ಬಸನಾಳ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆ ಕೊಠಡಿಗಳನ್ನು ದುರಸ್ತಿಗೊಳಿಸುವಂತೆ ಒತ್ತಾಯಿಸಿ ಶಾಲಾ ವಿದ್ಯಾರ್ಥಿಗಳು ಗ್ರಾಪಂ ಪಿಡಿಒಗೆ ಮನವಿ ಸಲ್ಲಿಸಿದರು. ಅಕ್ಷತಾ ಪೂಜಾರಿ, ಸಾನಿಯಾ ಬಸನಾಳ, ಅಶ್ವಿನಿ ಮೆಟಗಾರ ಮತ್ತಿತರರಿದ್ದಾರೆ. 
ಜಿಲ್ಲೆ

ಬಸನಾಳ ಶಾಲೆ ದುರಸ್ತಿಗೆ ಮನವಿ

ವಿಜಯಪುರ: ತಾಲೂಕಿನ ಬಸನಾಳ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆ ಕೊಠಡಿಗಳನ್ನು ದುರಸ್ತಿಗೊಳಿಸುವಂತೆ ಒತ್ತಾಯಿಸಿ ಶಾಲಾ ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಇತ್ತೀಚೆಗೆ ಬಸನಾಳ ಗ್ರಾ.ಪಂ.ಪಿಡಿಒಗೆ ಮನವಿ ಸಲ್ಲಿಸಿದ್ದಾರೆ.

ಶಾಲೆಯಲ್ಲಿರುವ ಎರಡು ಕೊಠಡಿಗಳು ಶಿಥಿಲಗೊಂಡಿದ್ದು, ಕುಸಿದು ಬೀಳುವ ಪರಿಸ್ಥಿತಿಯಲ್ಲಿವೆ. ಅದನ್ನು ಕೂಡಲೇ ದುರಸ್ತಿ ಮಾಡಿ ವಿದ್ಯಾಭ್ಯಾಸಕ್ಕೆ ಅನುಕೂಲ ಕಲ್ಪಿಸಬೇಕು. ನಮ್ಮ ಗ್ರಾಮದಲ್ಲಿ ಇರುವುದು ಒಂದೇ ಶಾಲೆ. ಕೊಠಡಿಗಳು ಕುಸಿದು ಅನಾಹುತ ಸಂಭವಿಸುವ ಮುನ್ನವೇ ಹೊಸ ಕೊಠಡಿಗಳನ್ನು ನಿರ್ಮಿಸುವಂತೆ ಮನವಿಯಲ್ಲಿ ವಿನಂತಿಸಲಾಗಿದೆ.

ಅಕ್ಷತಾ ಪೂಜಾರಿ, ಸಾನಿಯಾ ಬಸನಾಳ, ಅಶ್ವಿನಿ ಮೆಟಗಾರ, ರಕ್ಷಿತಾ ಮಣೂರ, ಶ್ರೀದೇವಿ ಬಗಲಿ, ಋತುಜಾ ಪೂಜಾರಿ, ಐಶ್ವರ್ಯ ಖರಾತ, ರಾಧಿಕಾ ಬರಲಿ, ಅನಿಲ ಮಣೂರ, ಕಾರ್ತಿಕ ಬೆನಕನಹಳ್ಳಿ, ಸೋಮಶಂಕರ ಪೂಜಾರಿ, ಸಚಿನ್ ಸಾವುಕಾರ, ಅಶೋಕ ಐಹೊಳ್ಳಿ, ಸಂಗಮೇಶ ಬಗಲಿ, ಮಲ್ಲಿಕಾರ್ಜುನ ಪೂಜಾರಿ, ವಿಠಲ ಬಗಲಿ, ಇನಾಯತ್ ವಾಲಿಕಾರ, ಆನಂದ ರಾಠೋಡ ಮತ್ತಿತರರಿದ್ದರು.