ಜಿಲ್ಲೆ

ಶಿಕ್ಷಕರ ಸಮಸ್ಯೆಗಳನ್ನು ಬಗೆಹರಿಸಲು ಒತ್ತಾಯಿಸಿ ಮನವಿ

ಆರ್.ಕೃಷ್ಣ

ಮೈಸೂರು: ಹೆಚ್ಚುವರಿ ಶಿಕ್ಷಕರ ಸಮಸ್ಯೆಗಳು ಮತ್ತು ಶಿಕ್ಷಕರ ಇತರ ಸಮಸ್ಯೆಗಳನ್ನು ಬಗೆಹರಿಸುವಂತೆ ಒತ್ತಾಯಿಸಿ ಮೈಸೂರು ತಾಲೂಕು ಶಿಕ್ಷಕರ ಸಂಘದಿಂದ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.

ಈ ಸಂದರ್ಭದಲ್ಲಿ ಮಾತನಾಡಿದ ಶಿಕ್ಷಕರ ಸಂಘದ ಅಧ್ಯಕ್ಷ ಡಿ.ಮಾಲೇಗೌಡ ಅವರು, ಅವೈಜ್ಞಾನಿಕವಾದ ಶಿಕ್ಷಕರ ಮರು ಹೊಂದಾಣಿಕೆಯನ್ನು ಕೈ ಬಿಟ್ಟು ಶಾಲಾ ಕರ್ತವ್ಯ ಮಾಡಲು ಅನುವು ಮಾಡಿಕೊಡಬೇಕು. ಹೆಚ್ಚುವರಿ ಶಿಕ್ಷಕರನ್ನು ತಾಲೂಕಿನಲ್ಲೇ ಸ್ಥಳ ನಿಯುಕ್ತಿಗೊಳಿಸಬೇಕು ಎಂದು ಒತ್ತಾಯಿಸಿದರು.

ಮನವಿ ಸ್ವೀಕರಿಸಿ ಮಾತನಾಡಿದ ಬಿಇಒ ಪ್ರಕಾಶ್, ಶಿಕ್ಷಕರ ಸಮಸ್ಯೆಗಳನ್ನು ಸಕಾರಾತ್ಮಕವಾಗಿ ಸ್ಪಂದಿಸುವುದಾಗಿ ಭರವಸೆ ನೀಡಿದರು.

ಸಂಘದ ಉಪಾಧ್ಯಕ್ಷ ಶಿವಪ್ಪ, ಪ್ರಧಾನ ಕಾರ್ಯದರ್ಶಿ ಸುಮತಿ, ಖಜಾಂಚಿ ಅಶೋಕ್, ನೌಕರರ ಸಂಘದ ನಿರ್ದೇಶಕರಾದ ಮಾಲಂಗಿ ಸುರೇಶ, ರಘು, ಮಹದೇವ, ನಿರ್ದೇಶಕರಾದ ವೆಂಕಟೇಶ್, ಮಲ್ಲಣ್ಣ, ಶಿವಲಿಂಗರಾಜು, ಸುರೇಶ ರೇಣುಕಾ, ಅನಿಲಕುಮಾರ್, ಮಹೇಶ್ ಜಿ.ಗಣೇಶ್, ರಮೇಶ್, ಕೆ.ಜೆ.ಕುಮಾರ್, ಶಿವಣ್ಣ ಇತರರು ಇದ್ದರು.