ಜಿಲ್ಲೆ

ವಕೀಲರ ಕಚೇರಿಗೆ ಬಂದು ಗಲಾಟೆ, ಕ್ರಮ ಕೈಗೊಳ್ಳುವಂತೆ ಡಿಸಿ, ಹೆಚ್ಚುವರಿ ಎಸ್​ಪಿಗೆ ಮನವಿ

ಕಾರವಾರ: ವಕೀಲ ಹಾಗೂ ನೋಟರಿ ಪ್ರದೀಪ ತಾಂಡೇಲ ಅವರ ಕಚೇರಿಗೆ ವ್ಯಕ್ತಿಯೊಬ್ಬ ಬಂದು ಗಲಾಟೆ ಮಾಡಿದ್ದು, ಈ ವ್ಯಕ್ತಿಯ ವಿರುದ್ಧ ಕಾನೂನು ಕ್ರಮಕೈಗೊಳ್ಳಬೇಕು ಎಂದು ಜಿಲ್ಲಾ ವಕೀಲರ ಸಂಘದ ಸದಸ್ಯರು ಜಿಲ್ಲಾಧಿಕಾರಿ ಹಾಗೂ ಹೆಚ್ಚುವರಿ ಎಸ್​ಪಿಗೆ ಮನವಿ ಸಲ್ಲಿಸಿದರು.


ಸಂಘದ ಸದಸ್ಯ ಪ್ರದೀಪ ತಾಂಡೇಲ ಅವರಿಗೆ ಕಳೆದ ಜುಲೈ 21ರಂದು ವಿನಾಯಕ ತಾಂಡೇಲ್ ಹಾಗೂ ಆತನ ಜತೆಗೆ ಇದ್ದ ವ್ಯಕ್ತಿ ಕರೆ ಮಾಡಿ ಜೀವ ಬೆದರಿಕೆ ಹಾಕಿದ್ದಾನೆ. ಜುಲೈ 22ರಂದು ಕಚೇರಿಗೆ ಬಂದು ಗಲಾಟೆ ಮಾಡಿದ್ದಾನೆ. ಈ ಬಗ್ಗೆ ಪ್ರದೀಪ ತಾಂಡೇಲ್ ಅವರು ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಈ ಬಗ್ಗೆ ಸೂಕ್ತ ಕ್ರಮಕೈಗೊಳ್ಳಬೇಕು ಎಂದು ಮನವಿ ಪತ್ರದಲ್ಲಿ ತಿಳಿಸಲಾಗಿದೆ. ಅಧ್ಯಕ್ಷ ಕೃಷ್ಣಾನಂದ ನಾಯ್ಕ, ಕಾರ್ಯದರ್ಶಿ ಎನ್.ಆರ್. ದೇಶಭಂಡಾರಿ, ಕಾರ್ಯದರ್ಶಿ ದರ್ಶನ ಗೌಡ ಇದ್ದರು.