ತೇರದಾಳ ಮತಕ್ಷೇತ್ರ ಶಾಸಕ ಸಿದ್ದು ಸವದಿ ಅವರಿಗೆ ಆಶಾಕಾರ್ಯಕರ್ತೇಯರು ತಮ್ಮ ಬೇಡಿಕೆ ಈಡೇರಿಕೆ ಒತ್ತಾಯಿಸಿ, ಸರ್ಕಾರಕ್ಕೆ ಬರೆದ ಮನವಿಯನ್ನು ಸಲ್ಲಿಸಿದರು. ಆಶಾಸುಗಮಕಾರ ಮಂಜುಳಾ ಸರಿಕರ, ಬೇಬಿಶ್ರಿ ಹಾಸಿಲಕರ, ಲಕ್ಷೀತ್ಮ ತಳವಾರ ಇತರರಿದ್ದರು. 
ಜಿಲ್ಲೆ

ಬೇಡಿಕೆ ಈಡೆರಿಕೆಗೆ ಒತ್ತಾಯಿಸಿ ಶಾಸಕರಿಗೆ ಮನವಿ

ತೇರದಾಳ: ರಾಜ್ಯದಲ್ಲಿ ಆಶಾ ಕಾರ‌್ಯಕರ್ತೆಯರಿಗೆ ಕನಿಷ್ಠ ಹತ್ತು ಸಾವಿರ ಗೌರವ ಧನ ನೀಡುವ ಭರವಸೆ ನೀಡಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕೂಡಲೇ ನೀಡಿರುವ ಭರವಸೆಯನ್ನು ಈಡೇರಿಸುವಂತೆ ಸರಕಾರದ ಮೇಲೆ ಒತ್ತಡ ಹೇರಲು ತೇರದಾಳ ಶಾಸಕ ಸಿದ್ದು ಸವದಿ ಅವರಿಗೆ ಆಶಾ ಕಾರ‌್ಯಕರ್ತೆಯರು ಮಂಗಳವಾರ ಮನವಿ ಸಲ್ಲಿಸಿದರು.

2025ರ ಜನೇವರಿಯಲ್ಲಿ ಬೆಂಗಳೂರಿನಲ್ಲಿ ನಡೆಸಿದ ಧರಣಿ ವೇಳೆ ಸಿಎಂ, ಆರೋಗ್ಯ ಸಚಿವರು ಆಶಾ ಕಾರ‌್ಯಕರ್ತೆಯರ ಜತೆಗೆ ಸಭೆ ನಡೆಸಿ ನಮ್ಮ ಬೇಡಿಕೆಗಳನ್ನು ಈಡೇರಿಸುವ ಭರವಸೆ ನೀಡಿ ಏಪ್ರೀಲ್ ತಿಂಗಳಿಂದ ಜಾರಿಗೊಳಿಸುವುದಾಗಿ ತಿಳಿಸಿದ್ದರು. ಆದರೆ ಇದುವರೆಗೆ ಯಾವುದೇ ಕ್ರಮ ಕೈಗೊಂಡಿಲ್ಲ. ಆದ್ದರಿಂದ ಈಗ ಮತ್ತೆ ನಾವು ಹೋರಾಟ ನಡೆಸಬೇಕಾದ ಸ್ಥಿತಿ ನಿರ್ಮಾಣವಾಗಿದೆ ಎಂದು ಆಶಾ ಕಾರ‌್ಯಕರ್ತೆಯರ ಮೇಲ್ವಿಚಾರಕಿ ಮಂಜುಳಾ ಸರಿಕರ ಶಾಸಕರಿಗೆ ತಿಳಿಸಿದರು.

ಭರವಸೆ ನೀಡಿರುವಂತೆ ಹತ್ತು ಸಾವಿರ ಗೌರವ ಧನ, ಅಂಗನವಾಡಿ ಹಾಗೂ ಬಿಸಿಯೂಟ ಕಾರ‌್ಯಕರ್ತೆಯರಿಗೆ ಹೆಚ್ಚಿಸಿದಂತೆ ಸಾವಿರ ರೂ ಆಶಾ ಕಾರ‌್ಯಕರ್ತೆಯರಿಗೂ ಹೆಚ್ಚಿಸುವುದಾಗಿಯೂ ಭರವಸೆ ನೀಡಿದ್ದರು. ಆದ್ದರಿಂದ ನಮ್ಮ ಬೇಡಿಕೆಗೆ ತಾವು ಸರಕಾರ ಮಟ್ಟದಲ್ಲಿ ಧ್ವನಿ ಎತ್ತಬೇಕೆಂದು ಶಾಸಕ ಸಿದ್ದು ಸವದಿ ಅವರಿಗೆ ಮನವಿ ಮಾಡಿದರು.

ಶಾಸಕರು ಕೂಡ ಈ ಬಗ್ಗೆ ಸರಕಾರ ಮೇಲೆ ಒತ್ತಡ ಹೇರುವುದಾಗಿ ಭರವಸೆ ನೀಡಿದರು. ಬೇಬಿಶ್ರೀ ಹಾಸಿಲ್ಕರ, ಲಕ್ಷೀತ್ಮ ತಳವಾರ, ಮಹಾನಂದ ಧರೆನ್ನವರ, ಸುಗಂಧಾ ಧರೆನ್ನವರ, ಶಕ್ಕುಬಾಯಿ ಪೂಜಾರಿ, ಗೀತಾ ಆರಗಿ, ಯಲ್ಲವ್ವ ಯುಂಕಿ, ಗಾಯತ್ರಿ ರಾವಳ, ಪುಷ್ಪಾ ಗುಳನ್ನವರ, ಭಾರತಿ ಬಡಿಗೇರ, ರೂಪಾ ಸಿಂಗೆ, ಜಯಶ್ರೀ ಐಹೊಳಿ ಇದ್ದರು.