‘ಅಪರೂಪ’ ಚಲನಚಿತ್ರ ಜು.14 ರಂದು ರಾಜ್ಯಾದ್ಯಂತ ಬಿಡುಗಡೆಯಾಗಲಿದೆ. ಹೊಸಬರೇ ಈ ಚಿತ್ರ ತಂಡದಲ್ಲಿದ್ದು, ಪ್ರೇಮಕಥೆಯನ್ನು ವಿಭಿನ್ನವಾಗಿ ಹೇಳಲಾಗಿದೆ. ಹೀಗಾಗಿ ಪ್ರೇಕ್ಷಕರು ಪ್ರೋತ್ಸಾಹಿಸಬೇಕೆಂದು ನಿರ್ದೇಶಕ ಮಹೇಶ್ ಮನವಿ ಮಾಡಿದರು.
ಸುಘೋಷ್ ಚಿತ್ರದ ನಾಯಕ, ಋತಿಕಾ ನಾಯಕಿಯಾಗಿ ನಟಿಸಿದ್ದಾರೆ. ಬೆಂಗಳೂರು, ಮೈಸೂರು, ಚಿಕ್ಕಮಗಳೂರು ಹಾಗೂ ಕಾಶ್ಮೀರದಲ್ಲಿ ಚಿತ್ರೀಕರಿಸಲಾಗಿದೆ. ಎರಡು ಗಂಟೆ ಹೇಗೆ ಕಳೆಯುತ್ತದೆ ಎಂಬುದೇ ಪ್ರೇಕ್ಷಕರಿಗೆ ತಿಳಿಯದಂತೆ ಚಿತ್ರ ಸಾಗುತ್ತದೆ. ನಮಗೆ ಯಾರೂ ಶತ್ರುಗಳಿಲ್ಲ, ಆದರೆ ನಮ್ಮಲ್ಲಿನ ಅಹಂ ಸ್ವತಃ ತಾನಾಗಿ ಖಳನಾಯಕನಂತೆ ವರ್ತಿಸುತ್ತದೆ ಎಂಬ ವಿಭಿನ್ನ ಕಥೆ ಹೊಂದಿದೆ ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ನಾಯಕ ನಟ ಸುಘೋಷ್, ನಾಯಕಿ ಋತಿಕಾ, ತಂಡದ ಸಂದೀಪ್ ಇದ್ದರು.