ಜಿಲ್ಲೆ

ಜಾನಪದ ವಸ್ತು ಸಂಗ್ರಹಾಲಯಕ್ಕೆ ಜಾಗ ನೀಡಲು ಡಿಸಿಗೆ ಮನವಿ

ಮಡಿಕೇರಿ: ಕರ್ನಾಟಕ ಜಾನಪದ ಪರಿಷತ್, ಕೊಡಗು ಜಿಲ್ಲಾ ಘಟಕದಿಂದ ನೂತನ ಜಿಲ್ಲಾಧಿಕಾರಿ ವೆಂಕಟ್‌ರಾಜಾರವರನ್ನು ಸೋಮವಾರ ಭೇಟಿ ಮಾಡಲಾಯಿತು.


ಈ ಸಂದರ್ಭ ಜಿಲ್ಲಾ ಅಧ್ಯಕ್ಷ ಬಿ.ಜಿ.ಅನಂತಶಯನ ಅವರು, ಜಿಲ್ಲೆಯಲ್ಲಿ ಜಾನಪದ ವಸ್ತು ಸಂಗ್ರಹಾಲಯ ಸ್ಥಾಪಿಸಲು ಜಾಗ ನೀಡುವಂತೆ ಮನವಿ ಮಾಡಿದರು. ಜಾನಪದ ದಸರಾ ಹಾಗೂ ಇತರ ಜಾನಪದ ಚಟುವಟಿಕೆಗಳಿಗೆ ಸ್ಪಂದಿಸುವುದಾಗಿ ಜಿಲ್ಲಾಧಿಕಾರಿ ವೆಂಕಟ್‌ರಾಜಾ ಭರವಸೆ ನೀಡಿದರು.


ಈ ಸಂದರ್ಭ ಘಟಕದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮುನೀರ್ ಅಹ್ಮದ್, ಜಿಲ್ಲಾ ಖಜಾಂಚಿ ಸಂಪತ್‌ಕುಮಾರ್, ಉಪಾಧ್ಯಕ್ಷ ಅಂಬೆಕಲ್ ಕುಶಾಲಪ್ಪ, ಸಮಿತಿ ಸದಸ್ಯರಾದ ನವೀನ್, ಎ.ಕೆ.ವೀಣಾಕ್ಷಿ ಹಾಗೂ ರೇವತಿ ಹಾಜರಿದ್ದರು. ಇದೇ ವೇಳೆ ಪರಷತ್ ನಿಯೋಗವು ಜಿಲ್ಲಾಧಿಕಾರಿಗಳಿಗೆ ಕೊಡಗಿನ ಖಾದ್ಯಗಳನ್ನು ನೀಡಿತು.