ಜಿಲ್ಲೆ

ಎಸ್​ಸಿಎಸ್​ಪಿ&ಟಿಎಸ್​ಪಿ ಕಾಯ್ದೆ ಸಮಗ್ರ ಜಾರಿಗೊಳಿಸಲು ಮನವಿ

ಗಿರೀಶ ಸಗರ

ವಿಜಯಪುರ:ಪರಿಶಿಷ್ಟರ ಹಣ ಪರಿಶಿಷ್ಟರಿಗೆ ಮಾತ್ರ ಕಾಯ್ದೆ ಸಮರ್ಪಕ ಜಾರಿಗೆ ಒತ್ತಾಯಿಸಿ ಕರ್ನಾಟಕ ದಲಿತ ಸಂರ್ಷ ಸಮಿತಿ(ಪ್ರೊ. ಬಿ. ಕೃಷ್ಣಪ್ಪ ಸ್ಥಾಪಿತ)ಯ ಜಿಲ್ಲಾ ಸಮಿತಿ ಪದಾಧಿಕಾರಿಗಳು ಗುರುವಾರ ಪ್ರತಿಭಟನಾ ಮೆರವಣಿಗೆ ನಡೆಸಿ ಜಿಲ್ಲಾಧಿಕಾರಿ ಕಚೇರಿಗೆ ಮನವಿ ಸಲ್ಲಿಸಿದರು.

ಸಮಿತಿ ಜಿಲ್ಲಾ ಸಂಚಾಲಕ ಅಶೋಕ ಚಲವಾದಿ ಮಾತನಾಡಿ, ಎಸ್​ಸಿಎಸ್​ಪಿ&ಟಿಎಸ್​ಪಿ ಕಾಯ್ದೆ 2013 ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಜನರು ಆರ್ಥಿಕವಾಗಿ ಹಾಗೂ ಶೈಕ್ಷಣಿಕವಾಗಿ ಅಭಿವೃದ್ಧಿ ಅವಕಾಶಗಳನ್ನು ಶಾಸನಬದ್ಧವಾಗಿ ಹೊಂದಲು ರಾಜ್ಯ ಸರ್ಕಾರಗಳು ಕಾಯ್ದೆ ರೂಪಿಸಿದೆ.

ಈ ಕಾಯ್ದೆಯಡಿ ನಿಗದಿಪಡಿಸಿದ ಅನುದಾನವನ್ನು ಅನ್ಯ ಉದ್ದೇಶಗಳಿಗೆ ಬಳಸಿಕೊಂಡು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳನ್ನು ಸರ್ಕಾರಗಳು ವಂಚಿಸುತ್ತಿದ್ದು, ಆದ್ದರಿಂದ ಕಾಯ್ದೆಯ 7ಡಿ ಮತ್ತು 7ಸಿ ಕಲಂಗಳನ್ನು ರದ್ದು ಪಡಿಸುವಂತೆ ಹಲವು ದಲಿತರ ಹೋರಾಟಗಳ ಫಲದಿಂದ 7ಡಿ ರದ್ದು ಮಾಡಿ 7ಸಿಯನ್ನು ಯಥಾಪ್ರಕಾರ ಉಳಿಸಿಕೊಂಡು ಅನ್ಯ ಕಾರ್ಯಗಳಿಗೆ ಬಳಸುತ್ತಿದೆ ಎಂದು ದೂರಿದರು.

ಸರ್ಕಾರ ಕೂಡಲೇ ಪರಿಶಿಷ್ಟರ ಮೀಸಲು ಹಣವನ್ನು ಅನ್ಯ ಕಾರ್ಯಗಳಿಗೆ ಬಳಸಿರುವ ಹಣ ವಾಪಸ್​ ಪಡೆದು ಪರಿಶಿಷ್ಟ ಅಭಿವೃದ್ಧಿಗಾಗಿ ಉಪಯೋಗಿಸಬೇಕೆಂದು ಒತ್ತಾಯಿಸಿದರು. 38 ಇಲಾಖೆಗಳಲ್ಲಿರುವ ಬ್ಯಾಕ್​ ಲಾಗ್​ ಹುದ್ದೆಗಳನ್ನು ಕಾಲ ಕಾಲಕ್ಕೆ ತುಂಬುವ ಮೂಲಕ ದಲಿತರ ಏಳಿಗೆಗಾಗಿ ಶ್ರಮಿಸುವಂತೆ ಆಗ್ರಹಿಸಿದರು.

ರಾಜ್ಯ ಸಂಚಾಲಕ ರಮೇಶ ಆಸಂಗಿ ಮಾತನಾಡಿದರು. ಸಮಿತಿ ವಿನಾಯಕ ಗುಣಸಾಗರ, ಶರಣು ಶಿಂದೆ, ಪ್ರಕಾಶ ಗುಡಿಮನಿ, ಪರಶುರಾಮ ದಿಂಡವಾರ, ಲಕ್ಕಪ್ಪ ಬಡಿಗೇರ, ಅನಿಲ ಕೊಡತೆ, ಸುರೇಶ ನಡಗಡ್ಡಿ, ರೇಣಕಾ ಮಾದರ, ಯಶೋದಾ, ಸುಭದ್ರ ಮೇಲಿನಮನಿ, ಚಂದ್ರಕಲಾ ಮಸಳಿಕೇರಿ, ಬಿ.ಎಸ್​. ತಳವಾರ, ರಾಜು ತೋರವಿ ಮತ್ತಿತರರಿದ್ದರು.

ಪರಿಶಿಷ್ಟರ ಹಣ ಪರಿಶಿಷ್ಟರಿಗೆ ಮಾತ್ರ ಕಾಯ್ದೆಯ ಸಮರ್ಪಕ ಜಾರಿಗೆ ಒತ್ತಾಯಿಸಿ ವಿಜಯಪುರದಲ್ಲಿ ಕರ್ನಾಟಕ ದಲಿತ ಸಂರ್ಷ ಸಮಿತಿ (ಪ್ರೊ. ಬಿ. ಕೃಷ್ಣಪ್ಪ ಸ್ಥಾಪಿತ) ಯ ಪದಾಧಿಕಾರಿಗಳು ಅಪರ ಜಿಲ್ಲಾಧಿಕಾರಿ ಸೋಮಲಿಂಗ ಗೆಣ್ಣೂರ ಅವರಿಗೆ ಮನವಿ ಸಲ್ಲಿಸಿದರು. ಅಶೋಕ ಚಲವಾದಿ, ರಮೇಶ ಆಸಂಗಿ, ರೇಣಕಾ ಮಾದರ ಮತ್ತಿತರರಿದ್ದಾರೆ.