ಹುಬ್ಬಳ್ಳಿ: ರೈಲ್ವೆ ರಾಜ್ಯ ಸಚಿವ ವಿ. ಸೋಮಣ್ಣ ಅವರು ಸೋಮವಾರ ಬೆಳಗ್ಗೆ ಹುಬ್ಬಳ್ಳಿಯಲ್ಲಿ ಶಾಸಕರಾದ ಮಹೇಶ ಟೆಂಗಿನಕಾಯಿ ಹಾಗೂ ಅರವಿಂದ ಬೆಲ್ಲದ ಅವರೊಂದಿಗೆ ರೈಲ್ವೆ ವಿಷಯಗಳ ಕುರಿತು ಅನೌಪಚಾರಿಕವಾಗಿ ಚರ್ಚೆ ನಡೆಸಿದರು.
ಹುಬ್ಬಳ್ಳಿಯಿಂದ ಜೋಧಪುರ ಮತ್ತು ಅಹ್ಮದಾಬಾದ್ಗೆ ರೈಲು ಪ್ರಾರಂಭಗೊಳ್ಳಲಿದ್ದು, ಮತ್ತಷ್ಟು ರೈಲುಗಳ ಸಂಚಾರ ಪ್ರಾರಂಭಿಸಬೇಕು. ಉತ್ತರ ಭಾರತದ ಪ್ರಮುಖ ನಗರಗಳನ್ನು ಸಂರ್ಪಸುವಂತೆ ಮತ್ತಷ್ಟು ರೈಲುಗಳ ಸಂಚಾರ ಪ್ರಾರಂಭಿಸಬೇಕೆಂದು ಇದೇ ಸಂದರ್ಭದಲ್ಲಿ ಇಬ್ಬರೂ ಶಾಸಕರು ಮನವಿ ಮಾಡಿದರು.
ಧಾರವಾಡ-ಬೆಳಗಾವಿ ನೇರ ರೈಲು ಮಾರ್ಗ ಕಾಮಗಾರಿ ವಿಳಂಬವಾಗುತ್ತಿದ್ದು, ವೇಗ ನೀಡುವಂತೆ ಆಗ್ರಹಿಸಿದರು. </p><p>ನಂತರ ಸಚಿವ ವಿ. ಸೋಮಣ್ಣ ಅವರು ಧಾರವಾಡದಿಂದ ರೈಲಿನಲ್ಲಿ ವಿಂಡೋ ಇನಸ್ಪೆಕ್ಷನ್ ಮಾಡುತ್ತ ಬೆಳಗಾವಿಗೆ ತೆರಳಿದರು.