ಯಾದಗೂಡ ಗ್ರಾಮದ ವಿವಿಧೋದ್ದೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘದ ಶತಮಾನೋತ್ಸವ ಕಾರ್ಯಕ್ರಮವನ್ನು ಗಣ್ಯರು ಉದ್ಘಾಟಿಸಿದರು. ಪಂಚಮಶಿವಲಿಂಗೇಶ್ವರ ಸ್ವಾಮೀಜಿ, ಬಿಡಿಸಿಸಿ ಬ್ಯಾಂಕ್ ಅಧ್ಯಕ್ಷ ರಮೇಶ ಕತ್ತಿ, ಶಾಸಕ ನಿಖಿಲ ಕತ್ತಿ, ರಾಜೇಂದ್ರ ಪಾಟೀಲ, ಕಲಗೌಡ ಪಾಟೀಲ ಇತರರು ಇದ್ದರು. 
ಜಿಲ್ಲೆ

ರಾಜಕೀಯ ರಹಿತ ಸೇವೆ ವರದಾನ

ರಾಘವೇಂದ್ರಗೌಡ ಭೀ ಪಾಟೀಲ್

ಹುಕ್ಕೇರಿ: ಪ್ರಜಾತಂತ್ರ ವ್ಯವಸ್ಥೆಯ ನಡುವೆ ಸಹಕಾರಿ ಸಂಘಗಳಲ್ಲಿ ರಾಜಕೀಯ ರಹಿತ, ಆರೋಗ್ಯಯುತ, ಸೇವೆಯಿಂದ ಸಂಸ್ಥೆಗಳು ಬೆಳೆಯಲು ಸಾಧ್ಯ ಎಂದು ಬಿಡಿಸಿಸಿ ಬ್ಯಾಂಕ್ ಅಧ್ಯಕ್ಷ ರಮೇಶ ಕತ್ತಿ ಹೇಳಿದರು.

ತಾಲೂಕಿನ ಯಾದಗೂಡ ಗ್ರಾಮದ ವಿವಿಧೋದ್ದೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘದ ಶತಮಾನೋತ್ಸವ ಹಾಗೂ ಆತ್ಮ ನಿರ್ಭರ ಭಾರತ ಯೋಜನೆಯಡಿ 90 ಲಕ್ಷ ರೂ. ವೆಚ್ಚದಲ್ಲಿ ನಿರ್ಮಿಸಿದ ಉಗ್ರಾಣ ಹಾಗೂ ರೈತ ಸೇವಾ ಕೇಂದ್ರ ಕಟ್ಟಡವನ್ನು ಗುರುವಾರ ಉದ್ಘಾಟಿಸಿ ಮಾತನಾಡಿದ ಅವರು,

ಯಾದಗೂಡ ಹಾಗೂ ಶೇಲಾಪುರ ಗ್ರಾಮದ 1,506 ರೈತ ಸದಸ್ಯರು ವಿವಿಧ ಯೋಜನೆಯಡಿ 13 ಕೋಟಿ ರೂ. ಲಾಭ ಪಡೆದುಕೊಂಡಿದ್ದಾರೆ. 1967ರಲ್ಲಿ ಕೇಂದ್ರ ಸರ್ಕಾರದ ಅನುದಾನದಲ್ಲಿ ಕಟ್ಟಡದ ಲಾಭ ಪಡೆದುಕೊಂಡ ಏಕೈಕ ಸಂಸ್ಥೆ ಮಾದರಿಯಾಗಿದೆ. ಕಲಿತವರಿಗಿಂತ ರೈತರು ದೇಶದ ಮತ್ತು ಜನರ ಅಭಿವೃದ್ಧಿಗೆ ಹಗಲಿರುಳು ಶ್ರಮಿಸುತ್ತಾರೆ ಎಂದರು. ಶಾಸಕ ನಿಖಿಲ ಕತ್ತಿ ಮಾತನಾಡಿ, ಸರ್ಕಾರದ ಯೋಜನೆಗಳು ಅಭಿವೃದ್ಧಿಗೆ ಬಳಕೆಯಾಗಲಿ ಎಂದರು. ನಿಡಸೋಸಿ ಸಿದ್ದಸಂಸ್ಥಾನ ಮಠದ ಪಂಚಮಶಿವಲಿಂಗೇಶ್ವರ ಸ್ವಾಮೀಜಿ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು.

ಅಧ್ಯಕ್ಷ ಅಲಗೌಡ ಪಾಟೀಲ ಮಾತನಾಡಿ, ಏರಿಳಿತದ ನಡುವೆ ಶತಮಾನೋತ್ಸವದ ಸಾಧನೆಗೆ ಗ್ರಾಮಸ್ಥರು, ಸಹಕಾರಿ ಸದಸ್ಯರ ಸಹಕಾರವೇ ಕಾರಣ ಎಂದರು. ಗ್ರಾಪಂ ಅಧ್ಯಕ್ಷೆ ಶ್ರೀದೇವಿ ಲೈನದಾರ, ಉಪಾಧ್ಯಕ್ಷ ಶಿವನಗೌಡ ಪಾಟೀಲ, ಸಂಗಮ ಸಕ್ಕರೆ ಕಾರ್ಖಾನೆ ಅಧ್ಯಕ್ಷ ರಾಜೇಂದ್ರ ಪಾಟೀಲ, ವಿದ್ಯುತ್ ಸಹಕಾರಿ ಸಂಘದ ಅಧ್ಯಕ್ಷ ಕಲಗೌಡ ಪಾಟೀಲ, ತಾಪಂ ಮಾಜಿ ಅಧ್ಯಕ್ಷ ಸತ್ಯಪ್ಪ ನಾಯಿಕ, ಪಿಕಾರ್ಡ್ ಬ್ಯಾಂಕ್ ಅಧ್ಯಕ್ಷ ದುರದುಂಡಿ ಪಾಟೀಲ, ಆಡಳಿತ ಮಂಡಳಿಯ ಉಪಾಧ್ಯಕ್ಷ ಸಂಗೀತಾ ಜನಮಟ್ಟಿ, ನಿರ್ದೇಶಕರಾದ ಮಹಾಂತೇಶ ಮಗೆಣ್ಣಿ, ರಾಜಗೌಡ ಪಾಟೀಲ, ಮಲ್ಲಪ್ಪ ಅರಳಿಮಟ್ಟಿ, ಬಾಜಿರಾವ ಕರೋಲಿ, ಮಾರುತಿ ಮಗೆಪ್ಪಗೋಳ, ಮಹಾರುದ್ರ ಖರಾಡಿ, ಸುವರ್ಣಾ ಪಾಟೀಲ, ಲಕ್ಮೀಬಾಯಿ ನಾವಲಗೇರ, ಬಾಲಚಂದ್ರ ಹಡಾಡಿ, ಬ್ಯಾಂಕ್ ನಿರೀಕ್ಷಕ ಮಂಜುನಾಥ ಹಡಾಡಿ, ಬಸವರಾಜ ಉತ್ತೂರಿ, ಕಾರ್ಯದರ್ಶಿ ಮಲ್ಲಪ್ಪ ಜನಮಟ್ಟಿ ಇತರರು ಇದ್ದರು.
ಅಶೋಕ ಮಗೆಣ್ಣಿ ಸ್ವಾಗತಿಸಿದರು. ಡಾ. ಎಂ.ಎಸ್.ಖರಾಡಿ ನಿರೂಪಿಸಿದರು. ಕಾರ್ಯದರ್ಶಿ ಮಲ್ಲಪ್ಪ ಜನಮಟ್ಟಿ ವಂದಿಸಿದರು.