ಜಿಲ್ಲೆ

ಬಜೆಟ್‌ನಲ್ಲಿ 150 ಕೋಟಿ ರೂ. ಅನುದಾನಕ್ಕೆ ಮನವಿ

ಮೈಸೂರು: ನಗರ ಹಾಗೂ ಗ್ರಾಮಾಂತರ ಪ್ರದೇಶದ ಕುಡಿಯುವ ನೀರಿನ ಯೋಜನೆಗಳಿಗೆ ಬಜೆಟ್‌ನಲ್ಲಿ 150 ಕೋಟಿ ರೂ. ಅನುದಾನ ನೀಡುವಂತೆ ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ ಸಲ್ಲಿಸಿದರು.

ಬೆಂಗಳೂರಿನ ಗೃಹ ಕಚೇರಿಯಲ್ಲಿ ಮುಖ್ಯಮಂತ್ರಿಯನ್ನು ಭೇಟಿಯಾಗಿ ಮನವಿ ಸಲ್ಲಿಸಿ ಅವರು, ಮೈಸೂರು ಜಿಲ್ಲೆಯ ವರುಣ, ಚಾಮುಂಡೇಶ್ವರಿ, ನಂಜನಗೂಡು, ಎಚ್.ಡಿ.ಕೋಟೆ ಕ್ಷೇತ್ರ ವ್ಯಾಪ್ತಿಯ ಬಹುಗ್ರಾಮ ಕುಡಿಯವ ನೀರು ಯೋಜನೆ, ಶ್ರೀರಾಂಪುರ, ಕಡಕೊಳ, ಬೋಗಾದಿ ಪಟ್ಟಣ ಪಂಚಾಯಿತಿ ಸೇರಿದಂತೆ ನಗರದ ಹೊರ ವಲಯದ ಬಡಾವಣೆಗಳಿಗೆ ಕಬಿನಿ 2 ಮತ್ತು 3ನೇ ಹಂತದ ಯೋಜನೆ ಬೇಕಿದೆ. ಹಾಗಾಗಿ ಯೋಜನೆ ಅನುಷ್ಠಾನಕ್ಕೆ ಅಗತ್ಯ ಇರುವ ಅನುದಾನ ನೀಡುವಂತೆ ಕೋರಿದರು.