ಜಿಲ್ಲೆ

ಸ್ಮಶಾನಗಳಿಗೆ ಸೌಕರ್ಯ ಕಲ್ಪಿಸಲು ಮನವಿ

ರವಿ ಎಸ್. ಬಳೂಟಗಿ

ವಿಜಯವಾಣಿ ಸುದ್ದಿಜಾಲ ನರಗುಂದ
ಪಟ್ಟಣದ ಸೋಮಾಪುರ ತೋಟದಕೇರಿ ಬಳಿಯಿರುವ ಮುಸ್ಲಿಂ ಸಮಾಜದ ಸ್ಮಶಾನಕ್ಕೆ ತೆರಳಲು ಸುಸಜ್ಜಿತ ರಸ್ತೆ, ಹೈಮಾಸ್ಟ್ ದೀಪ ಅಳವಡಿಸಲು ಆಗ್ರಹಿಸಿ ಕರ್ನಾಟಕ ಮುಸ್ಲಿಂ ಯೂನಿಟಿ ಸಂಘಟನೆಯಿಂದ ಪುರಸಭೆ ವ್ಯವಸ್ಥಾಪಕ ಮಲ್ಲೇಶ ಪಚ್ಚಿ ಅವರಿಗೆ ಶುಕ್ರವಾರ ಮನವಿ ಸಲ್ಲಿಸಲಾಯಿತು.
ಸಂಘಟನೆ ಅಧ್ಯಕ್ಷ ಹಯಾಜ್ ಪಠಾಣ ಮಾತನಾಡಿ, ಸೋಮಾಪುರ ಬಡಾವಣೆಯ ಮುಸ್ಲಿಂ ಖಬರಸ್ತಾನಕ್ಕೆ ತೆರಳುವ ರಸ್ತೆ ಹದಗೆಟ್ಟಿದೆ. ಸುಮಾರು ವರ್ಷಗಳಿಂದ ದುರಸ್ತಿ ಮಾಡಿಲ್ಲ. ಹೊರಕೇರಿ, ಸೋಮಾಪುರ, ಗುಡ್ಡದಕೇರಿ, ಸಿದ್ಧನಭಾವಿ ಓಣಿ, ಮಾರುಕಟ್ಟೆ ಪ್ರದೇಶದ ಮುಸ್ಲಿಂ ಸಮುದಾಯದವರು ಶವ ಕೊಂಡ್ಯೊಯ್ಯಲು ಹರಸಾಹಸ ಪಡುವಂತಾಗಿದೆ. ರಾತ್ರಿ ಸ್ಮಶಾನಕ್ಕೆ ತೆರಳಲು ಸಮಸ್ಯೆ ಎದುರಿಸುವಂತಾಗಿದೆ. ಸುಸಜ್ಜಿತ ಸಿಸಿ ರಸ್ತೆ ಹಾಗೂ ದೀಪ ಅಳವಡಿಸಬೇಕು ಎಂದು ಒತ್ತಾಯಿಸಿದರು. ನಗರದ ಎಲ್ಲ ಸಮಾಜದವರ ರುದ್ರಭೂಮಿಗಳಿಗೆ ಕುಡಿಯುವ ನೀರು, ರಸ್ತೆ, ಚರಂಡಿ, ಕಾಂಪೌಂಡ್ ಕಲ್ಪಿಸುವಂತೆ ಕೋರಿದರು. ಪುರಸಭೆ ಸದಸ್ಯ ದಿವಾನಸಾಬ್ ಕಿಲ್ಲೇದಾರ, ಬಿ.ಎಫ್. ಮಟಗೇರ, ಫಾರೂಕ್ ಮಜ್ಜೀದಮನಿ, ಹಜ್ಜು ಮುಲ್ಲಾ, ನಾಸೀರಹುಸೇನ್ ಖಲೀಫ, ನಭಿಸಾಬ್ ಜವಳಿ, ತೌಸೀಫ್ ಅಹ್ಮದ್ ಹಾರುಗೇರಿ, ಫಕ್ರುಸಾಬ್ ಸವಟಗಿ, ಮಕ್ತುಂ ಮುಲ್ಲಾನವರ, ರಫೀಕಅಹ್ಮದ್ ಗಸ್ತಿ, ಇತರರಿದ್ದರು.