ಜಿಲ್ಲೆ

ಅಪೆರಲ್ ಪಾರ್ಕ್‌ಗೆ ಉದ್ದಿಮೆದಾರರ ನಿರಾಸಕ್ತಿ

ಬಳ್ಳಾರಿ : ತಾಲೂಕಿನ ಸಂಜೀವರಾಯನ ಕೋಟೆ ಬಳಿ ರಾಜ್ಯ ಸರ್ಕಾರ ನಿರ್ಮಿಸಲು ಉದ್ದೇಶಿಸಿರುವ ಜೀನ್ಸ್ ಅಪೆರಲ್ ಪಾರ್ಕ್ ಉದ್ಯಮ ಆರಂಭಿಸಲು ಆನ್‌ಲೈನ್ ಅರ್ಜಿ ಆಹ್ವಾನಿಸಿದ್ದು, ಉದ್ಯಮಿಗಳು ನಿರಾಸಕ್ತಿ ವಹಿಸುತ್ತಿದ್ದಾರೆ ಎಂಬ ಚರ್ಚೆಯಿದೆ.

ರಾಜ್ಯಸರ್ಕಾರದ ಮಹತ್ವದ ಯೋಜನೆಗಳಲ್ಲಿ ಒಂದು. ಐಸಿಸಿ ನಾಯಕ ರಾಹುಲ್ ಗಾಂಧಿಯ ಭಾರತ್ ಜೋಡೋ ಯಾತ್ರೆ ವಿಧಾನಸಭಾ ಮತ್ತು ಲೋಕಸಭಾ ಚುನಾವಣೆಯ ಪ್ರಚಾರದ ವೇಳೆ ಬಳ್ಳಾರಿಯಲ್ಲಿ ಜೀನ್ಸ್ ಅಪೆರಲ್ ಪಾರ್ಕ್ ಆರಂಭಿಸುವ ಬಗ್ಗೆ ಭರವಸೆ ನೀಡಿದ್ದರು. ಅದರಂತೆ, ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿ (ಕೆಐಎಡಿಬಿ) ಈಗಾಗಲೇ ಗ್ರಾಮದಲ್ಲಿ 154 ಎಕರೆ ಭೂಮಿಯನ್ನು ಎಕರೆಗೆ 40 ಲಕ್ಷ ರೂ. ದಂತೆ ಸ್ವಾಧೀನಪಡಿಸಿಕೊಂಡಿದೆ. ಈ ಸ್ಥಳದಲ್ಲಿ 500ಕ್ಕೂ ಹೆಚ್ಚು ಜೀನ್ಸ್ ಉತ್ಪಾದನಾ ಹಂತಗಳಾದ ಸ್ಟಿಚಿಂಗ್, ವಾಷಿಂಗ್, ಐರನ್, ಪ್ಯಾಕಿಂಗ್, ಮಾರಾಟವನ್ನು ಒಂದೇ ಸೂರಿನಡಿ ತರುವುದು ಯೋಜನೆಯ ಮುಖ್ಯ ಉದ್ದೇಶವಾಗಿದೆ. ಆದ್ದರಿಂದ, ಈಗಾಗಲೇ ಸ್ಥಳೀಯ ಉದ್ದಿಮೆದಾರರ ಜತೆ ಜಿಲ್ಲಾಡಳಿತ, ಕೆ ಐಎಡಿಬಿ, ಕೈಮಗ್ಗ ಮತ್ತು ಜವಳಿ ಇಲಾಖೆಯೊಂದಿಗೆ ಎರಡು ಸಭೆ ಕೂಡ ನಡೆಸಲಾಗಿತ್ತು. ಆರಂಭದಲ್ಲೇ 300ಕ್ಕೂ ಅಧಿಕ ಉದ್ದಿಮೆದಾರರು ಘಟಕ ಪ್ರಾರಂಭಿಸಲು ಉತ್ಸುಕರಾಗಿದ್ದರು. ಆದರೆ, ಕೆಲ ತಿಂಗಳ ಹಿಂದಯೇ ಆನ್‌ಲೈನ್ ಅರ್ಜಿ ಆಹ್ವಾನಿಸಿದ್ದು ಕೇವಲ ನಾಲ್ಕು ಉದ್ದಿಮೆದಾರರು ಮಾತ್ರ ಅರ್ಜಿ ಸಲ್ಲಿಸಿದ್ದಾರೆ ಎಂಬುದಾಗಿ ಇಲಾಖೆಯ ಮೂಲಗಳಿಂದ ಖಚಿತಪಡಿಸಿದವು.

ಏಕೆ ನಿರಾಸಕ್ತಿ : ಇಲ್ಲಿನ ಮುಂಡರಗಿ ಲೇಔಟ್‌ನಲ್ಲಿ ಕೆಲ ವರ್ಷಗಳ ಹಿಂದಯೇ ವಾಷಿಂಗ್ ಘಟಕಗಳನ್ನು ಪ್ರಾರಂಭಿಸಲಾಗಿದೆ. ಆದರೆ, ತ್ಯಾಜ್ಯ ನೀರು ಸಂಸ್ಕರಣಾ ಘಟಕ, ಆಗ್ನಿಶಾಮಕ ಠಾಣೆ, ಪ್ರಾಥಮಿಕ ಆರೋಗ್ಯ ಕೇಂದ್ರ, ಸ್ಥಳೀಯ ಪೊಲೀಸ್ ಠಾಣೆ, ಶೌಚಗೃಹ ಸೇರಿದಂತೆ ಮೂಲ ಸೌಕರ್ಯಗಳು ಈವರೆಗೆ ಒದಗಿಸಿಲ್ಲ. ಇನ್ನೂ ಹೊಸ ಜೀನ್ಸ್ ಅಪೆರಲ್ ಪಾರ್ಕ್‌ನಲ್ಲಿ ಈ ಎಲ್ಲ ಸೌಲಭ್ಯಗಳು ದೊರೆಯಲು ಇನ್ನೇಷ್ಟು ವರ್ಷ ಕಾಯಬೇಕಾಗುತ್ತದೆ ?. ಸದ್ಯ ಜೀನ್ಸ್ ಉದ್ಯಮದಾರರು ಸಾಲದ ಸುಳಿಯಲ್ಲಿ ಸಿಲುಕಿ ನಷ್ಟ ಅನುಭವಿಸುತ್ತಿದ್ದಾರೆ. ಇದರ ನಡುವೆ ಸರ್ಕಾರ ಅಪೆರಲ್ ಪಾರ್ಕ್‌ನಲ್ಲಿ ಘಟಕ ಪ್ರಾರಂಭಕ್ಕೆ ಪ್ರತಿ ಎಕರೆಗೆ 1.35 ಕೋಟಿ ರೂ. ದರ ನಿಗದಿ ಮಾಡಿದೆ. ಇಷ್ಟು ಹಣ ವ್ಯಯಿಸಿ ಜೀನ್ಸ್ ಘಟಕ ಪ್ರಾರಂಭಿಸಲು ಉದ್ದಿಮೆದಾರರು ಹಿಂದೇಟು ಹಾಕುತ್ತಿದ್ದಾರೆ ಎಂಬುದಾಗಿ ತಿಳಿದು ಬಂದಿದೆ.

ಹೆಚ್ಚುವರಿ ಭೂಮಿಗೆ ಖರೀದಿಗೆ ಪ್ರಸ್ತಾವನೆ : ಅಪೆರಲ್ ಪಾರ್ಕ್‌ನಲ್ಲಿನ ಎಲ್ಲ ಮಳಿಗೆಳಿಗೆ ಸಾಗಲು ವಾಹನ ಸಂಚಾರಕ್ಕೆ 25 ಕೋಟಿ ರೂ. ವೆಚ್ಚದಲ್ಲಿ ಸುಸ್ಸಜ್ಜಿತ ರಸ್ತೆ ನಿರ್ಮಿಸಲು ಉದ್ದೇಶಿಸಲಾಗಿದ್ದು, ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡಿದೆ. ಜೀನ್ಸ್ ಅಪೆರಲ್ ಪಾರ್ಕ್ ನಿರ್ಮಾಣದ 154 ಎಕರೆ ಸ್ಥಳದ ಸಮೀಪದಲ್ಲಿಯೇ ಇನ್ನೂ 460 ಎಕರೆ ಭೂಮಿಯನ್ನು ಖರೀದಿಸಿ ವಿಸ್ತಾರವಾದ ಘಟಕ ಪ್ರಾರಂಭಿಸುವ ಚಿಂತನೆ ಸರ್ಕಾರದಿಂದ ನಡೆದಿದೆ. ಈಗಾಗಲೇ, ಸ್ಥಳ ಗುರುತಿಸಿದ್ದು ಸರ್ಕಾರಕ್ಕೆ ಪ್ರಸ್ತಾವನೆ ಕಳುಹಿಸಿದೆ ಅನುಮೋದನೆ ನೀಡುವುದ ಅಥವಾ ತಿರಸ್ಕಾರಗೊಳಿಸುವುದು ಎಂಬುದು ಕಾದು ನೋಡಬೇಕಿದೆ. ಅಲ್ಲದೆ, ಕಳೆದ ಕೆಲ ತಿಂಗಳ ಹಿಂದೆ ಜೀನ್ಸ್ ಅಪೆರಲ್ ಪಾರ್ಕ್ ಶಂಕುಸ್ಥಾಪನೆ ಕಾರ್ಯಕ್ರಮಕ್ಕೆ ಎಐಸಿಸಿ ನಾಯಕ ರಾಹುಲ್ ಗಾಂಧಿ ಅವರಿಂದ ನೆರವೇರಿಸುವ ಉದ್ದೇಶವಿತ್ತು. ಸಿಎಂ, ಡಿಸಿಎಂ ಹಾಗೂ ಕೈಗಾರಿಕಾ ಸಚಿವರು ಆಹ್ವಾನಿಸಿ ವಿರೋಧ ಪಕ್ಷಗಳ ಟೀಕೆಗಳಿಗೆ ಉತ್ತರಿಸಲು ಸರ್ಕಾರ ನಿರ್ಧಾರಿಸುವ ಚಿಂತನೆ ನಡೆದಿತ್ತು. ಕೆಲ ರಾಜಕೀಯ ಕಾರಣಗಳಿಂದ ಶಂಕು ಸ್ಥಾಪನೆ ಕಾರ್ಯಕ್ರಮ ಮುಂದೂಡಲಾಯಿತು.

ಕೋಟ್... ಆನ್‌ಲೈನ್ ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕ ಇಲ್ಲ. ಅಪೆರಲ್ ಪಾರ್ಕ್ ಅಭಿವೃದ್ಧಿಯಾದಂತೆ ಉದ್ದಿಮೆದಾರರು ಸಂಖ್ಯೆ ಹೆಚ್ಚಲಿದೆ. ಹೆಚ್ಚುವರಿಯಾಗಿ ಭೂಮಿ ಖರೀದಿಸಿ ವಿಶಾಲವಾದ ಪ್ರದೇಶದಲ್ಲಿ ಘಟಕ ಆರಂಭಿಸಲು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ.

- ಬಿ.ನಾಗೇಂದ್ರ, ಗ್ರಾಮೀಣ ಶಾಸಕ, ಬಳ್ಳಾರಿ