ಶ್ರೀನಿವಾಸ ಪೂಜಾರಿ ಅವರನ್ನು ಭಾನುವಾರ ಅವರ ನಿವಾಸದಲ್ಲಿ ಭೇಟಿ ನೀಡಲಾಯಿತು.  
ಜಿಲ್ಲೆ

ಮಾಜಿ ಸೈನಿಕರ ಬೇಡಿಕೆಗೆ ಸಂಸದರಿಗೆ ಮನವಿ

Karthika K.S

ಕೋಟ: ಉಡುಪಿ ಜಿಲ್ಲೆ ಮಾಜಿ ಸೈನಿಕರ ಸಂಘ ವತಿಯಿಂದ ಉಡುಪಿ, ಚಿಕ್ಕಮಂಗಳೂರು ಕ್ಷೇತ್ರದ ಸಂಸದ ಕೋಟ ಶ್ರೀನಿವಾಸ ಪೂಜಾರಿ ಅವರನ್ನು ಭಾನುವಾರ ಅವರ ನಿವಾಸದಲ್ಲಿ ಭೇಟಿ ನೀಡಲಾಯಿತು.

ಇಸಿಎಚೆಸ್ ಮಾಜಿ ಸೈನಿಕರು, ವೀರನಾರಿಯರ ಚಿಕಿತ್ಸಾ ಸೌಲಭ್ಯಕ್ಕಾಗಿ ಉಡುಪಿಯಲ್ಲಿ ಯಾವುದೇ ಆಸ್ಪತ್ರೆಗಳಿಲ್ಲದೆ ಇರುವುದನ್ನು ಸಂಸದರ ಗಮನಕ್ಕೆ ತರಲಾಯಿತು. ಆದಷ್ಟು ಬೇಗ ಎಂಪನಾಲ್ಡ್ ಹಾಸ್ಪಿಟಲ್ ಉಡುಪಿಯಲ್ಲಿ ಮಾಡಿಕೊಡಬೇಕಾಗಿ ಬೇಡಿಕೆ ಸಲ್ಲಿಸಿದರು. ಉಡುಪಿಯಲ್ಲಿ ಮಾಜಿ ಸೈನಿಕರ ಪುನರ್ವಸತಿ ಇಲಾಖೆ ಸ್ಥಾಪಿಸುವುದು. ಮಾಜಿ ಸೈನಿಕರಿಗೆ ಜಮೀನು ನೀಡುವುದರ ಬಗ್ಗೆ ಮನವಿ ನೀಡಲಾಯಿತು. ಇದೇ ವೇಳೆ ಸಂಸದರು ಮಾಜಿ ಸೈನಿಕರ ಬೇಡಿಕೆ ಈಡೇರಿಸಿ ಕೊಡುವುದಾಗಿ ಭರವಸೆ ನೀಡಿದರು.

ಉಡುಪಿ ಜಿಲ್ಲಾ ಮಾಜಿ ಸೈನಿಕರ ಸಂಘ ಅಧ್ಯಕ್ಷ ಕೇಶವ ಮಲ್ಪೆ, ಉಪಾಧ್ಯಕ್ಷ ಚಂದ್ರ ಅಮೀನ್, ಖಜಾಂಚಿ ಸುರೇಶ್ ಸಿ.ರಾವ್, ಕಾರ್ಯದರ್ಶಿ ಅಶೋಕ, ಸಂಘಟನೆ ಅಡ್ಡ್ವೆಸರ್ ಶಿವಕುಮಾರ್ ನಾಯಿರಿ, ಸಂಘಟನೆ ನಿರ್ದೇಶಕರು, ಪದಾಧಿಕಾರಿಗಳು, 40 ಸದಸ್ಯರು ಉಪಸ್ಥಿತರಿದ್ದರು.