ಚಿಕ್ಕಮಗಳೂರು: ಜಮೀನುಗಳಲ್ಲಿ ಚಿರತೆಗಳು ಕಾಣಿಸಿಕೊಳ್ಳುತ್ತಿರುವ ಪರಿಣಾಮ ಕೃಷಿ ಚಟುವಟಿಕೆಗೆ ತೀವ್ರ ಅಡ್ಡಿಯಾಗಿರುವ ಹಿನ್ನೆಲೆಯಲ್ಲಿ ಕೂಡಲೇ ಚಿರತೆಗಳನ್ನು ಸೆರೆಹಿಡಿದು ಬೇರೆಡೆಗೆ ಸ್ಥಳಾಂತರಿಸಬೇಕು ಎಂದ ಕರ್ತಿಕೆರೆ ಭಾಗದ ವಿವಿಧ ಗ್ರಾಮಗಳ ಗ್ರಾಮಸ್ಥರು ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದರು.
ಈ ವೇಳೆ ಮಾತನಾಡಿದ ಬಿಜೆಪಿ ಎಸ್ಸಿ ಘಟಕದ ಜಿಲ್ಲಾಧ್ಯಕ್ಷ ಕುರುವಂಗಿ ವೆಂಕಟೇಶ್, ಕನ್ನೇನಹಳ್ಳಿ, ಬಂಡಿಹಳ್ಳಿ, ಕರ್ತಿಕೆರೆ, ಮಲ್ಲೇದೇವರಹಳ್ಳಿ ಹಾಗೂ ಹಿರೇಮಗಳೂರು ಸುತ್ತಮುತ್ತಲು ರೈತರ ಜಮೀನುಗಳಲ್ಲಿ ಚಿರತೆಗಳ ಓಡಾಟ ಹೆಚ್ಚಾಗಿದೆ. ಇದರಿಂದ ಗ್ರಾಮಸ್ಥರು ತೀವ್ರ ಆತಂಕಕ್ಕೆ ಒಳಗಾಗಿದ್ದಾರೆ ಎಂದರು.
ಪ್ರತಿನಿತ್ಯವು ಕೃಷಿ ಚಟುವಟಿಕೆಗೆ ತೆರಳುವ ರೈತಾಪಿ ವರ್ಗವು ಚಿರತೆಯಿಂದ ಕಾಯಕವನ್ನು ಕೈಬಿಟ್ಟಿ ದ್ದಾರೆ. ಅಲ್ಲದೇ ದನಕರುಗಳಿಗೆ ಮೇವು, ಭೂಮಿ ಬೀಜ ಬಿತ್ತುವುದು, ಬೆಳೆಗಳಿಗೆ ಔಷಧ ಸಿಂಪಡಣೆ ಇನ್ನಿತರೆ ಕೃಷಿ ಚಟುವಟಿಕೆಯಿಂದ ಜೀವನ ಸಾಗಿಸುವವರಿಗೆ ಕಳೆದೆರಡು ದಿನಗಳ ಚಿರತೆಯ ಕಾಟದಿಂದ ಕೆಲಸವನ್ನು ಸ್ಥಗಿತಗೊಳಿಸಿದ್ದಾರೆ. ಇದರಿಂದ ಕೂಲಿ ಕಾರ್ಮಿಕರು ಜೀವನ ನಡೆಸುವುದು ದುಸ್ಥರವಾಗಿದೆ ಎಂದು ಹೇಳಿದರು.
ಈ ಸಂಬAಧ ಅರಣ್ಯ ಇಲಾಖೆ ಸ್ಥಳಕ್ಕಾಗಮಿಸಿ ಪಟಾಕಿಸಿ ಸಿಡಿಸಿದ್ದಾರೆಯೇ ಹೊರತು ಚಿರತೆಗಳು ಸಂಚರಿಸಿದ ಸ್ಥಳಿಗಳಿಗೆ ಭೇಟಿ ನೀಡಿಲ್ಲ. ಎತ್ತರದ ಮರಗಳಲ್ಲಿ ವೀಕ್ಷಣೆ ನಡೆಸಿರುವುದಿಲ್ಲ. ಹೀಗಾಗಿ ಜಿಲ್ಲಾಡಳಿತ ಗ್ರಾಮಸ್ಥರ ಹಿತದೃಷ್ಟಿಯಿಂದ ಹಾಗೂ ಕೃಷಿ ಚಟುವಟಿಕೆ ಪೂರಕವಾಗಿ ಸಾಗಲು ಕಟ್ಟುನಿಟ್ಟಿನ ಕ್ರಮ ಕೈ ಗೊಳ್ಳಬೇಕು ಎಂದು ಒತ್ತಾಯಿಸಿದರು.
ಜಿಲ್ಲಾಡಳಿತ ಚಿರತೆಗಳ ಹಾವಳಿ ತಪ್ಪಿಸುವ ಸಲುವಾಗಿ ಸಂಬAಧಿಸಿದ ಅಧಿಕಾರಿಗಳಿಗೆ ಸೂಕ್ತ ನಿರ್ದೇಶನ ನೀಡುವ ಮೂಲಕ ಗ್ರಾಮಸ್ಥರ ಆತಂಕವನ್ನು ತಿಳಿಗೊಳಿಸಬೇಕು ಎಂದು ಆಗ್ರಹಿಸಿದರು.
ಮನವಿ ಸಲ್ಲಿಸುವ ಸಂದರ್ಭದಲ್ಲಿ ಬಿಜೆಪಿ ಮಾಧ್ಯಮ ಸಹ ಪ್ರಮುಖ್ ಕೇಶವಮೂರ್ತಿ, ರೈತ ಮೋರ್ಚಾ ಉಪಾಧ್ಯಕ್ಷ ರವಿಕುಮಾರ್, ಪ್ರಧಾನ ಕಾರ್ಯದರ್ಶಿ ಧನಂಜಯ, ರೈತರಾದ ಎಸ್.ಬಸವರಾಜ್, ಲೋಕೇಶ್, ಶಿವಕುಮಾರ್, ರವಿಕುಮಾರ್, ರಾಜಣ್ಣ, ದೇವರಾಜ್ ಮತ್ತಿತರರಿದ್ದರು.