ ಜತೆಗೆ ಕನ್ನಡ ಮತ್ತು ಇಂಗ್ಲಿಷ್ ತಿಳಿದಿರಬೇಕು. ಆಸಕ್ತರು ಉಪ ನಿರ್ದೇಶಕರ ಕಚೇರಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಬೆಂಗಳೂರು ನಗರ ಜಿಲ್ಲೆ, ಸುಧಾರಣಾ ಸಂಸ್ಥೆಗಳ ಸಂಕೀರ್ಣ, ಡಾ.ಎಂ.ಎಚ್. ಮರಿಗೌಡ ರಸ್ತೆ, ಬೆಂಗಳೂರು- 29 ವಿಳಾಸಕ್ಕೆ 31ರೊಳಗೆ ಅರ್ಜಿ ಸಲ್ಲಿಸಬೇಕು. ವಿವರಕ್ಕೆ ದೂ: 080- 2957 8688 ಸಂಪರ್ಕಿಸಿ.