ಜಿಲ್ಲೆ

ಗುರುಪ್ರಸಾದ ಹುಬ್ಬಳ್ಳಿ ಎಪಿಎಂಸಿ ನೂತನ ಕಾರ್ಯದರ್ಶಿ

ಹುಬ್ಬಳ್ಳಿ: ಇಲ್ಲಿಯ ಅಮರಗೋಳದ ಬಸವೇಶ್ವರ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ (ಎಪಿಎಂಸಿ) ನೂತನ ಕಾರ್ಯದರ್ಶಿಯಾಗಿ ಕೆ.ಎಚ್. ಗುರುಪ್ರಸಾದ ಅವರು ಬುಧವಾರ ಅಧಿಕಾರ ವಹಿಸಿಕೊಂಡರು.

ಹುಬ್ಬಳ್ಳಿ ವ್ಯಾಪಾರಸ್ಥರ ಸಂಘದ ಅಧ್ಯಕ್ಷ ರಾಜಕಿರಣ ಮೆಣಸಿನಕಾಯಿ ಮತ್ತು ಗೌರವ ಕಾರ್ಯದರ್ಶಿ ಅಶೋಕ ಬಾಳಿಕಾಯಿ ಅವರ ನೇತೃತ್ವದಲ್ಲಿ ಗುರುಪ್ರಸಾದ ಅವರನ್ನು ಸನ್ಮಾನಿಸಲಾಯಿತು.

ಎಪಿಎಂಸಿ ಮೂಲ ಸೌಲಭ್ಯಗಳಾದ ಒಳಚರಂಡಿ ವ್ಯವಸ್ಥೆ, ಪ್ರತ್ಯೇಕ ವಿದ್ಯುತ್ ಸ್ಥಾವರ ನಿರ್ಮಾಣ, ಆಸ್ತಿಗಳ ಇ-ಸ್ವತ್ತು ಸರಳೀಕರಣಗೊಳಿಸುವುದು, ನೂತನ ವೇಬ್ರಿಡ್ಜ್ ನಿರ್ಮಾಣ, ಅಂಗಡಿ, ಗೋದಾಮು ಪಡೆದ ವರ್ತಕರಿಗೆ ಆರ್ಥಿಕ ನೆರವು ಪಡೆಯಲು ನಿರಾಕ್ಷೇಪಣ ಪತ್ರ (ಎನ್ಒಸಿ) ಒದಗಿಸುವುದು ಸೇರಿ ಇತರ ಸೌಲಭ್ಯಗಳ ಬಗ್ಗೆ ಕಾರ್ಯದರ್ಶಿ ಅವರಿಗೆ ಮನವಿ ಸಲ್ಲಿಸಲಾಯಿತು.

ಸಂಘದ ಉಪಾಧ್ಯಕ್ಷ ಅನೀಲ ಓಸ್ತವಾಲ, ಸಹಗೌರವ ಕಾರ್ಯದರ್ಶಿ ರವಿ ಮರದ, ಶಿವಯೋಗಿ ಹೊಸಕಟ್ಟಿ, ಶಿವನಗೌಡ ಪಾಟೀಲ, ವೀರಣ್ಣ ವಾಲಿ, ಶಿವಲಿಂಗಪ್ಪ ಜಿಗಜಿನ್ನಿ, ರುದ್ರಪ್ಪ ಬೆಟಗೇರಿ, ಸಂಜಯ ಬಂಡಾರಕರ, ಸಿದ್ದು ಅಳಗವಾಡಿ, ಈಶ್ವರಪ್ಪ ಹೆಬಸೂರ, ಸುರೇಶ ಜೈನ್, ಶಂಕರಗೌಡ ಸೋಮನಗೌಡ್ರ, ಚಂದ್ರು ಪೂಜಾರ, ವಿನೋದ ತಲ್ಲೂರ, ಗುಂಡಪ್ಪ ಸಾವುಕಾರ, ಮಂಜುನಾಥ ಭಂಡಾರಕರ, ಜೋಗೂರ ಮುಂತಾದವರು ಉಪಸ್ಥಿತರಿದ್ದರು.