ಜಿಲ್ಲೆ

ಬುದ್ಧ ವಿಹಾರ ಬಿಟ್ಟುಕೊಡಲು ಮನವಿ

ಜಗದೀಶ ಹೊಂಬಳಿ

ಬೆಳಗಾವಿ: ಬಿಹಾರದ ಬೌದ್ಧ ಗಯಾದ ಬುದ್ಧ ವಿಹಾರವನ್ನು ಬೌದ್ಧರಿಗೆ ಬಿಟ್ಟು ಕೊಡಬೇಕು ಎಂದು ಒತ್ತಾಯಿಸಿ ಗುರುವಾರ ಬೌದ್ಧ ಮಹಾಸಭಾ ಮತ್ತು ರಾಮತೀರ್ಥನಗರ ರಹವಾಸಿಗಳ ಸಂಘ, ಅಖಿಲ ಭಾರತ ಸಹಾಯಿ ಮಜದೂರ್ ಕಾಂಗ್ರೆಸ್‌ನಿಂದ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಲಾಯಿತು.

ಬಿಹಾರದ ಬೌದ್ಧ ಗಯಾದಲ್ಲಿರುವ ಬುದ್ಧ ವಿಹಾರ ಆಡಳಿತವನ್ನು 1949ನೇ ಕಾಯ್ದೆ ಅನುಸಾರವಾಗಿ 9 ಜನರ ಸದಸ್ಯರಲ್ಲಿ 5 ಬೇರೆಯ ಜನಾಂಗದ ಜನರು ನಡೆಸುತ್ತಿದ್ದು, ಬುದ್ಧ ವಿಹಾರವನ್ನು ತಮ್ಮ ಹತೋಟಿಯಲ್ಲಿ ಇಟ್ಟಿಕೊಂಡಿರುತ್ತಾರೆ. ಆದ್ದರಿಂದ 1949ನೇ ಕಾಯ್ದೆ ರದ್ದುಗೊಳಿಸಿ ಬುದ್ಧ ವಿಹಾರವನ್ನು ಬೌದ್ಧರಿಗೆ ಒಪ್ಪಿಸಬೇಕು ಎಂದು ಒತ್ತಾಯಿಸಿದರು. ಕಾಶಿರಾಮ್ ಚವ್ಹಾಣ, ಯಲ್ಲಪ್ಪ ಗಡಿನಾಯಿಕ, ಗೋಪಿ ಬಳ್ಳಾರಿ, ರಾಜೇಂದ್ರ ಕಾಂಬಳೆ, ಕಲ್ಲಪ್ಪ ಚೌಗುಲೆ ಇತರರಿದ್ದರು.