ಚಿಕ್ಕಮಗಳೂರಿನ ಕುವೆಂಪು ಕಲಾಮಂದಿರದಲ್ಲಿ ನಡೆದ ತಾಲೂಕು ಸಾಹಿತ್ಯ ಸಮ್ಮೇಳನದಲ್ಲಿ ಶಾಸಕ ಎಚ್.ಡಿ.ತಮ್ಮಯ್ಯ ಸಮ್ಮೇಳನದ ಸ್ಮರಣ ಸಂಚಿಕೆ ಬಿಡುಗಡೆಗೊಳಿಸಿದರು. ಸೂರಿ ಶ್ರೀನಿವಾಸ್, ಬೆಳವಾಡಿ ಮಂಜುನಾಥ್, ಸಗೀರ್ ಅಹಮದ್, ಎಂ.ಎಲ್.ಮೂರ್ತಿ, ಡಾ. ಜೆ.ಪಿ.ಕೃಷ್ಣೇಗೌಡ ಮತ್ತಿತರರಿದ್ದರು. 
ಜಿಲ್ಲೆ

ಯುವಜನರಲ್ಲಿ ಕನ್ನಡದ ಬಗ್ಗೆ ನಿರಾಸಕ್ತಿ

ಚಿಕ್ಕಮಗಳೂರು:

ವಿಜಯವಾಣಿ ಸುದ್ದಿಜಾಲ ಚಿಕ್ಕಮಗಳೂರು
ಯುವಜನರಲ್ಲಿ ಕನ್ನಡದ ಬಗ್ಗೆ ಆಸಕ್ತಿ ಕಡಿಮೆಯಾಗಿರುವುದು ನೋವಿನ ಸಂಗತಿ ಎಂದು ಶಾಸಕ ಎಚ್.ಡಿ.ತಮ್ಮಯ್ಯ ಬೇಸರ ವ್ಯಕ್ತಪಡಿಸಿದರು.

ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಕುವೆಂಪು ಕಲಾಮಂದಿರ ಗೌರಮ್ಮಬಸವೇಗೌಡ ಮಹಾಮಂಟಪ ಪ್ರೊ.ಚಂದ್ರಯ್ಯನಾಯ್ಡು ವೇದಿಕೆಯಲ್ಲಿ ಆಯೋಜಿಸಿದ್ದ ಚಿಕ್ಕಮಗಳೂರು ತಾಲೂಕು ೫ನೆಯ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಭುವನೇಶ್ವರಿ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಸ್ಮರಣಾಸಂಚಿಕೆ ಲೋಕಾರ್ಪಣೆಗೊಳಿಸಿ ಮಾತನಾಡಿದರು.
ಕನ್ನಡ ಭಾಷೆಗೆ, ಸಂಸ್ಕೃತಿಗೆ, ಸಂಘಟನೆಗೆ ಬಹುದೊಡ್ಡ ಇತಿಹಾಸವಿದೆ. ೧೮೯೦ರಲ್ಲೆ ಕನ್ನಡ ವಿದ್ಯಾವರ್ಧಕ ಸಂಘ ಕನ್ನಡದ ಕೆಲಸ ಆರಂಭಿಸಿತ್ತು. ೧೯೧೫ರಲ್ಲಿ ಕನ್ನಡ ಸಾಹಿತ್ಯ ಪರಿಷತ್ ಪ್ರಾರಂಭಗೊAಡಿತು. ಜಿಲ್ಲೆಯಲ್ಲೂ ಕನ್ನಡಪರ ಸಂಘಟನೆಗಳು ಕ್ರಿಯಾಶೀಲವಾಗಿದ್ದು ತಾವೂ ಭಾಗವಹಿಸುತ್ತಿದ್ದೆ ಎಂದು ಹೇಳಿದರು.
ಗೋಕಾಕ್ ವರದಿ ಜಾರಿಗಾಗಿ ಹೋರಾಟ ನಡೆದಿತ್ತು. ಡಾ.ರಾಜಕುಮಾರ್ ಇದರಲ್ಲಿ ಪಾಲ್ಗೊಂಡು ನೇತೃತ್ವ ವಹಿಸದಿದ್ದರೆ ನಾಡಿನ ತಲೆಭಾಗ ಬೆಳಗಾವಿ ನಮ್ಮೊಂದಿಗೆ ಇರುವುದೇ ಅನುಮಾನವಾಗಿತ್ತು ಎಂದರು.
ಮಾತೃಭಾಷೆಯ ಪ್ರೇಮ ಎಲ್ಲರ ಎದೆಯಲ್ಲಿರಬೇಕು. ನಮ್ಮೂರು ಮರೆಯಬಾರದು. ಆದರೆ ಇಂದಿನ ಯುವಪೀಳಿಗೆಯಲ್ಲಿ ಮಾತೃಭಾಷೆಯ ಪ್ರೇಮ ಆಸಕ್ತಿ ಕಡಿಮೆಯಾಗಿದ್ದು, ಈ ಬಗ್ಗೆ ಗಂಭೀರ ಚಿಂತನೆ ನಡೆಯಬೇಕು. ಇಂಗ್ಲೀಷ್ ಮತ್ತು ಹಿಂದಿ ಅವಶ್ಯಕತೆ ಇದ್ದರೂ ಮಾತೃಭಾಷೆಗೆ ಪ್ರಥಮಾದ್ಯತೆ ಅಗತ್ಯ. ವಿದೇಶಗಳು ನೋಡಲು ಚಂದ. ನಮ್ಮೂರು ಬಾಳಲು ಚೆಂದ ಎಂದು ಹೇಳಿದರು.
ಸಮ್ಮೇಳನ ಉದ್ಘಾಟಿಸಿದ ಕಸಾಪ ಕೇಂದ್ರಸಮಿತಿ ಖಜಾಂಚಿ ಡಾ.ಪಟೇಲ್‌ಪಾಂಡು ನೆಲ ಮೂಲ ಸಂಸ್ಕೃತಿಯನ್ನೊಳಗೊAಡ ಕಸಾಪ ಕರ್ನಾಟಕದ ರಕ್ಷಣೆ ಹಾಗೂ ಅಭಿವೃದ್ಧಿಗೆ ಕಂಕಣಬದ್ಧವಾಗಿದೆ ಎಂದು ಹೇಳಿದರು.
ಕನ್ನಡಶ್ರೀ ಪ್ರಶಸ್ತಿ ಸ್ವೀಕರಿಸಿದ ಮಾಜಿ ಸಚಿವ ಸಿ.ಆರ್.ಸಗೀರ್ ಅಹಮ್ಮದ್ ಮಾತನಾಡಿ, ನಾಡಿನ ಎಲ್ಲ ಕನ್ನಡಸಾಹಿತಿಗಳಿಗೆ ಉಚಿತ ಬಸ್‌ಪ್ರಯಾಣದ ವ್ಯವಸ್ಥೆಯಾಗಬೇಕು. ಕನ್ನಡದ ಬೆಳವಣಿಗೆಗೆ ಸಾಹಿತಿಗಳ ಮಹತ್ವದ ಕೊಡುಗೆ ಇದೆ. ಅವರಿಗೆ ಸರ್ಕಾರ ಅನುಕೂಲ ಕಲ್ಪಿಸಬೇಕು. ತಾವು ಸಾರಿಗೆ ಸಚಿವರಾಗಿದ್ದಾಗ ಎಲ್ಲ ಜಿಲ್ಲೆಗಳ ಕಸಾಪ ಅಧ್ಯಕ್ಷರುಗಳಿಗೆ ಬಸ್‌ಪಾಸ್ ನೀಡಿದ್ದನ್ನು ಸ್ಮರಿಸಿದರು.
ರಾಜ್ಯದಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣದ ವ್ಯವಸ್ಥೆ ಮಾಡಿರುವಂತೆ ೫ರಿಂದ ೧೦ಸಾವಿರದಷ್ಟಿರುವ ಸಾಹಿತಿಗಳಿಗೆ ಬಸ್‌ಪಾಸ್ ನೀಡುವುದು ಹೊರೆಯಾಗದು. ಈ ಬಗ್ಗೆ ಸಾರಿಗೆಸಚಿವ ರಾಮಲಿಂಗರೆಡ್ಡಿ ಅವರಿಗೆ ಪತ್ರಬರೆದು ವಿನಂತಿಸುವುದಾಗಿ ತಿಳಿಸಿದರು.
ಕನ್ನಡ ಉಳಿದಿರುವುದು ಹಳ್ಳಿಗಳಲ್ಲೆ ಹೊರತು ಬೆಂಗಳೂರಿನಲ್ಲಿ ಅಲ್ಲ. ಪ್ರತಿಷ್ಠೆಗಾಗಿ ನಮ್ಮ ಮಕ್ಕಳನ್ನು ಇಂಗ್ಲೇಷ್ ಶಾಲೆಗೆ ಸೇರಿಸುತ್ತಿz್ದೆÃವೆ. ಅವರಿಗೆ ಮಾತೃಭಾಷೆಯ ಅರಿವೇ ಇರುವುದಿಲ್ಲ. ದುಡಿಮೆಯ ಭಾಷೆ ಯಾವುದೇ ಆಗಿರಲಿ ಆದರೆ ಮಾತೃಭಾಷೆ ಮರೆಯಬಾರದು. ಕನ್ನಡ ನಮ್ಮ ಕುಟುಂಬ ಎಂಬ ಭಾವ ಪೋಷಕರಲ್ಲಿ ಜಾಗೃತವಾದರೆ ಮಾತ್ರ ಕನ್ನಡದ ಅಭಿವೃದ್ಧಿ ಸಾಧ್ಯ ಎಂದರು.
ಜಿಲ್ಲಾ ಕಸಾಪ ಅಧ್ಯಕ್ಷ ಸೂರಿಶ್ರೀನಿವಾಸ್ ಆಶಯ ಭಾಷಣ ಮಾಡಿ, ಕನ್ನಡ ಸಮ್ಮೇಳನಗಳು ನಾಡು-ನುಡಿ, ನೆಲ-ಜಲ, ಸಾಹಿತ್ಯ-ಸಂಸ್ಕೃತಿಯ ಚಿಂತನ-ಮAಥನಕ್ಕೆ ಉಪಯುಕ್ತ ವೇದಿಕೆಗಳು. ಕನ್ನಡಿಗರ ಸಮಸ್ಯೆಗಳು ಇಲ್ಲಿ ಚರ್ಚೆತವಾಗುತ್ತದೆ ಎಂದರು.
ಜಿಲ್ಲೆಯಲ್ಲಿ ಅಖಿಲಭಾರತ ಕನ್ನಡ ಸಾಹಿತ್ಯ ಸಮ್ಮೇಳನ ನಡೆಸಲು ಮೂಲಭೂತ ಸೌಕರ್ಯಗಳಿವೆ. ಈ ನಿಟ್ಟಿನಲ್ಲಿ ಪ್ರಯತ್ನ ನಡೆದಿದೆ. ಜಿಲ್ಲಾಮಟ್ಟದಲ್ಲಿ ರಾಜ್ಯೋತ್ಸವ ಪ್ರಶಸ್ತಿಯನ್ನು ಕೊಡುವ ಅಗತ್ಯವಿದೆ. ಹಿಂದೆ ಸಾಧಕರನ್ನು ಗುರುತಿಸಿ ಜಿಲ್ಲಾಮಟ್ಟದ ಪುರಸ್ಕಾರ ನೀಡುತ್ತಿದ್ದು ಯಾವುದೋ ಕಾರಣಕ್ಕೆ ನಿಂತುಹೋಗಿದೆ. ಶಾಸಕರು, ಜಿಲ್ಲಾಡಳಿತ ಈ ನಿಟ್ಟಿನಲ್ಲಿ ಗಮನಹರಿಸುವ ಅಗತ್ಯವಿದೆ ಎಂದು ಅವರು ಒತ್ತಾಯಿಸಿದರು.
ಸಾಹಿತಿ ಮೇಕನಗದ್ದೆಲಕ್ಷö್ಮಣಗೌಡ ಅವರ ಬೆಳದಿಂಗಳ ಜಾರೆ ಕಾದಂಬರಿಯನ್ನು ಲೋಕಾರ್ಪಣೆಗೊಳಿಸಿದ ನಿಕಟಪೂರ್ವಸಮ್ಮೇಳನಾಧ್ಯಕ್ಷ ಮಂಗಳೂರಿನ ಪ್ರಾಧ್ಯಾಪಕ ಡಾ.ಡಿ.ಆರ್.ನಾಗಪ್ಪಗೌಡ ಮಾತನಾಡಿ, ಸಾಹಿತ್ಯ ವಿಶ್ವಾತ್ಮಕ ಮೌಲ್ಯ ಪ್ರತಿಪಾದಿಸುತ್ತದೆ. ಕನ್ನಡಭಾಷೆಯನ್ನು ಉದ್ಯೋಗ ಮತ್ತು ಹಣಕ್ಕಾಗಿ ಎಂಬ ನೆಲೆಗೆ ತಂದು ನಿಲ್ಲಿಸಿz್ದÉÃವೆ. ಆಳುವವರ ಇಚ್ಛಾಶಕ್ತಿಯ ಕೊರತೆಯಿಂದ ಕನ್ನಡಕ್ಕೆ ಇಲ್ಲೆ ಸೂಕ್ತ ಸ್ಥಾನಮಾನಗಳು ಸಿಗುತ್ತಿಲ್ಲ. ಕನ್ನಡವನ್ನು ಉದ್ಯೋಗದ ಭಾಷೆಯಾಗಿ, ಅನ್ನದ ಭಾಷೆಯಾಗಿ ಬೆಳೆಸಬೇಕು ಎಂದು ಆಗ್ರಹಿಸಿದರು.
ಸಮ್ಮೇಳನದ ಸ್ವಾಗತ ಸಮಿತಿ ಅಧ್ಯಕ್ಷ ಎಂ.ಎಲ್.ಮೂರ್ತಿ ಮಾತನಾಡಿ, ಕನ್ನಡಭಾಷೆ ಆಕಾಶದಷ್ಟು ವಿಶಾಲವಾಗಿದೆ. ಕನ್ನಡಿಗರು ನಮ್ಮ ನಡೆ-ನುಡಿ, ಆಚಾರ-ವಿಚಾರಗಳಿಂದ ಕನ್ನಡ ಭಾಷೆಗೆ ಗೌರವತಂದು ಕೊಡುವಂತೆ ನಡೆದುಕೊಳ್ಳಬೇಕು. ದೇಶದ ೨೨ಭಾಷೆಗಳಲ್ಲಿ ಕನ್ನಡವೂ ಒಂದು. ಕನ್ನಡದ ಅಭಿಮಾನ ನಮ್ಮೆಲ್ಲರ ಹೃದಯದಲ್ಲಿರಬೇಕು ಎಂದರು.
ಇದೇ ಸಂದರ್ಭದಲ್ಲಿ ಹಿರಿಯ ವಕೀಲ ಬಿ.ಎಂ.ಲಕ್ಷö್ಮಣಗೌಡ ಅವರಿಗೆ ಕನ್ನಡಶ್ರೀ ಮತ್ತಿತರರಿದ್ದರು. ದೂರದರ್ಶನ ಕಲಾವಿದೆ ಗಾನವಿ, ಸಾಂಸ್ಕೃತಿಕ ಚಿಂತಕರಾದ ದೀಪಕದೊಡ್ಡಯ್ಯ, ಕಡೂರಿನ ಸಿಂಗಟಗೆರೆಸಿದ್ದಪ್ಪ, ಕನ್ನಡಸೇನೆ ಜಿಲ್ಲಾಧ್ಯಕ್ಷ ರಾಜೇಗೌಡ ಮತ್ತಿತರರನ್ನು ಗೌರವಿಸಲಾಯಿತು. ನಗರಸಭೆ ಅಧ್ಯಕ್ಷೆ ಬಿ.ಸಿ.ಸುಜಾತಾ ಶಿವಕುಮಾರ್, ಕಸಾಪ ತಾಲೂಕು ಅಧ್ಯಕ್ಷ ಬಿಸಿಲೇಹಳ್ಳಿ ಸೋಮಶೇಖರ್, ಪ್ರಮುಖರಾದ ಕಾಂತರಾಜ್, ಸಚಿನ್, ಡಾ. ಜೆ.ಪಿ.ಕೃಷ್ಣೇಗೌಡ ಮತ್ತಿತರರು ಉಪಸ್ಥಿತರಿದ್ದರು.