ಕಲಬುರಗಿ: ನಗರದ ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿರುವ ಕೃಷಿಯೇತರ ಅಂಗಡಿಗಳ ತೆರವಿಗೆ ಆಗ್ರಹಿಸಿ ಎಪಿಎಂಸಿ ಕಚೇರಿ ಎದುರು ನ.೨೧ರಂದು ವಿವಿಧ ಸಂಘಟನೆಗಳಿAದ ಪ್ರತಿಭಟನೆ ನಡೆಸಲಾಗುವುದು ಎಂದು ಕಲ್ಯಾಣ ಕರ್ನಾಟಕ ಪ್ರತ್ಯೇಕ ರಾಜ್ಯ ಹೋರಾಟ ಸಮಿತಿ ಅಧ್ಯಕ್ಷ ಎಂ.ಎಸ್.ಪಾಟೀಲ್ ನರಿಬೋಳ ಹೇಳಿದರು.
ನಗರದ ಎಪಿಎಂಸಿಯಲ್ಲಿ ಕೃಷಿ ಸಂಬAಧಿಸಿದ ಮಳಿಗೆಗಳಿರಬೇಕು. ಆದರೆ, ಕಿರಾಣಿ ಅಂಗಡಿ, ಸಾರಿಗೆ, ಎಲೆಕ್ಟಿçಕಲ್, ಪ್ಲಾಸ್ಟಿಕ್ ಮತ್ತು ಕೋರಿಯರ್ ಅಂಗಡಿ ನಡೆಸಲಾಗುತ್ತಿದೆ. ನಿಯಮಬಾಹಿರವಾಗಿ ಕೃಷಿಯೇತರ ಅಂಗಡಿಗಳನ್ನು ನಡೆಸಲು ಅವಕಾಶ ನೀಡಲಾಗಿದೆ ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಆರೋಪಿಸಿದರು.
ಎಪಿಎಂಸಿ ವರ್ತಕರಿಗೆ ಅಂಗಡಿ-ಗೋದಾಮುಗಳು ಸಿಗುತ್ತಿಲ್ಲ. ಜಿದ್ದಿಗೆ ಬಿದ್ದು ಪಡೆಯಲು ಹೊರಟರೆ ಎರಡ್ಮೂರು ಪಟ್ಟು ಬಾಡಿಗೆ ನೀಡಬೇಕಾದ ಪರಿಸ್ಥಿತಿ ಬಂದಿದೆ. ಬಡ ರೈತರಿಂದ ಸುಲಿಗೆ ಮಾಡಲಾಗುತ್ತಿದೆ. ನಿಯಮಬಾಹಿರವಾಗಿ ಕೃಷಿಯೇತರ ಮಳಿಗೆ ಬಾಡಿಗೆ ನೀಡಿದ್ದಕ್ಕೆ ಆಕ್ಷೇಪಿಸಿದ್ದು, ಎಪಿಎಂಸಿ ಕಾರ್ಯದರ್ಶಿ ಅಂತಿಮ ನೋಟಿಸ್ ನೀಡಿದ್ದರೂ ತೆರವು ಆಗುತ್ತಿಲ್ಲ. ವಾರದಲ್ಲಿ ತೆರವುಗೊಳಿಸಬೇಕು ಎಂದು ಆಗ್ರಹಿಸಿದರು.
ಎಪಿಎಂಸಿ ಯಾರ್ಡ್ನಲ್ಲಿ ಇರುವ ಗೋದಾಮುಗಳನ್ನು ಪರಿವರ್ತಿಸಿ ಮಳಿಗೆ ಮಾಡಲಾಗಿದೆ. ವಾಹನ ನಿಲುಗಡೆ ಸ್ಥಳದಲ್ಲಿ ಶೆಡ್ ನಿರ್ಮಿಸಲಾಗಿದೆ. ಇದರಿಂದ ಮಾರುಕಟ್ಟೆಯಲ್ಲಿ ಸಂಚಾರ ದಟ್ಟಣೆ ತೀವ್ರವಾಗಿದೆ. ಕೃಷಿಯೇತರ ಅಂಗಡಿಗಳನ್ನು ಕೂಡಲೇ ತೆರವುಗೊಳಿಸಬೇಕು ಎಂದು ಸರ್ಕಾರಕ್ಕೆ ಆಗ್ರಹಿಸಿದರು.
ಹಿಂದು ಜಾಗೃತಿ ಸೇನೆ ಅಧ್ಯಕ್ಷ ಲಕ್ಷಿö್ಮÃಕಾಂತ ಸ್ವಾದಿ, ಗ್ರಾಮೀಣಾಭಿವೃದ್ಧಿ ಹೋರಾಟ ಸಮಿತಿ ಅಧ್ಯP್ಷÀ ಶ್ರವಣಕುಮಾರ ನಾಯಕ, ಎಪಿಎಂಸಿ ಮಾಜಿ ಸದಸ್ಯ ವೀರಣ್ಣ ಬೇಲೂರೆ ಇತರರಿದ್ದರು.