ಲಕ್ಷೆ್ಮೕಶ್ವರ: ಪುರಸಭೆಯು ಹೊರಗುತ್ತಿಗೆ ಆಧಾರದ ಮೇಲೆ ತನ್ನ ಮಗನಿಗೆ ಉದ್ಯೋಗ ಕೊಡಬೇಕು ಎಂದು ಆಗ್ರಹಿಸಿ ಸುರೇಶ ಬಸವನಾಯ್ಕರ ಎಂಬಾತ ಮೈ ಕೈಗೆ ಸಗಣಿ ಬಳಿದುಕೊಂಡು ಬುಧವಾರ ಪ್ರತಿಭಟನೆ ನಡೆಸಿರುವ ಕ್ರಮ ಖಂಡಿಸಿ ಮತ್ತು ಆತನ ವಿರುದ್ಧ ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿ ಗುರುವಾರ ಪೌರಕಾರ್ವಿುಕರ ಸಂಘದ ಅಧ್ಯಕ್ಷ ಬಸವಣ್ಣೆಪ್ಪ ನಂದೆಣ್ಣವರ ನೇತೃತ್ವದಲ್ಲಿ ಪೌರ ಕಾರ್ವಿುಕರು ಮುಖ್ಯಾಧಿಕಾರಿ ಮೂಲಕ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಲಾಯಿತು.
ಬಸವಣ್ಣೆಪ್ಪ ನಂದೆಣ್ಣವರ ಮಾತನಾಡಿ, ಸುರೇಶ ಬಸವನಾಯ್ಕರ ಎನ್ನುವ ವ್ಯಕ್ತಿ ಪುರಸಭೆಯಲ್ಲಿ ಪೌರಕಾರ್ವಿುಕ, ಸಫಾಯಿ ಕರ್ಮಚಾರಿಯಾಗಿ ಕೆಲಸ ಮಾಡಿಲ್ಲ. ಆದರೂ ಯಾರದ್ದೋ ಕುಮ್ಮಕ್ಕು ಮತ್ತು ದುರುದ್ದೇಶದಿಂದ ಕುಡಿದ ಮತ್ತಿನಲ್ಲಿ ಅಸಂಬದ್ಧ ರೀತಿಯಲ್ಲಿ ವರ್ತಿಸಿದ್ದಾನೆ. ತನ್ನ ಮಗನಿಗೆ ಪುರಸಭೆಯಲ್ಲಿ ಹೊರ ಗುತ್ತಿಗೆ ಆಧಾರದ ಮೇಲೆ ಕೆಲಸ ನೀಡುವಂತೆ ಪುರಸಭೆ ಆಡಳಿತ ಮಂಡಳಿಗಾಗಲಿ ಅಥವಾ ಮುಖ್ಯಾಧಿಕಾರಿಗಾಗಲಿ ಮನವಿಯನ್ನೂ ಮಾಡದೇ ಸುಳ್ಳು ಆರೋಪ ಮಾಡಿದ್ದಾನೆ. ಆತನ ವಿರುದ್ಧ ಜಿಲ್ಲಾಧಿಕಾರಿ ಮತ್ತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಶಿಸ್ತು ಕ್ರಮ ಜರುಗಿಸಬೇಕು ಎಂದರು.
ಮನವಿ ಸ್ವೀಕರಿಸಿದ ಮುಖ್ಯಾಧಿಕಾರಿ ಮಹಾಂತೇಶ ಬೀಳಗಿ ಮಾತನಾಡಿ, ಈ ವ್ಯಕ್ತಿ ತನ್ನ ಬೇಡಿಕೆ, ಪ್ರತಿಭಟನೆ ಬಗ್ಗೆ ಕಿಂಚಿತ್ತೂ ಮಾಹಿತಿ ನೀಡಿಲ್ಲ. ಈ ಕುರಿತು ಜಿಲ್ಲಾಧಿಕಾರಿಗೆ ಮಾಹಿತಿ ಸಲ್ಲಿಸಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದರು.
ಪುರಸಭೆ ಉಪಾಧ್ಯಕ್ಷ ಫಿದೋಷ ಆಡೂರ, ಸದಸ್ಯರಾದ ರಾಮಪ್ಪ ಗಡದವರ, ಪ್ರಕಾಶ ಕೊಂಚಿಗೇರಿಮಠ, ಫಕೀರೇಶ ನಂದೆಣ್ಣವರ, ದೇವೇಂದ್ರಪ್ಪ ನಂದೆಣ್ಣವರ, ರಾಜು ನಂದೆಣ್ಣವರ, ಅನೀಲ ನಂದೆಣ್ಣವರ, ಮಂಜುನಾಥ ಬಸವನಾಯ್ಕರ್, ಮಂಜುನಾಥ ಹಾದಿಮನಿ, ರಮೇಶ ಕೊಣ್ಣೂರ, ಚನ್ನಪ್ಪ ಶಿರಹಟ್ಟಿ, ವಿಶ್ವನಾಥ ಹಾದಿಮನಿ, ಮಂಜುನಾಥ ಅಯ್ಯನವರ, ಅಶೋಕ ನಡುಗೇರಿ, ಪ್ರಕಾಶ ಹಿತ್ತಲಮನಿ ಹಾಗೂ ಪೌರಕಾರ್ವಿುಕರು ಇದ್ದರು.