ಜಿಲ್ಲೆ

ರಸ್ತೆಮೇಲೆ ವಾಹನ ನಿಲುಗಡೆ ತಡೆಯಿರಿ

ಕುಕನೂರು: ಪಟ್ಟಣದ ವಿವಿಧ ರಸ್ತೆಯ ಮೇಲೆ ವಾಹನ, ಎತ್ತಿನಬಂಡಿ ಸೇರಿ ವಿವಿಧ ವಸ್ತುಗಳನ್ನು ಅಳವಡಿಸುವುದನ್ನು ತಡೆಯುವಂತೆ ಆಗ್ರಹಿಸಿ ಕೋಳಿಪೇಟೆ, ಹಾಳ ಹನುಮಪ್ಪ ದೇವರ ಭಕ್ತರು ಹಾಗೂ ಸಾರ್ವಜನಿಕರು ಪಟ್ಟಣದ ಪಪಂ ಮುಖ್ಯಾಧಿಕಾರಿ ನಬಿಸಾಬ್ ಕಂದಗಲ್‌ಗೆ ಬುಧವಾರ ಮನವಿ ಸಲ್ಲಿಸಿದರು.

ಕೋಳಿಪೇಟೆ ಹಾಗೂ ಬಸ್ ನಿಲ್ದಾಣದಿಂದ ಹನುಮಪ್ಪನ ದೇವಸ್ಥಾನದವರೆಗೆ ಬಸ್ ಸಂಚರಿಸುತ್ತಿವೆ. ಈ ರಸ್ತೆಯಲ್ಲಿ ಕೆಲವೊಂದು ವೈಯಕ್ತಿಕ ವಾಹನ, ಎತ್ತಿನಬಂಡಿ ನಿಲ್ಲಿಸಿ, ಮನೆಯ ವಸ್ತುಗಳನ್ನು ಇಲ್ಲಿ ಅಳವಡಿಸಲಾಗುತ್ತಿದೆ.

ಇದರಿಂದ ಸಾರಿಗೆ ಬಸ್, ಶಾಲಾ ವಾಹನ ಹಾಗೂ ಸಾರ್ವಜನಿಕರ ಸಂಚಾರಕ್ಕೆ ತೊಂದರೆಯಾಗುತ್ತಿದೆ. ಕೂಡಲೇ ರಸ್ತೆಯ ಮೇಲಿನ ಎಲ್ಲ ವಸ್ತುಗಳನ್ನು ಮತ್ತು ನಿಲುಗಡೆ ಮಾಡುವ ವಾಹನಗಳನ್ನು ತೆರವುಗೊಳಿಸಲು ಕ್ರಮವಹಿಸಲಿ ಎಂದು ಒತ್ತಾಯಿಸಿದರು.

ನಂತರ ಕುಕನೂರು ಪೊಲೀಸ್ ಠಾಣೆಗೆ ಮನವಿ ಸಲ್ಲಿಸಿದರು. ಪಪಂ ಸದಸ್ಯ ರಾಮಣ್ಣ ಬಂಕದಮನಿ, ಪ್ರಮುಖರಾದ ಯಲ್ಲಪ್ಪ, ಮಲಿಯಪ್ಪ ಅಣ್ಣಿಗೇರಿ, ನಿಂಗಪ್ಪ ಗೊರ್ಲೆಕೊಪ್ಪ, ಪ್ರಶಾಂತ ಆರಬೇರಳಿನ್, ಮಾರುತಿ ಭಂಡಾರಿ, ಹುಚ್ಚಪ್ಪ, ಶಂಕ್ರಪ್ಪ, ಹನುಮಪ್ಪ, ಈರಪ್ಪ, ಲಕ್ಷ್ಮಣ, ಬಸವರಾಜ ಇಬೇರಿ, ದೇವಪ್ಪ ಸೊಬಾನದ ಇತರರಿದ್ದರು.