ಜಿಲ್ಲೆ

ಬಿಆರ್‌ಟಿಎಸ್ ಅವ್ಯವಸ್ಥೆ ಸರಿಪಡಿಸಲು ಮನವಿ

ವಿಜಯವಾಣಿ ಸುದ್ದಿಜಾಲ ಧಾರವಾಡ
ಅವಳಿನಗರ ನಡುವಿನ ಬಿಆರ್‌ಟಿಎಸ್ ಅವ್ಯವಸ್ಥೆ ಸರಿಪಡಿಸಲು ಆಗ್ರಹಿಸಿ ಧಾರವಾಡ ಧ್ವನಿ ವತಿಯಿಂದ ಜಿಲ್ಲಾಽಕಾರಿ ದಿವ್ಯ ಪ್ರಭು ಅವರಿಗೆ ಶುಕ್ರವಾರ ಮನವಿ ಸಲ್ಲಿಸಲಾಯಿತು.
ಯೋಜನೆ ಅನುಷ್ಠಾನದ ನಂತರ ಅವಳಿನಗರದ ನಡುವೆ ಸಂಚರಿಸುವ ವಾಹನ ಸವಾರರಿಗೆ ಮತ್ತು ಸಾರ್ವಜನಿಕರಿಗೆ ತೊಂದರೆಗಳಾಗುತ್ತಿವೆ. ಈ ಸಂಬAಧ ಜೂ. 10ರಂದು ಜಿಲ್ಲಾ ಉಸ್ತುವಾರಿ ಸಚಿವರು, ಯೋಜನಾ ವ್ಯಾಪ್ತಿಯ ಶಾಸಕರು ಮತ್ತು ಜಿಲ್ಲಾಽಕಾರಿಗೆ ಮನವಿ ಸಲ್ಲಿಸಲಾಗಿತ್ತು. ಮನವಿಗೆ ಸ್ಪಂದಿಸದ ಕಾರಣ ಜೂ. 15ರಂದು ನವಲೂರ ಸೇತುವೆಯಿಂದ ಜಿಲ್ಲಾಽಕಾರಿ ಕಚೇರಿವರೆಗೆ ಪಾದಯಾತ್ರೆ ನಡೆಸಲಾಗಿತ್ತು. ಇನ್ನು 5 ದಿನಗಳೊಳಗೆ ಜಿಲ್ಲಾಡಳಿತದಿಂದ ಸ್ಪಂದನೆ ಸಿಗದಿದ್ದರೆ ಮತ್ತೊಮ್ಮೆ ಹೋರಾಟ ನಡೆಸಲಾಗುವುದು ಎಂದು ಮನವಿಯಲ್ಲಿ ತಿಳಿಸಿದ್ದಾರೆ.
ಮನವಿ ಸ್ವೀಕರಿಸಿ ಜಿಲ್ಲಾಽಕಾರಿ ದಿವ್ಯ ಪ್ರಭು ಮಾತನಾಡಿ, ಬಿಆರ್‌ಟಿಎಸ್ ಯೋಜನೆಯ ಅಡಚಣೆಗಳ ನಿವಾರಣೆ ಸಂಬAಧ ಸಭೆ ನಡೆಸಲಾಗಿದೆ. ಸಂಬAಽಸಿದವರ ಜೊತೆ ಇನ್ನೊಂದು ಸಭೆ ನಡೆಸಲಾಗುವುದು ಎಂದರು.
ಧಾರವಾಡ ಧ್ವನಿ ಅಧ್ಯಕ್ಷ ಈಶ್ವರ ಶಿವಳ್ಳಿ, ಸಂತೋಷ ಪಟ್ಟಣಶೆಟ್ಟಿ, ಶರಣಗೌಡ ಗಿರಡ್ಡಿ, ಇಮ್ರಾನ್ ತಾಳಿಕೋಟಿ, ಮಂಜುನಾಥ ನೀರಲಕಟ್ಟಿ, ವೆಂಕಟೇಶ ರಾಯ್ಕರ್, ಬಸವರಾಜ ಪೊಮೋಜಿ, ಬಿ.ಎಂ. ಕೇದಾರನಾಥ, ಭೀಮಪ್ಪ ಕಾಸಾಯಿ, ಪರಮೇಶ್ವರ ಕಾಳೆ, ರಾಜೇಶ ಮನಗುಂಡಿ, ಅಶೋಕ ದೇಶಪಾಂಡೆ, ಶಂಕರ ತಾವರೇನವರ, ಸುರೇಖಾ ಪೂಜಾರ, ಗುರುರಾಜ ಹವಾಲ್ದಾರ, ಇತರರು ಉಪಸ್ಥಿತರಿದ್ದರು.