ಜಿಲ್ಲೆ

ಕಾಣೆಯಾದ ವ್ಯಕ್ತಿ ಪತ್ತೆಗೆ ಮನವಿ

ಅವಿನಾಶ್ ಜೈನಹಳ್ಳಿ

ಸುಬ್ರೋತ್ ಸರ್ಕಾರ್ ಎಂಬ 33 ವರ್ಷದ ವ್ಯಕ್ತಿಯು ಜುಲೈ 13 ರಂದು ಮಧ್ಯಾಹ್ನ 1.30 ಗಂಟೆಗೆ ಹೆಬ್ಬಾಳ್‌ನಲ್ಲಿರುವ ಸ್ಟಾರ್ ಬಜಾಜ್ ಶೋರೂಂಗೆ ಕೆಲಸಕ್ಕೆಂದು ಹೋಗಿದ್ದಾಗ ಕಾಣೆಯಾಗಿರುವ ಪ್ರಕರಣ ಮೈಸೂರಿನ ಹೆಬ್ಬಾಳ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ದಾಖಲಾಗಿದೆ.

ಚಹರೆ :- ವ್ಯಕ್ತಿಯು ಎಣ್ಣೆಗೆಂಪು ಮೈಬಣ್ಣ, ದುಂಡು ಮುಖ, ಸಾಧಾರಣ ಶರೀರ ಹೊಂದಿದ್ದು 5.7 ಅಡಿ ಎತ್ತರವಿರುತ್ತಾರೆ. ಬ್ಲೂ ಕಲರ್ ಶರ್ಟ್ ಬಿಸ್ಕೆಟ್ ಕಲರ್ ಪ್ಯಾಂಟ್ ಧರಿಸಿದ್ದು ಕನ್ನಡ, ಇಂಗ್ಲಿಷ್, ಹಿಂದಿ ಹಾಗೂ ಬೆಂಗಾಲಿ ಭಾಷಾ ಮಾತನಾಡುತ್ತಾರೆ.

ಕಾಣೆಯಾಗಿರುವ ವ್ಯಕ್ತಿಯು ಪತ್ತೆಯಾದಲ್ಲಿ ಹೆಬ್ಬಾಳ್ ಪೊಲೀಸ್ ಠಾಣೆ ದೂ.ಸಂ:2418318 ಅಥವಾ ಮೈಸೂರು ನಗರ ಪೊಲೀಸ್ ಕಂಟ್ರೋಲ್ ರೂಂ ದೂ.ಸಂ:2418339 ಅನ್ನು ಸಂಪರ್ಕಿಸಬಹುದು ಎಂದು ಹೆಬ್ಬಾಳ ಪೊಲೀಸ್ ಠಾಣೆಯ ಠಾಣಾಧಿಕಾರಿಗಳ ಪ್ರಕಟಣೆಯಲ್ಲಿ ತಿಳಿಸಿದೆ.