Shivasharane Hemaraddi Mallamma Jayanti 
ಜಿಲ್ಲೆ

ಮುಷ್ಕರದಲ್ಲಿ ಭಾಗವಹಿಸಲು ಮನವಿ

ಗಿರೀಶ ಸಗರ

ವಿಜಯಪುರ : ಅಂಗನವಾಡಿ ನೌಕರರ ಸಂದ ಆದೇಶ ಮೇರೆಗೆ ಮಾ. 7 ರಂದು ಬೆಂಗಳೂರಿನಲ್ಲಿ ನಡೆಯಲಿರುವ ಮುಷ್ಕರದಲ್ಲಿ ಎಲ್ಲ ಅಂಗನವಾಡಿ ನೌಕರರು ಭಾಗವಹಿಸಿ ಯಶಸ್ವಿಗೊಳಿಸಬೇಕೆಂದು ಸಂದ ಜಿಲ್ಲಾಧ್ಯಕ್ಷೆ ಸುನಂದಾ ನಾಯಕ ತಿಳಿಸಿದ್ದಾರೆ.

ನಗರದಿಂದ ಮಾ. 6ರಂದು ಸಂಜೆ 5 ಗಂಟೆಗೆ ಗೋಲಗುಂಬಜ್​ ಎಕ್ಸ್​ಪ್ರೆಸ್​ ಟ್ರೇನ್​ನಲ್ಲಿ ಎಲ್ಲ ಅಂಗನವಾಡಿ ನೌಕರರು ತೆರಳಬೇಕು. ಅಂಗನವಾಡಿ ನೌಕರರ ವೇತನ ಹೆಚ್ಚಳ, ಗ್ರಾ$ಚ್ಯುಟಿ, ಅಂಗನವಾಡಿ ಕೇಂದ್ರಗಳನ್ನು ಅಂಗನವಾಡಿ ಮಾಂಟಿಸ್ಸರಿ ಎಂದು ಘೋಷಿಸಿ ಮೇಲ್ದರ್ಜೆಗೇರಿಸಬೇಕು.

ಗುಜರಾತ್​ ಹೈಕೋರ್ಟ್​ ತೀರ್ಪು ಜಾರಿಗೊಳಿಸುವುದು ಸೇರಿ ವಿವಿಧ ಬೇಡಿಕೆಗಳನ್ನು ಈಡೇರಿಸಲು ಒತ್ತಾಯಿಸಲಾಗುವುದು.

ಆದ್ದರಿಂದ ಅಂದು ಬೆಂಗಳೂರಿನ ಫ್ರೀಡಮ್​ ಪಾರ್ಕ್​ನಲ್ಲಿ ನಡೆಯುವ ಮುಷ್ಕರದಲ್ಲಿ ಅಂಗನವಾಡಿ ನೌಕರರು ಭಾಗವಹಿಸುವಂತೆ ಎಂದು ಸಂದ ಜಿಲ್ಲಾಧ್ಯಕ್ಷೆ ಅಶ್ವಿನಿ ತಳವಾರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.