ಶೃಂಗೇರಿ: ಹಿಂದುಗಳ ಮೇಲಿನ ಹತ್ಯೆ ಖಂಡಿಸಿ ವಿಎಚ್‌ಪಿ, ಬಜರಂಗದಳ ಕಾರ್ಯಕರ್ತರು ಕುವೆಂಪು ಬಸ್‌ನಿಲ್ದಾಣದಿಂದ ಶ್ರೀ ಶಂಕರಾಚಾರ್ಯ ವೃತ್ತದ ವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿದರು.
ವಿಎಚ್‌ಪಿ ಮುಖಂಡ ಧಿವೀರ್ ಮಲ್ನಾಡ್ ಮಾತನಾಡಿ, ಹಿಂದುಗಳ ಮೇಲೆ ನಿರಂತರ ದೌರ್ಜನ್ಯ ನಡೆಯುತ್ತಿದೆ. ಕಾಶ್ಮೀರ ಘಟನೆ ಮಾಸುವ ಮುನ್ನ ಮಂಗಳೂರಲ್ಲಿ ಬಜರಂಗದಳದ ಕಾರ್ಯಕರ್ತ ಸುಹಾಸ್‌ಶೆಟ್ಟಿ ಹತ್ಯೆ ಮಾಡಲಾಗಿದೆ. ನಮ್ಮ ದೇಶ ಪಾರಂಪರಿಕ ಮೌಲ್ಯಗಳನ್ನು ಗೌರವಿಸುವ ಪ್ರಜಾಪ್ರಭುತ್ವ ವ್ಯವಸ್ಥೆ ಹೊಂದಿರುವ ಜಾತ್ಯತೀತ ರಾಷ್ಟ್ರ. ಆದರೆ ವೋಟಿಗಾಗಿ ಸರ್ಕಾರದ ಒಂದು ಧರ್ಮದ ಓಲೈಕೆ ಮಾಡುತ್ತಿರುವುದು ಖಂಡನೀಯ ಎಂದರು.
ಈ ದೇಶ ಅಸ್ಮಿತೆಯನ್ನು ಕಾಪಾಡಿ ಕೊಂಡಾಗ ಮಾತ್ರ ಯುವಪೀಳಿಗೆ ಇಲ್ಲಿ ಶಾಂತಿಯಿಂದ ಬದುಕಲು ಸಾಧ್ಯ. ಪ್ರಸ್ತುತ ಧರ್ಮಗಳ ನಡುವೆ ಕಂದಕ ಸೃಷ್ಟಿಸಿ ತಮ್ಮ ಬೇಳೆ ಬೇಯಿಸಿಕೊಳ್ಳುವರ ಸಂಖ್ಯೆ ಜಾಸ್ತಿಯಾಗಿದೆ. ಹಿಂದು ಕಾರ್ಯಕರ್ತರು ತಮ್ಮ ಸರ್ವಸ್ವವನ್ನು ತ್ಯಾಗ ಮಾಡಿ ದೇಶ ಪ್ರೇಮ ಬೆಳೆಸಿಕೊಂಡು ಸಮಾಜ ಹಾಗೂ ದೇಶದ ಉನ್ನತಿಗಾಗಿ ದುಡಿಯುತ್ತಿದ್ದಾರೆ. ದೇಶ ಮೊದಲು ಎಂಬ ಭಾವನೆ ಬೆಳೆದಾಗ ಮಾತ್ರ ರಾಷ್ಟ್ರದ ಉನ್ನತಿ ಸಾಧ್ಯ ಎಂದರು.
ಬಿಜೆಪಿ ಮಂಡಲ ಅಧ್ಯಕ್ಷ ತಲಗಾರು ಉಮೇಶ್, ಎಚ್.ಎಸ್.ವೇಣುಗೋಪಾಲ್,ನೂತನ್ ಕುಮಾರ್, ಕೆ.ಎಸ್.ರಮೇಶ್, ಪ್ರದೀಪ್ ಚೋಳರಮನೆ, ಸುಂಗಲಿ ಆನಂದಸ್ವಾಮಿ, ಸುಜಾತಾ, ಶ್ರೇಯಸ್ಸು ಕವಿಲುಕೊಡಿಗೆ, ಪ್ರವೀಣ್ ಪೂಜಾರಿ, ಸದಸ್ಯ ನಾಗರಾಜ್, ಪ್ರಕಾಶ್, ರತ್ನಾಕರ್, ರಾಘವೇಂದ್ರ ಹಂಚಲಿ ಹಾಜರಿದ್ದರು.