ಹುನಗುಂದ ತಹಸೀಲ್ದಾರ್ ಕಚೇರಿ ಸಭಾಭವನದಲ್ಲಿ ನಡೆದ ಹಡಪದ ಅಪ್ಪಣ್ಣ ಜಯಂತಿ ಕಾರ್ಯಕ್ರಮದಲ್ಲಿ ತಹಸೀಲ್ದಾರ್ ನಿಂಗಪ್ಪ ಬಿರಾದಾರ ಮಾತನಾಡಿದರು. ಗ್ರೇಡ್-2 ತಹಸೀಲ್ದಾರ್ ಮಹೇಶ ಸಂದಿಗವಾಡ, ಹಡಪದ ಸಮಾಜದ ತಾಲೂಕು ಅಧ್ಯಕ್ಷ ಅಮರೇಶ ನಂದವಾಡಗಿ ಇದ್ದರು. 
ಜಿಲ್ಲೆ

ಅಪ್ಪಣ್ಣನ ವಚನಗಳು ಮನುಕುಲದ ಉದ್ಧಾರಕ್ಕೆ ದಾರಿದೀಪ

ಹುನಗುಂದ: ಶಿವಶರಣ ಹಡಪದ ಅಪ್ಪಣ್ಣನವರ ವಚನಗಳು ಹಾಗೂ ಚಿಂತನೆಗಳು ಮನುಕುಲದ ಉದ್ಧಾರಕ್ಕೆ ದಾರಿದೀಪಗಳಾಗಿವೆ ಎಂದು ತಹಸೀಲ್ದಾರ್ ನಿಂಗಪ್ಪ ಬಿರಾದಾರ ಹೇಳಿದರು.

ಪಟ್ಟಣದ ತಹಸೀಲ್ದಾರ್ ಸಭಾಭವನದಲ್ಲಿ ತಾಲೂಕು ಆಡಳಿತದಿಂದ ಭಾನುವಾರ ನಡೆದ ಶಿವಶರಣ ಹಡಪದ ಅಪ್ಪಣ್ಣನವರ ಜಯಂತಿ ಕಾರ್ಯಕ್ರಮದಲ್ಲಿ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಅವರು ಮಾತನಾಡಿದರು.

ಹಡಪದ ಅಪ್ಪಣ್ಣ ಅವರು ಸಾಮಾಜಿಕ ಅಸಮಾನತೆ, ಅಸ್ಪಶ್ಯತೆ, ಜಾತಿ ವ್ಯವಸ್ಥೆ, ಕಂದಾಚಾರ, ಮೂಢನಂಬಿಕೆ ವಿರುದ್ಧ ಹೋರಾಡಿ ಸಮಾಜದಲ್ಲಿ ಕ್ರಾಂತಿಕಾರಕ ಬದಲಾವಣೆಗಳನ್ನು ತರಲು ತಮ್ಮ ವಚನಗಳ ಮೂಲಕ ಶ್ರಮಿಸಿದ್ದಾರೆ ಎಂದರು.

ಸಮಾಜದ ಮುಖಂಡ ಮಂಜುನಾಥ ಕಿರಸೂರ ಮಾತನಾಡಿ, ಸಮಾಜ ನಿರ್ಮಾಣಕ್ಕಾಗಿ ಶ್ರಮಿಸಿದ ಶರಣರು, ಸಂತರು, ದಾರ್ಶನಿಕರು ಯಾವುದೇ ಒಂದು ಜಾತಿಗೆ ಸೀಮಿತವಲ್ಲ. ಅನುಭವ ಮಂಟಪದಲ್ಲಿ ಬಸವಣ್ಣನವರ ಪ್ರಧಾನ ಕಾರ್ಯದರ್ಶಿಯಾಗಿ ಹಡಪದ ಅಪ್ಪಣ್ಣನವರು ಸೇವೆ ಸಲ್ಲಿಸಿದ್ದರು. ಕಾಯಕ ತತ್ವದಡಿ ಬದುಕು ರೂಪಿಸಿಕೊಳ್ಳುವುದೇ ಶರಣರ ಆಶಯವಾಗಿತ್ತು. ಆದ್ದರಿಂದ ಹಡಪದ ಅಪ್ಪಣ್ಣನವರ ವಚನಗಳನ್ನು ಪಠ್ಯಕ್ಕೆ ಸೇರಿಸಬೇಕೆಂದು ಎಂದು ತಿಳಿಸಿದರು.

ಗ್ರೇಡ್-2 ತಹಸೀಲ್ದಾರ್ ಮಹೇಶ ಸಂದಿಗವಾಡ, ಹಡಪದ ಸಮಾಜದ ತಾಲೂಕು ಅಧ್ಯಕ್ಷ ಅಮರೇಶ ನಂದವಾಡಗಿ, ಗೌರವ ಅಧ್ಯಕ್ಷ ನಗರ ಘಟಕ ಅಧ್ಯಕ್ಷ ಸಂಗಣ್ಣ ಹಡಪದ, ಸಮಾಜದ ಹಿರಿಯರಾದ ಮಹಾಂತೇಶ ಕೊಪ್ಪದ, ಬಸವಂತಪ್ಪ ಕಟ್ಟಿಮನಿ, ಶಿವಲಿಂಗಪ್ಪ ಮರೋಳ, ನಾಗಪ್ಪ ಹಡಪದ, ಶಿಕ್ಷಕರಾದ ಸಿ.ಎ್. ನಾವಿ, ಸಮೀರ ಸರಕಾವಸ, ಶಿವನಗೌಡ ನೇಗಲಿ ಇತರರಿದ್ದರು. ದೈಹಿಕ ಶಿಕ್ಷಕ ಎಸ್.ಟಿ. ಪೈಲ ನಿರೂಪಿಸಿ, ವಂದಿಸಿದರು.