ಮಹಾರಾಷ್ಟ್ರ ಹಾಗೂ ಗೋವಾ ರಾಜ್ಯಗಳಿಗೆ ಮೊದಲಿದ್ದ ಎಲ್ಲ ಬಸ್‌ಗಳ ಸಂಚಾರವನ್ನು ಪುನ ಪ್ರಾರಂಭಿಸಬೇಕೆಂದು ಘಟಕ ವ್ಯವಸ್ಥಾಪಕ ಜಿ.ಎಸ್. ಬಿರಾದಾರ ಅವರಿಗೆ ನಗರಾಭಿವೃದ್ಧಿ ಸಮಿತಿ ಸದಸ್ಯರು ಮನವಿ ಸಲ್ಲಿಸಿದರು. ಬಸವರಾಜ ಮಠದ, ಉಮೇಶ ಶಿರೂರ, ಶಿರಸು ಪತ್ತಾರ ಇದ್ದಾರೆ. 
ಜಿಲ್ಲೆ

ಗೋವಾ, ಮಹಾರಾಷ್ಟ್ರ ಸಾರಿಗೆ ಪುನ ಆರಂಭಕ್ಕೆ ಮನವಿ

ಇಳಕಲ್ಲ(ಗ್ರಾ): ನಗರದಿಂದ ಮಹಾರಾಷ್ಟ್ರದ ಶಿರಡಿ, ಸತಾರಾ, ಕೊಲ್ಲಾಪುರ, ಸಾಂಗಲಿ ಹಾಗೂ ಗೋವಾದ ಪಣಜಿ, ವಾಸ್ಕೋಗೆ ಪ್ರಯಾಣಿಸುತ್ತಿದ್ದ ಬಸ್‌ಗಳನ್ನು ರದ್ದುಗೊಳಿಸಿರುವುದರಿಂದ ಸಾರ್ವಜನಿಕರಿಗೆ ತೊಂದರೆಯಾಗುತ್ತಿದೆ ಎಂದು ಘಟಕ ವ್ಯವಸ್ಥಾಪಕ ಜಿ.ಎಸ್. ಬಿರಾದಾರ ಅವರಿಗೆ ನಗರಾಭಿವೃದ್ಧಿ ಸಮಿತಿ ಸದಸ್ಯರು ಭಾನುವಾರ ಮನವಿ ಸಲ್ಲಿಸಿದರು.

ಇಳಕಲ್ಲ ಕೈಮಗ್ಗದ ಸೀರೆಗಳಿಗೆ ಮಹಾರಾಷ್ಟ್ರ ಪ್ರಮುಖ ಮಾರುಕಟ್ಟೆಯಾಗಿದೆ. ಬಸ್‌ಗಳನ್ನು ರದ್ದುಗೊಳಿಸಿರುವುದರಿಂದ ಸೀರೆಗಳನ್ನು ಕಳುಹಿಸಿ ವ್ಯಾಪಾರ ಮಾಡಲು ತೊಂದರೆಯಾಗುತ್ತಿದೆ. ಇದು ನೇಕಾರಿಕೆ ಉದ್ಯೋಗದ ಮೇಲೆ ನೇರ ಪರಿಣಾಮ ಬೀರುತ್ತಿದೆ. ಅದೇ ರೀತಿ ಗೋವಾಕ್ಕೆ ಬಸ್ ರದ್ದುಗೊಳಿಸಿರುವುದರಿಂದ ಕೂಲಿಕಾರ ಕುಟುಂಬಗಳಿಗೆ ಸಾಕಷ್ಟು ತೊಂದರೆಯಾಗುತ್ತಿದೆ. ಆದ್ದರಿಂದ ಮೊದಲಿನಂತೆ ಬಸ್ ಸಂಚಾರ ಪ್ರಾರಂಭಿಸಿ ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡಬೇಕು ಎಂದು ಬಸವರಾಜ ಮಠದ, ಉಮೇಶ ಶಿರೂರ, ಶಿರಸು ಪತ್ತಾರ ಒತ್ತಾಯಿಸಿದರು.