ಹುಬ್ಬಳ್ಳಿ: ಕೆವೈಸಿ ಅಪಡೇಟ್ ಹೆಸರಿನಲ್ಲಿ ನಗರದ ಮಹಿಳೆಯೊಬ್ಬರಿಂದ 2.50 ಲಕ್ಷ ರೂ. ವರ್ಗಾಯಿಸಿಕೊಂಡು ವಂಚಿಸಲಾಗಿದೆ.
ರಶ್ಮಿ ಎಂಬುವರಿಗೆ ಕರೆ ಮಾಡಿದ ವಂಚಕರು, ಕೆವೈಸಿ ಅಪಡೇಟ್ ಮಾಡಿಕೊಳ್ಳಬೇಕು ಎಂದು ಎಪಿಕೆ ಫೈಲ್ ಕಳುಹಿಸಿ ಹೇಳಿದ್ದಾರೆ. ಫೈಲ್ ಲಿಂಕ್ ಕ್ಲಿಕ್ ಮಾಡಿದ ತಕ್ಷಣ ಹಣ ವರ್ಗಾವಣೆ ಆಗಿದೆ ಎಂದು ರಶ್ಮಿ ಸಿಇಎನ್ ಕ್ರೈಂ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.