ಜಿಲ್ಲೆ

7 ಎಪಿಎಂಸಿಗೆ ಮೀಸಲಾತಿ ಘೋಷಣೆ ; ಶೀಘ್ರ ಚುನಾವಣೆ ಸಾಧ್ಯತೆ ; 4 ವರ್ಷದ ಬಳಿಕ ಹುಳಿಯಾರಿನಲ್ಲಿ ಎಲೆಕ್ಷನ್

Tumakuru

ತುಮಕೂರು : ನಾಲ್ಕು ವರ್ಷದ ಹಿಂದೆಯೇ ಅವಧಿ ಪೂರ್ಣಗೊಳಿಸಿರುವ ಹುಳಿಯಾರು ಹಾಗೂ ಶಿರಾ, ಪಾವಗಡ, ತುರುವೇಕೆರೆ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಚುನಾವಣೆ ನಡೆಸಲು ಜಿಲ್ಲಾಡಳಿತ ಮುಂದಾಗಿದ್ದು, ಮಂಗಳವಾರ ಮೀಸಲಾತಿ ಪ್ರಕಟಿಸಲಾಗಿದೆ.

ಜಿಲ್ಲೆಯಲ್ಲಿ ಅವಧಿ ಪೂರ್ಣಗೊಳಿಸಿರುವ ಹುಳಿಯಾರು, ಶಿರಾ, ಪಾವಗಡ, ತುರುವೇಕೆರೆ, ತಿಪಟೂರು, ಮಧುಗಿರಿ, ಕುಣಿಗಲ್ ಹಾಗೂ ಗುಬ್ಬಿ ಎಪಿಎಂಸಿಗಳ ಪೈಕಿ ಮತದಾರರ ಪಟ್ಟಿ ಸಿದ್ಧವಾಗಿಲ್ಲದ ತಿಪಟೂರು ಹೊರತುಪಡಿಸಿ ಉಳಿದ 7 ಎಪಿಎಂಸಿ ಸದಸ್ಯ ಸ್ಥಾನಗಳಿಗೆ ಮೀಸಲಾತಿ ಘೋಷಣೆಯಾಗಿದೆ.

18 ವರ್ಷ ಮೇಲ್ಪಟ್ಟ ಕೃಷಿಕ ಮತದಾರರ ಪಟ್ಟಿ ಸಿದ್ಧಪಡಿಸಲಾಗಿರುವ ಎಪಿಎಂಸಿಗಳಲ್ಲಿ ಮೀಸಲಾತಿ ಪ್ರಕಟಿಸಲಾಗಿದ್ದು, ಶೀಘ್ರದಲ್ಲಿಯೇ ಚುನಾವಣೆ ಘೋಷಣೆಯಾಗುವ ಸಾಧ್ಯತೆಯಿದೆ. ಕಾನೂನು ಸಚಿವ ಜೆ.ಸಿ.ಮಾಧುಸ್ವಾಮಿ ಸ್ವಕ್ಷೇತ್ರದ ಹುಳಿಯಾರು ಎಪಿಎಂಸಿ ಸದಸ್ಯರ ಅಧಿಕಾರವಧಿ 2018ರ ಜ.16ರಂದೇ ಪೂರ್ಣವಾಗಿದ್ದು, ಬರೋಬ್ಬರಿ 4 ವರ್ಷದ ನಂತರ ಚುನಾವಣೆ ಘೋಷಣೆಯಾಗುವ ಸಾಧ್ಯತೆಯಿದೆ.

ಅವಧಿ ಪೂರ್ಣವಾಗುವ ಮುಂಚೆ ಗುಬ್ಬಿ, ಕುಣಿಗಲ್, ತುರುವೇಕೆರೆಯಲ್ಲಿ ಜೆಡಿಎಸ್, ಪಾವಗಡ, ಶಿರಾದಲ್ಲಿ ಕಾಂಗ್ರೆಸ್ ತೆಕ್ಕೆಯಲ್ಲಿದ್ದವು.

ಹುಳಿಯಾರು ಎಪಿಎಂಸಿ 11+3 ಸ್ಥಾನಗಳು : ಯಳನಡು(ಎಸ್‌ಸಿ), ಹುಳಿಯಾರು(ಸಾಮಾನ್ಯ), ಹೊಯ್ಸಳಕಟ್ಟೆ(ಸಾಮಾನ್ಯ), ತಿಮ್ಮನಹಳ್ಳಿ(ಮಹಿಳೆ), ತೀರ್ಥಪುರ(ಎಸ್‌ಟಿ), ಕಂದಿಕೆರೆ(ಬಿಸಿಎಂಎ), ಚಿಕ್ಕನಾಯಕನಹಳ್ಳಿ ಕಸಬಾ(ಸಾಮಾನ್ಯ), ಹಂದನಕೆರೆ(ಮಹಿಳೆ), ಮತಿಘಟ್ಟ(ಸಾಮಾನ್ಯ), ಶೆಟ್ಟಿಕೆರೆ(ಸಾಮಾನ್ಯ), ಜೆ.ಸಿ.ಪುರ(ಬಿಸಿಎಂಬಿ) ಹಾಗೂ ವ್ಯಾಪಾರಗಾರರ ಕ್ಷೇತ್ರ, ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘ ಮತ್ತು ಕೃಷಿ ಹುಟ್ಟುವಳಿ ಸಂಸ್ಕರಣಾ ಸಂಘದಿಂದ ತಲಾ ಒಂದು ಸ್ಥಾನವಿದ್ದು ಸಾಮಾನ್ಯರಿಗೆ ಮೀಸಲಿಡಲಾಗಿದೆ.

ತುರುವೇಕೆರೆ ಎಪಿಎಂಸಿ 11+3 ಸ್ಥಾನಗಳು : ಬಾಣಸಂದ್ರ(ಬಿಸಿಎಂಎ), ದಂಡಿನಶಿವರ(ಸಾಮಾನ್ಯ), ಸಂಪಿಗೆ(ಎಸ್‌ಸಿ), ತುರುವೇಕೆರೆ(ಸಾಮಾನ್ಯ)ಕೊಂಡಜ್ಜಿ(ಸಾಮಾನ್ಯ), ತಾಳಕೆರೆ(ಎಸ್‌ಟಿ), ತಂಡಗ(ಸಾಮಾನ್ಯ), ದೆಬ್ಬೆಘಟ್ಟ(ಮಹಿಳೆ), ಮುತ್ತಗದಹಳ್ಳಿ(ಬಿಸಿಎಂಬಿ), ಮಾಯಸಂದ್ರ(ಸಾಮಾನ್ಯ), ಸೀಗೆಹಳ್ಳಿ(ಮಹಿಳೆ) ಹಾಗೂ ವ್ಯಾಪಾರಗಾರರ ಕ್ಷೇತ್ರ, ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘ ಮತ್ತು ಕೃಷಿ ಹುಟ್ಟುವಳಿ ಸಂಸ್ಕರಣಾ ಸಂಘದಿಂದ ತಲಾ ಒಂದು ಸ್ಥಾನವಿದ್ದು ಸಾಮಾನ್ಯರಿಗೆ ಮೀಸಲಿಡಲಾಗಿದೆ.

ಶಿರಾ ಎಪಿಎಂಸಿ 11+3 : ಹುಲಿಕುಂಟೆ(ಬಿಸಿಎಂಎ), ಬರಗೂರು(ಮಹಿಳೆ), ಗೌಡಗೆರೆ(ಎಸ್‌ಟಿ), ಮದಲೂರು(ಸಾಮಾನ್ಯ), ತಾವರೆಕೆರೆ(ಸಾಮಾನ್ಯ), ಬಿದರೆಕೆರೆ(ಬಿಸಿಎಂಬಿ), ಭೂವನಹಳ್ಳಿ(ಸಾಮಾನ್ಯ), ಬುಕ್ಕಾಪಟ್ಟಣ(ಸಾಮಾನ್ಯ), ಕಳ್ಳಂಬೆಳ್ಳ(ಮಹಿಳೆ), ದೊಡ್ಡಅಗ್ರಹಾರ(ಎಸ್‌ಸಿ), ತರೂರು(ಸಾಮಾನ್ಯ)ಹಾಗೂ ವ್ಯಾಪಾರಗಾರರ ಕ್ಷೇತ್ರ, ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘ ಮತ್ತು ಕೃಷಿ ಹುಟ್ಟುವಳಿ ಸಂಸ್ಕರಣಾ ಸಂಘದಿಂದ ತಲಾ ಒಂದು ಸ್ಥಾನವಿದ್ದು ಸಾಮಾನ್ಯರಿಗೆ ಮೀಸಲಿಡಲಾಗಿದೆ.

ಪಾವಗಡ ಎಪಿಎಂಸಿ 11+3 : ದೊಮ್ಮತಮರಿ(ಸಾಮಾನ್ಯ), ರಾಜವಂತಿ(ಸಾಮಾನ್ಯ), ಪಾವಗಡ(ಸಾಮಾನ್ಯ), ಚನ್ನಕೇಶವಪುರ(ಮಹಿಳೆ), ಮಂಗಳವಾಡ(ಸಾಮಾನ್ಯ), ರಂಗಸಮುದ್ರ(ಸಾಮಾನ್ಯ), ರಂಗಸಮುದ್ರ(ಬಿಸಿಎಂಎ), ಪೊನ್ನಸಮುದ್ರ(ಬಿಸಿಎಂಬಿ), ವೈ.ಎಸ್.ಹೊಸಕೋಟೆ(ಎಸ್‌ಟಿ), ಕಾಮನದುರ್ಗ(ಎಸ್‌ಸಿ), ಪಳವಳ್ಳಿ(ಮಹಿಳೆ), ತಿರುಮಣಿ(ಸಾಮಾನ್ಯ) ಹಾಗೂ ವ್ಯಾಪಾರಗಾರರ ಕ್ಷೇತ್ರ, ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘ ಮತ್ತು ಕೃಷಿ ಹುಟ್ಟುವಳಿ ಸಂಸ್ಕರಣಾ ಸಂಘದಿಂದ ತಲಾ ಒಂದು ಸ್ಥಾನವಿದ್ದು ಸಾಮಾನ್ಯರಿಗೆ ಮೀಸಲಿಡಲಾಗಿದೆ.

ಅವಧಿ ಪೂರ್ಣವಾಗಲಿರುವ ಮಧುಗಿರಿ, ಗುಬ್ಬಿ, ಪಾವಗಡ, ಕುಣಿಗಲ್, ತುರುವೇಕೆರೆ, ಶಿರಾ ಮತ್ತು ಚಿಕ್ಕನಾಯಕನಹಳ್ಳಿ ತಾಲೂಕು ಹುಳಿಯಾರು ಎಪಿಎಂಸಿ ಸದಸ್ಯ ಸ್ಥಾನಗಳಿಗೆ ಮೀಸಲಾತಿ ಪ್ರಕಟಿಸಲಾಗಿದೆ. ಯಾವುದೇ ತೊಡಕು ಬರದಿದ್ದರೆ ಶೀಘ್ರದಲ್ಲಿಯೂ ಚುನಾವಣೆ ಕೂಡ ನಡೆಯಲಿದೆ. ವೈ.ಎಸ್.ಪಾಟೀಲ ಜಿಲ್ಲಾಧಿಕಾರಿ, ತುಮಕೂರು ಜಿಲ್ಲೆ