ಜಿಲ್ಲೆ

ಲೈನ್‌ಮನ್‌ಗಳ ನೇಮಕಕ್ಕೆ ಮನವಿ

ಸುಳ್ಯ: ಮೆಸ್ಕಾಂ ಜನಸಂಪರ್ಕ ಸಭೆಯಲ್ಲಿ ಜಾಲ್ಸೂರು ಸೆಕ್ಷನ್, ಮಂಡೆಕೋಲು ಗ್ರಾಮದ ವಿದ್ಯುತ್ ಸಮಸ್ಯೆ ಬಗ್ಗೆ ಕಾಯಂ ಲೈನ್‌ಮನ್‌ಗಳನ್ನು ನೇಮಿಸುವಂತೆ ಆಗ್ರಹಿಸಿ ಮೆಸ್ಕಾಂ ಕಾರ್ಯನಿರ್ವಾಹಕ ಅಭಿಯಂತಗೆ ವಿದ್ಯುತ್ ಬಳಕೆದಾರರ ವೇದಿಕೆ ವತಿಯಿಂದ ಮನವಿ ಸಲ್ಲಿಸಲಾಯಿತು.

ಮುಂದಿನ ಎರಡು ತಿಂಗಳೊಳಗೆ ಲೈನ್‌ಮನ್‌ಗಳ ಸಮಸ್ಯೆ ಪರಿಹರಿಸುವುದಾಗಿ ಅಧಿಕಾರಿಗಳು ಆಶ್ವಾಸನೆ ನೀಡಿದ್ದಾರೆ.ಪ್ರಮುಖರಾದ ಸುರೇಶ್ ಕಣೆಮರಡ್ಕ, ಶಿವಪ್ರಸಾದ್ ಉಗ್ರಾಣಿಮನೆ, ಬಾಲಚಂದ್ರ ದೇವರಗುಂಡ, ಚಂದ್ರಜಿತ್ ಮಾವಂಜಿ, ಅನಿಲ್ ತೋಟಪ್ಪಾಡಿ, ಪ್ರಖ್ಯಾತ್ ವಾಗ್ಲೆ, ನವೀನ್ ಮುರೂರು, ಪ್ರೀತೇಶ್ ಕಣೆಮರಡ್ಕ, ಲೋಕೇಶ್ ದೇವರಗುಂಡ ಉಪಸ್ಥಿತರಿದ್ದರು.