ಕಂಪ್ಲಿ: ತಾಲೂಕಿನ ಎಮ್ಮಿಗನೂರು ಗ್ರಾಮದ ಪ್ಯಾಟೆ ಬಸವೇಶ್ವರ ದೇವಸ್ಥಾನ ಬಳಿಯ ಸಮುದಾಯ ಭವನದಲ್ಲಿ ಶ್ರೀಜಡಿದ್ಧೇಶ್ವರ ಎಲೆಕ್ಟ್ರಿಷಿಯನ್ ಹಾಗೂ ಪ್ಲಂಬರ್ ಸಂಘ ಉದ್ಘಾಟನಾ ಸಮಾರಂಭ ನಡೆಯಿತು.
ಎಚ್.ವೀರಾಪುರ ಜ್ಞಾನ ಜ್ಯೋತಿ ಶಿವಲಿಂಗ ಮಂದಿರದ ಜಡೇಶ ತಾತ ಮಾತನಾಡಿ, ಕಾಯಕವನ್ನು ಮನಶುದ್ಧಿ ಮತ್ತು ಮನಪೂರ್ವಕವಾಗಿ ನಿರ್ವಹಿಸಿದಲ್ಲಿ ಅದು ಬಹುಕಾಲ ಬಾಳುತ್ತದೆ. ಯಾವುದೇ ಕಾಯಕ ಮೇಲು ಕೀಳಲ್ಲ. ಮಕ್ಕಳಿಗೆ ಬಾಲ್ಯದಲ್ಲಿಯೇ ಸಂಸ್ಕಾರ ನೀಡುವಲ್ಲಿ ಪಾಲಕರು ಜಾಗೃತಿ ತೋರಬೇಕು ಎಂದರು.
ಗ್ರಾಪಂ ಉಪಾಧ್ಯಕ್ಷ ಎಚ್.ಗಾದಿಲಿಂಗಪ್ಪ, ಸದಸ್ಯ ಲೋಕೇಶ್. ಮುಖಂಡ ಹುಡೇದ್ ಜಡೆಮೂರ್ತಿ, ಸಂಘದ ಅಧ್ಯಕ್ಷ ಎಂ.ಜಡೇಶಸ್ವಾಮಿ, ಪ್ರಮುಖರಾದ ಸಜ್ಜನ್ ರವಿಕುಮಾರ್, ಕೆ.ಎಂ.ಘನಮಠಸ್ವಾಮಿ, ಚಿಪ್ಪಿಗರ ಜಡೇಶ, ಶಿವಾಜಿ ರಾಘವೇಂದ್ರ, ಪೀರ್, ಭಾ?, ಪೀರ್‌ಸಾಬ್, ಮೌನೇಶ್, ಪಿ.ಜಡೇಶ ಸಪ್ತಗಿರಿ ಶೆಟ್ಟಿ ಇತರರಿದ್ದರು.