ತೇರದಾಳ: ಪಿಕೆಪಿಎಸ್ ಪ್ರತ್ಯೇಕ ಕ್ಷೇತ್ರ ವಿಂಗಡನೆಗೆ ಒತ್ತಾಯಿಸಿ ಶಾಸಕ ಸಿದ್ದು ಸವದಿ ಅವರಿಗೆ ಮನವಿ ಸಲ್ಲಿಸಲಾಯಿತು. ಸಾಗರ ಚವಜ, ಪುಷ್ಪದಂತ ದಾನಿಗೊಂಡ, ಮಗೆಪ್ಪ ದೇಸಾಯಿ ಅನೇಕರಿದ್ದರು. 
ಜಿಲ್ಲೆ

ಪಿಕೆಪಿಎಸ್ ಕ್ಷೇತ್ರ ವಿಂಗಡನೆಗೆ ಒತ್ತಾಯಿಸಿ ಮನವಿ

ತೇರದಾಳ: ನೂತನ ತಾಲೂಕು ಕೇಂದ್ರ ಆಗಿರುವ ತೇರದಾಳ ತಾಲೂಕಿಗೆ ಪ್ರಾಥಮಿಕ ಕಷಿ ಪತ್ತಿನ ಸಹಕಾರಿ ಸಂಘಗಳ ಪ್ರತ್ಯೇಕ ಕ್ಷೇತ್ರ ವಿಂಗಡನೆ ಮಾಡಬೇಕೆಂದು ಒತ್ತಾಯಿಸಿ ತಾಲೂಕಿನ ಪಿಕೆಪಿಎಸ್ ಬ್ಯಾಂಕುಗಳ ಆಡಳಿತ ಮಂಡಳಿಯವರು ಡಿಸಿಸಿ ಬ್ಯಾಂಕ್ ಅಧ್ಯಕ್ಷ ಅಜಯಕುಮಾರ ಸರನಾಯಕ, ನಿರ್ದೇಶಕ ಶಾಸಕ ಸಿದ್ದು ಸವದಿ ಹಾಗೂ ಕಾಂಗ್ರೆಸ್ ಮುಖಂಡ ಸಿದ್ದು ಕೊಣ್ಣೂರ ಅವರಿಗೆ ಮನವಿ ಸಲ್ಲಿಸಿದರು.

ತಾಲೂಕಿಗೊಂದು ಪಿಕೆಪಿಎಸ್ ಕ್ಷೇತ್ರ ಮಾಡಲಾಗಿದೆ. ಅದರಂತೆ ಈಗ ಏಳು ಹಳ್ಳಿಗಳನ್ನು ಒಳಗೊಂಡು ತೇರದಾಳ ತಾಲೂಕು ಪ್ರತ್ಯೇಕವಾಗಿದೆ. ತೇರದಾಳ ತಾಲೂಕಿಗೆ ಪ್ರತ್ಯೇಕವಾಗಿ ಕ್ಷೇತ್ರ ವಿಂಗಡನೆ ಮಾಡುವುದರಿಂದ ಈ ಭಾಗದ ಒಬ್ಬ ಪ್ರತಿನಿ ಆಯ್ಕೆಗೊಳ್ಳಲು ಸಹಕಾರಿ ಆಗುತ್ತದೆ. ಮತ್ತು ರೈತರಿಗೆ ಹೆಚ್ಚಿನ ಸೌಲಭ್ಯಗಳನ್ನು ಒದಗಿಸಲು ಸಹಕಾರಿ ಆಗುತ್ತದೆ.

ಆದ್ದರಿಂದ ಜಿಲ್ಲಾ ಸಹಕಾರಿ ಬ್ಯಾಂಕಿನವರು ಕೂಡಲೇ ಈ ಬಗ್ಗೆ ಅಗತ್ಯ ಕ್ರಮ ಕೈಗೊಂಡು ತೇರದಾಳ ತಾಲೂಕಿನ ಪ್ರಾಥಮಿಕ ಕಷಿ ಪತ್ತಿನ ಸಹಕಾರಿ ಸಂಘಗಳಿಗೆ ಹಾಗೂ ರೈತರಿಗೆ ಅನುಕೂಲ ಕಲ್ಪಿಸಬೇಕೆಂದು ತೇರದಾಳ ತಾಲೂಕು ಪಿಕೆಪಿಎಸ್‌ಗಳ ಅಧ್ಯಕ್ಷರಾದ ಸಾಗರ ಚವಜ, ರಮೇಶ ಕಿತ್ತೂರ, ಪುಷ್ಪದಂತ ದಾನಿಗೊಂಡ, ಮಗೆಪ್ಪ ದೇಸಾಯಿ, ಸುನೀಲ ಆಳಗೊಂಡ, ಲಕ್ಕಪ್ಪ ಪಾಟೀಲ, ಸುರೇಶ ಅಕ್ಕಿವಾಟ, ಅಲ್ಲಪ್ಪ ಅರೆನಾಡ, ಪುಂಡಲೀಕ ಹಾಡಕರ, ಮಾರುತಿ ರೇಳೇಕರ, ಸಿದ್ದಾಪುರ, ಮಹಾವೀರ ಬಿಲವಡಿ ಇನ್ನಿತರಿದ್ದರು.