ಜಿಲ್ಲೆ

ವಿವಿಧ ಬೇಡಿಕೆ ಈಡೇರಿಸಲು ಮನವಿ

ವೀರೇಶ ಸೌದ್ರಿ

ಭಟ್ಕಳ: ವಿವಿಧ ಬೇಡಿಕೆ ಈಡೇರಿಸುವಂತೆ ಟ್ಯಾಕ್ಸಿ ಚಾಲಕ, ಮಾಲೀಕರ ಸಂಘದ ವತಿಯಿಂದ ಹೊನ್ನಾವರದ ಆರ್‌ಟಿಒ ರವೀಂದ್ರ ಅವರಿಗೆ ಮನವಿ ಸಲ್ಲಿಸಲಾಯಿತು.

ಭಟ್ಕಳದಲ್ಲಿ ಸುಮಾರು 250 ಟೂರಿಸ್ಟ್ ಕಾರ್‌ಗಳಿವೆ. ಆದರೆ ಕೆಲ ಖಾಸಗಿ ಕಾರ್‌ನವರು ಮಂಗಳೂರು, ಗೋವಾ ಮುಂತಾದ ಊರುಗಳಿಗೆ ಬಾಡಿಗೆ ಮಾಡುತ್ತಿದ್ದಾರೆ. ಖಾಸಗಿ ಕಾರಿನವರಿಗೆ ಸ್ವಂತಕ್ಕೆ ಬಳಸಲು ಮಾತ್ರ ಅವಕಾಶವಿರುತ್ತದೆ. ಅದೇ ರೀತಿ ಕೆಲ ಬಾಡಿಗೆ ರಿಕ್ಷಾದವರು ಸಿಗಂದೂರು, ಕುಂದಾಪುರ, ಕೊಲ್ಲೂರು ಮುಂತಾದ ಊರುಗಳಿಗೆ ಬಾಡಿಗೆ ಮಾಡುತ್ತಿದ್ದಾರೆ. ಆದರೆ ಅವರಿಗೆ ಸರ್ಕಾರ ಕೇವಲ 7 ಕಿ.ಮೀ ಪರ್ಮಿಟ್ ನೀಡಿದೆ. ಅಲ್ಲದೆ, ರಾಷ್ಟ್ರೀಯ ಹೆದ್ದಾರಿ ವಿಸ್ತರಣೆಯಿಂದ ಜಾಗದ ಸಮಸ್ಯೆ ಉಂಟಾಗಿದ್ದು, ಸಮಸ್ಯೆ ಪರಿಹರಿಸಬೇಕು ಎಂದು ಮನವಿಯಲ್ಲಿ ತಿಳಿಸಲಾಗಿದೆ. ಕಾರು ಚಾಲಕ, ಮಾಲೀಕರ ಸಂಘದ ಅಧ್ಯಕ್ಷ ಗಣೇಶ ದೇವಾಡಿಗ, ಉಪಾಧ್ಯಕ್ಷ ಅಬ್ದುಲ ಸಮಿ ಇತರರು ಇದ್ದರು.