ಜಿಲ್ಲೆ

ಬಾಲಕಿ ಸಾವಿನ ಬಗ್ಗೆ ತನಿಖೆ ನಡೆಸುವಂತೆ ಮನವಿ

ಕಾರವಾರ: ನಗರದ ಬಾಲಕಿಯರ ಬಾಲಮಂದಿರದಲ್ಲಿ ಇತ್ತೀಚೆಗೆ ಬಾಲಕಿ ಆತ್ಮಹತ್ಯೆ ಪ್ರಕರಣವನ್ನು ತನಿಖೆ ನಡೆಸಬೇಕು ಎಂದು ಕಾರವಾರ ತಾಲೂಕು ಭಂಡಾರಿ ಸಮಾಜೋನ್ನತಿ ಸಂಘದ ಸದಸ್ಯರು ಜಿಲ್ಲಾಧಿಕಾರಿ ಕೆ.ಲಕ್ಷ್ಮೀಪ್ರಿಯಾ ಅವರಿಗೆ ಸೋಮವಾರ ಮನವಿ ಸಲ್ಲಿಸಿದರು.

ಕೋಡಿಬಾಗದ ವಿದ್ಯಾರ್ಥಿನಿಯಾಗಿದ್ದು, ಆಕೆಗೆ ತಂದೆ ಇಲ್ಲ. ತಾಯಿಗೆ ನಾಲ್ವರು ಮಕ್ಕಳಿದ್ದಾರೆ. ಆಕೆ, ಕೂಲಿ ಮಾಡಿ ಮಕ್ಕಳನ್ನು ಸಾಕುತ್ತಿದ್ದಳು ಹಾಗಾಗಿ ಮಗಳನ್ನು ಬಾಲಕಿಯರ ಬಾಲ ಮಂದಿರದಲ್ಲಿ ಬಿಟ್ಟಿದ್ದಳು. ಆದರೆ, ಮಾರ್ಚ್ 6 ರಂದು ವಿದ್ಯಾರ್ಥಿನಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.

ಆಕೆಯ ಸಾವಿನ ಬಗ್ಗೆ ತನಿಖೆ ನಡೆಸುವಂತೆ ತಾಯಿ ಶಹರ ಠಾಣೆಯಲ್ಲಿ ದೂರು ನೀಡಿದ್ದಾಳೆ. ಇದುವರೆಗೂ ಬಾಲಕಿಯರ ಬಾಲ ಮಂದಿರದ ಯಾರ ಮೇಲೂ ಇದುವರೆಗೂ ಕ್ರಮವಾಗಿಲ್ಲ. ಈ ಹಿನ್ನೆಲೆಯಲ್ಲಿ ತನಿಖೆ ನಡೆಸುವಂತೆ ಮನವಿ ಮಾಡಲಾಯಿತು.

ಸಮಾಜೊನ್ನತಿ ಸಮಿತಿಯ ಅಧ್ಯಕ್ಷ ಮೋಹನ ಕಿಂದಳಕರ್, ನಗರಸಭೆ ಅಧ್ಯಕ್ಷ ರವಿರಾಜ ಅಂಕೋಲೆಕರ್, ಸದಸ್ಯರಾದ ಮುನ್ನಾ ರೇವಂಡಿಕರ್, ಸಮೀರ ನಾಯ್ಕ, ಪ್ರವೀಣ ಮಾಜ್ರೇಂಕರ್, ವಿಜು ಕಾಂಬಳೆ, ಮಹೇಶ್ ತಮ್ಸೆ, ದಿನೇಶ ನಾಯ್ಕ, ಸಾಯಿಕಿರಣ ಬಾಬ್ರೇಕರ್, ಸದಾನಂದ ಮಾಂಜ್ರೇಕರ, ರೋಹಿದಾಸ್ ವೈಂಗಣಕರ್, ಪ್ರಕಾಶ್ ಪೆಡ್ನೇಕರ್, ಸಂತು ಕಲ್ಗೂಡ್ಕರ್ ಸತೀಶ್ ಕೊಳಂಕರ್ ಸುಹಾನಿ ಪಾಟೀಲ, ಸ್ನೇಹಾ ಮಾಂಜ್ರೇಕರ, ಮೀನಾಕ್ಷಿ ಕಲಗುಟ್ಕರ, ಭಾರತಿ ಪಡೋಳೆಕರ್, ಪ್ರಮೀಳಾ ರೇವಂಡಿಕರ್ ಇತರರು ಇದ್ದರು.