ಬೇತಮಂಗಲ:ಕೆಜಿಎ್ ಶಾಸಕಿ ರೂಪಕಲಾ ಅವರ ಮಹತ್ವಾಕಾಂ ಯೋಜನೆಯಾಗಿರುವ ಎಪಿಎಂಸಿ ಮಾರುಕಟ್ಟೆ ಸ್ಥಾಪನೆಗಾಗಿ 25 ಎಕರೆಯಲ್ಲಿ ಕೈಗೊಂಡಿರುವ ಕಾಮಗಾರಿ ಸತತ 6 ತಿಂಗಳು ಕಳೆದರೂ ಕುಂಟುತ್ತ ಸಾಗಿದೆ. ಕಾಮಗಾರಿಗೆ ಅಡ್ಡಿಯಾಗಿದ್ದ ಬೃಹತ್ ಕಲ್ಲುಬಂಡೆಗಳನ್ನು ಒಡೆಯುವುದಕ್ಕೆ ಸೀಮಿತವಾಗಿದ್ದು, ಮುಂದಿನ ಹಂತದ ಕಾಮಗಾರಿಯ ಗತಿಯೇನು?,ಮುಂದೆ ಎದುರಾಗಲಿರುವ ಹಲವು ಅಡ್ಡಿ, ಆತಂಕಗಳನ್ನು ಎದುರಿಸಿ 3 ವರ್ಷಗಳ ಅವಧಿಯಲ್ಲಿ ಮಾರುಕಟ್ಟೆ ನಿರ್ಮಾಣದ ಕನಸು ನನಸಾಗಲಿದೆಯೇ ಎಂಬುದು ಯಕ್ಷಪ್ರಶ್ನೆಯಾಗಿದೆ.
ಆಂಧ್ರ ಗಡಿ ಭಾಗದ ಸರ್ಕಾರಿ ಭೂಮಿಯಲ್ಲಿ 6 ತಿಂಗಳ ಹಿಂದೆಯೇ ಎಪಿಎಂಸಿ ಮಾರುಕಟ್ಟೆ ನಿರ್ಮಾಣಕ್ಕೆ ಭೂಮಿಪೂಜೆ ನೆರವೇರಿಸಲಾಗಿದೆ. ಎನ್.ಜಿ.ಹುಲ್ಕೂರ್ ಗ್ರಾಂಪ ವ್ಯಾಪ್ತಿಯ ಕದರಿಗಾನಕುಪ್ಪ ಗ್ರಾಮದ ಸರ್ವೇ ನಂ.3ರಲ್ಲಿನ 20 ಎಕರೆ ಮತ್ತು ಎನ್.ಜಿ.ಹುಲ್ಕೂರು ಸರ್ವೇ ನಂ.71ರಲ್ಲಿ 5 ಎಕರೆ ಸೇರಿ ಒಟ್ಟು 25 ಎಕರೆಯಲ್ಲಿ 150 ಕೋಟಿ ರೂ. ವೆಚ್ಚದ ಸುಸಜ್ಜಿತ ಮಾರುಕಟ್ಟೆ ನಿರ್ಮಾಣಕ್ಕೆ ಶಾಸಕಿ ಚಾಲನೆ ನೀಡಿದ್ದಾರೆ.
ರೈತರನ್ನು ಆರ್ಥಿಕವಾಗಿ ಬಲಪಡಿಸುವ ಉದ್ದೇಶ: ವಾಣಿಜ್ಯ ಮಳಿಗೆ, ರೈತರು ಮತ್ತು ವ್ಯಾಪಾರಿಗಳಿಗೆ ವಹಿವಾಟು ನಡೆಸಲು ನೂರಾರು ಮಳಿಗೆಗಳು, ಆಡಳಿತ ಕಚೇರಿ, ರೈತರಿಗೆ ಮತ್ತು ವ್ಯಾಪಾರಿಗಳಿಗೆ ವಿಶ್ರಾಂತಿ ಗೃಹಗಳು, ಶೌಚಗೃಹ, ಕುಡಿಯುವ ನೀರು, ವಿದ್ಯುತ್ ವ್ಯವಸ್ಥೆ, ಪಾರ್ಕಿಂಗ್ ಸೇರಿ ರಾಜ್ಯಕ್ಕೆ ಮಾದರಿಯಾದ ಎಪಿಎಂಸಿ ನಿರ್ಮಾಣ ಮಾಡುವ ಉದ್ದೇಶ ಹೊಂದಲಾಗಿದೆ. ಆ ಮೂಲಕ ಜಿಲ್ಲೆಯಷ್ಟೇ ಅಲ್ಲದೇ ಕರ್ನಾಟಕ, ಆಂಧ್ರಪ್ರದೇಶ, ತಮಿಳುನಾಡು ರೈತರೂ ಇತ್ತ ಮುಖ ಮಾಡುವಂತೆ ಮಾಡುವ ಮೂಲಕ ಕೆಜಿಎ್ ೇತ್ರದ ರೈತರನ್ನು ಆರ್ಥಿಕವಾಗಿ ಬಲಪಡಿಸುವ ದೂರದೃಷ್ಟಿಯುಳ್ಳ ಮಹತ್ವಾಾಂ ಯೋಜನೆ ಇದಾಗಿದೆ.
ಸಮಸ್ಯೆಗಳ ಮಧ್ಯೆ ಭೂಮಿ ಹಸ್ತಾಂತರ: ಹಲವು ಅಡ್ಡಿ ಆತಂಕಗಳ ಮಧ್ಯೆಯೂ ಕಂದಾಯ ಇಲಾಖೆ ಅಧೀನದಲ್ಲಿದ್ದ ಭೂಮಿ ಗುರುತಿಸಿ ಅದಕ್ಕೆ ಸರ್ಕಾರಿ ಶುಲ್ಕ 70 ಲ ರೂ.ಗಳನ್ನು ಕಂದಾಯ ಇಲಾಖೆಗೆ ಪಾವತಿಸುವ ಮೂಲಕ ಎಲ್ಲವನ್ನೂ ಪಾರದರ್ಶಕ ಮತ್ತು ಕಾನೂನಾತ್ಮಕವಾಗಿ ನಿರ್ವಹಿಸಿ, ಭೂಮಿ ಪಡೆದು, ಕೆಜಿಎ್ ಕೃಷಿ ಉತ್ಪನ್ನ ಮತ್ತು ಮಾರುಕಟ್ಟೆ ಸಮಿತಿಗೆ ಹಸ್ತಾಂತರ ಮಾಡಿಸುವ ಪ್ರಥಮ ಹಂತದ ಕಾರ್ಯದಲ್ಲಿ ಶಾಸಕಿ ರೂಪಕಲಾ ಯಶಸ್ವಿಯಾಗಿದ್ದರು. ಇದಕ್ಕೂ ಮೊದಲು, ಸರ್ಕಾರಿ ಭೂಮಿ ವಶಕ್ಕೆ ಪಡೆಯುವುದೇ ಸವಾಲು ಎನ್ನಲಾಗಿತ್ತು, ಆದರೆ ಕಡಿಮೆ ಅವಧಿಯಲ್ಲಿ ಭೂಮಿ ಹಸ್ತಾಂತರ ಮಾಡುವಲ್ಲಿ ಶಾಸಕಿ ಮುತುವರ್ಜಿ ವಹಿಸಿದ್ದರು. ಸದ್ಯ, ಮಾರುಕಟ್ಟೆ ನಿರ್ಮಾಣಕ್ಕೆ ಒಟ್ಟು 25 ಎಕರೆ ಭೂಮಿ ಪೈಕಿ ಸುಮಾರು 15 ಎಕರೆ ಆವರಿಸಿಕೊಂಡಿರುವ ದೊಡ್ಡ ಗುಡ್ಡವನ್ನು ನೆಲಸಮ ಮಾಡುವುದೂ ಸವಾಲಾಗಿದೆ. ಸಾವಿರಾರು ವರ್ಷಗಳಿಂದಲೂ ನೆಲೆಯೂರಿದೆ ಎನ್ನಲಾಗಿರುವ ಬೃಹತ್ ಗುಡ್ಡವನ್ನು ಒಂದೆರಡು ತಿಂಗಳಲ್ಲಿ ನೆಲಸಮ ಮಾಡಬಹುದು ಎಂದು ನಿರೀಸಿ ಪ್ರಾರಂಭ ಮಾಡಿದ ಕಾಮಗಾರಿ 6ತಿಂಗಳು ಕಳೆದರೂ ಒಂದು ಹಂತಕ್ಕೆ ಬಂದಿಲ್ಲ. ನಿತ್ಯವೂ ಹತ್ತಾರು ವಾಹನಗಳು ಕಾರ್ಯಾಚರಣೆಯಲ್ಲಿ ತೊಡಗಿಸಿಕೊಂಡಿದ್ದರೂದಿನದಿಂದ ದಿನಕ್ಕೆ ಮತ್ತಷ್ಟು ಸವಾಲುಗಳು ಎದುರಾಗುತ್ತಿವೆ.
ಗ್ರಾನೈಟ್ ವಿವಾದ & ನೆಲಸಮದಲ್ಲಿ ಪ್ರಮಾದ : ಬೆಟ್ಟದಂತಿರುವ ದೊಡ್ಡ ಗುಡ್ಡ ಅಗೆಯುವಾಗ ಅದರ ಒಡಲಲ್ಲಿ ದೊಡ್ಡ ಗಾತ್ರದ ಕಪ್ಪು ಕಲ್ಲುಗಳು ಮತ್ತು ಗ್ರಾನೈಟ್ ಕಂಡು ಬಂದಿದ್ದ ಹಿನ್ನೆಲೆಯಲ್ಲಿ ಇದರ ಉಸ್ತುವಾರಿ ವಹಿಸಿದ್ದವರು ಅಪಾರ ಖನಿಜ ಸಂಪತ್ತೇ ಸಿಕ್ಕಿಬಿಟ್ಟಿತೆಂದು ಖುಷಿಯಾಗಿದ್ದರು. ಈ ಸುದ್ದಿ ಹಲವರ ಕಣ್ಣು ಕೆಂಪಾಗುವಂತೆಯೂ ಮಾಡಿತ್ತು. ಇದರಿಂದಾಗಿ ಗ್ರಾ$ನೈಟ್ ಅಕ್ರಮ ಮಾರಾಟ, ಶಾಸಕರ ಹಿಂಬಾಲಕರಿಂದ ಸಂಪತ್ತು ಲೂಟಿ, ರಾಜ್ಯದ ಸಂಪತ್ತು ಹೊರರಾಜ್ಯಗಳಿಗೆ ರವಾನೆ ಎಂಬೆಲ್ಲ ಆರೋಪಗಳು ಕೇಳಿ ಬಂದವು. ಈ ಹಿನ್ನೆಲೆಯಲ್ಲಿ ಎಪಿಎಂಸಿ ಮಾರುಕಟ್ಟೆ ಸ್ಥಾಪನೆ ಯೋಜನೆ ವಿವಾದಕ್ಕೂ ಕಾರಣವಾಯಿತು. ಗಣಿ ಮತ್ತು ಭೂವಿಾನ ಇಲಾಖೆ ಸೇರಿ ಸಂಬಂಧಪಟ್ಟ ಹಲವು ಇಲಾಖೆ ಅಧಿಕಾರಿಗಳ ತಂಡಗಳು ಭೇಟಿ ನೀಡಿ ಕಾರ್ಯಾಚರಣೆ ಸ್ಥಗಿತ ಮಾಡಿಸಿರುವುದು ವಿಳಂಬಕ್ಕೆ ಕಾರಣ ಎನ್ನಲಾಗಿದೆ.
ಗುಣಮಟ್ಟವಲ್ಲದ ಕಲ್ಲುಗಳು: ಈ ಮಧ್ಯೆ ಅಲ್ಲಿನ ಸಂಪತ್ತನ್ನೇ ಬಳಸಿಕೊಂಡು ಅಥವಾ ಮಾರಾಟ ಮಾಡಿ ಗುಡ್ಡ ಸಮತಟ್ಟು ಕಾರ್ಯಾಚರಣೆ ಕೆಲಸದ ವೆಚ್ಚಕ್ಕೆ ಸರಿದೂಗಿಸುವ ಲೆಕ್ಕಾಚಾರದಲ್ಲಿ ಮಾತುಕತೆ ನಡೆಸಿ ಸಾಕಷ್ಟು ಹಣ ಮಾಡಬಹುದೆಂದು ಮುಖಂಡರು ಅಖಾಡಕ್ಕೆ ಧುಮುಕಿದರು. ಆದರೆ ಹೊರಬರುತ್ತಿರುವ ಕಲ್ಲುಗಳು ಉತ್ತಮ ಗುಣಮಟ್ಟ ಹೊಂದಿಲ್ಲ ಎಂಬ ಕಾರಣಕ್ಕೆ ವ್ಯಾಪಾರಿಗಳು ಖರೀದಿಗೆ ಮುಂದಾಗುತ್ತಿಲ್ಲ ಎನ್ನಲಾಗಿದ್ದು, ಶೇ.50 ಸಹ ಮಾರಾಟ ಮಾಡಲು ಸಾಧ್ಯವಾಗಿಲ್ಲ ಎನ್ನಲಾಗಿದೆ. ಜತೆಗೆ ಗಣಿ ಮತ್ತು ಭೂ ವಿಾನ ಇಲಾಖೆಗೆ ಇದುವರೆಗೂ ಅಂದಾಜು 10 ಲ ರೂ. ರಾಯಧನವಾಗಿ ಶುಲ್ಕ ಕಟ್ಟಲಾಗಿದೆ. ಇದರಿಂದಾಗಿ ಕಾರ್ಯಾಚರಣೆ ವೆಚ್ಚ ಭರಿಸಲು ಸಾಧ್ಯವಾಗದ ಕಾರಣಕ್ಕೆ ಗುಡ್ಡ ಸಮತಟ್ಟು ಕೆಲಸಕ್ಕೂ ಪೆಟ್ಟು ಬಿದ್ದಿದೆ.
ಕಾಂಪೌಂಡ್ ನಿರ್ಮಾಣಕ್ಕೆ 2 ಕೋಟಿ ರೂ.: ಕನಸಿನ ಕೂಸು ಎನಿಸಿಕೊಂಡಿರುವ ಎಪಿಎಂಸಿ ಮಾರುಕಟ್ಟೆ ನಿರ್ಮಾಣಕ್ಕೆ ಪಣ ತೊಟ್ಟಿರುವ ರೂಪಕಲಾ ಮಾರುಕಟ್ಟೆ ನಿರ್ಮಾಣಕ್ಕೆ ಇನ್ನಿಲ್ಲದ ಪ್ರಯತ್ನ ಮಾಡುತ್ತಿದ್ದು, 25 ಎಕರೆ ಸುತ್ತಲೂ ಬೇಲಿ ಅಥವಾ ಕಾಂಪೌಂಡ್ ನಿರ್ಮಿಸಲು ರಾಜ್ಯಸರ್ಕಾರದಿಂದ 2 ಕೋಟಿ ರೂ. ಬಿಡುಗಡೆ ಮಾಡಿಸಿದ್ದಾರೆ. ಟೆಂಡರ್ ಪ್ರಕ್ರಿಯೆಯೂ ಮುಗಿದಿದೆ. ನೀಲಿನೆ ಸಿದ್ಧವಾಗಿದೆಯಾದರೂ ಗುಡ್ಡದ ಕತೆಯೇ ಇನ್ನೂ ಆರು ತಿಂಗಳಿಂದ ವರ್ಷ ಹಿಡಿಯಬಹುದು ಎಂದು ಹೇಳಲಾಗುತ್ತಿದೆ. ತದನಂತರ ಕಾಂಪೌಂಡ್ ನಿರ್ಮಾಣವಾಗಲಿದೆ.
ಶಾಸಕಿ ಅಸಮಾಧಾನ: ಕೆಲಸ ನಿಧಾನಗತಿಯಲ್ಲಿ ಸಾಗುತ್ತಿರುವುದಕ್ಕೆ ಶಾಸಕಿ ರೂಪಕಲಾ ಅವರು ಅಸಮಾಧಾನ ಹೊರಹಾಕಿದ್ದಾರೆ. ಕಾಮಗಾರಿಗೆ ಇದುವರೆಗೂ ಸುಮಾರು 2 ಕೋಟಿ ರೂ. ವೆಚ್ಚವಾಗಿದ್ದು, ಅದರಲ್ಲಿ ಅರ್ಧದಷ್ಟು ಹಣವೂ ಗ್ರಾ$ನೈಟ್ ಕಲ್ಲುಗಳಿಂದ ಬಂದಿಲ್ಲ. ಕಲ್ಲುಗಳನ್ನು ಕೊಳ್ಳುವವರೇ ಇಲ್ಲ, ಇದರಿಂದಾಗಿ ಹಣದ ಸಮಸ್ಯೆಯಿಂದ ಗುಡ್ಡ ಸಮತಟ್ಟು ಮಾಡುವ ಕೆಲಸ ಬೇಗನೆ ಮುಗಿಯುವುದಿಲ್ಲ ಎಂಬ ಸೂಚನೆಯನ್ನು ಉಸ್ತುವಾರಿಗಳು ಪರೋವಾಗಿ ನೀಡಿದ್ದಾರೆ ಎನ್ನಲಾಗಿದೆ.
ರೈತರ ಆಶೀರ್ವಾದ ಇರುವ ತನಕ ಅಭಿವೃದ್ಧಿ ಕೆಲಸದ ವಿಚಾರದಲ್ಲಿ ಏನೇ ಅಡೆ ತಡೆಗಳು ಬಂದರೂ ಜಯಿಸುತ್ತೇನೆ. ಯಾವುದೇ ಕಾರಣಕ್ಕೂ ಕೆಲಸ ನಿಲ್ಲಲು ಬಿಡುವುದಿಲ್ಲ. ಆದಷ್ಟು ಬೇಗ ಕೆಲಸ ಪೂರ್ಣಗೊಳಿಸಿ ರೈತರ ಅನುಕೂಲಕ್ಕೆ ಬಿಡಲಾಗುವುದು.
ರೂಪಕಲಾ ಶಾಸಕಿ ಕೆಜಿಎಫ್