ಮೈಸೂರು: ಬೆನ್ನು ಮೂಳೆಯ ಕ್ಯಾನ್ಸರ್‌ನಿಂದ ಬಳಲುತ್ತಿರುವ 9ನೇ ತರಗತಿಯ ಬಾಲಕಿಗೆ ಹೆಚ್ಚಿನ ಚಿಕಿತ್ಸೆ ಅಗತ್ಯವಿದ್ದು, ಅದಕ್ಕಾಗಿ ಅವರ ತಾಯಿ ಆರ್ಥಿಕ ಸಹಾಯ ಕೋರಿದ್ದಾರೆ.
ಶ್ರೀರಂಗಪಟ್ಟಣ ತಾಲೂಕಿನ ಬಲ್ಲೇನಹಳ್ಳಿ ಗ್ರಾಮದ ನಿವಾಸಿ ಹೇಮಾ ಅವರ ಪುತ್ರಿ ವಿನುತಾ ಬೆನ್ನು ಮೂಳೆಯ ಕ್ಯಾನ್ಸರ್ ವಿರುದ್ಧ ಹೋರಾಡುತ್ತಿದ್ದು, ಚಿಕಿತ್ಸೆಗೆ 19 ಲಕ್ಷ ರೂ.ಬೇಕಾಗಿದೆ.
ನಮ್ಮದು ಬಡ ಕುಟುಂಬವಾಗಿದ್ದು, ಈಗಾಗಲೇ ದೀರ್ಘಾವಧಿ ಚಿಕಿತ್ಸೆಗಾಗಿ ಸಾಕಷ್ಟು ಹಣ ಖರ್ಚು ಮಾಡಿ, ಬರಿದಾಗಿದ್ದೇವೆ. ನಮಗೆ ಯಾವುದೇ ಆದಾಯ ಮೂಲಗಳಿಲ್ಲ. ಆದ್ದರಿಂದ ದಾನಿಗಳು ಆರ್ಥಿಕ ಸಹಾಯ ಮಾಡಬೇಕು ಎಂದು ಹೇಮಾ ಗುರುವಾರ ಸುದ್ದಿಗೋಷ್ಠಿಯಲ್ಲಿ ಕೋರಿದರು.
ದಾನಿಗಳು ಶ್ರೀರಂಪಟ್ಟಣದಲ್ಲಿನ ಕರ್ನಾಟಕ ಬ್ಯಾಂಕ್‌ನ ಖಾತೆ ಸಂಖ್ಯೆ 7092500101895101, ಐಎಫ್‌ಎಸ್‌ಸಿ ಕೋಡ್ ಕೆಎಆರ್‌ಬಿ 0000709 ಅಥವಾ ಗೂಗಲ್ ಪೇ ಸಂಖ್ಯೆ 7090221842ಕ್ಕೆ ಹಣ ಸಂದಾಯ ಮಾಡಬೇಕೆಂದು ಮನವಿ ಮಾಡಿದರು.
ಶ್ರೀರಂಗಪಟ್ಟಣದ ಡಿಜಿಟಲ್ ಗ್ರಂಥಾಲಯದ ಗ್ರಂಥಪಾಲಕ ಸೋಮಶೇಖರ್, ಬಾಲಕಿ ವಿನುತಾ ಇದ್ದರು.