ಕೊಲ್ಹಾರ ಪಟ್ಟಣ ಸಮೀಪದ ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿ ನತ್ಯಾಜ್ಯ ಕಸ ಸುಡುತ್ತಿರುವುದರಿಂದ ದಟ್ಟವಾದ ಹೊಗೆ ರಸ್ತೆಯಲ್ಲಿ ಆವರಿಸಿರುವುದು. 
ಜಿಲ್ಲೆ

ನತ್ಯಾಜ್ಯದ ಹೊಗೆಯಿಂದ ಆತಂಕ

ಗಿರೀಶ ಸಗರ

ಕೊಲ್ಹಾರ: ಪಟ್ಟಣ ಪಂಚಾಯಿತಿ ಪೌರಕಾರ್ಮಿಕರು ಎಸೆಯುತ್ತಿರುವ ನತ್ಯಾಜ್ಯ ಕಸದಿಂದ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಚರಿಸುವ ವಾಹನ ಸವಾರರಿಗೆ ಆತಂಕ ಎದುರಾಗಿದ್ದು ಸಂಬಂಧಪಟ್ಟ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲಾ ಅನ್ನದಾತ ಯುವ ರೈತ ಸಂದ ಅಧ್ಯ ಸುರೇಶ ಗರಸಂಗಿ ಆಗ್ರಹಿಸಿದ್ದಾರೆ.

ಪಟ್ಟಣ ಪಂಚಾಯಿತಿ ಅಧಿಕಾರಿಗಳ ರ್ನಿಲ್ಯದಿಂದಾಗಿ ರಾಷ್ಟ್ರೀಯ ಹೆದ್ದಾರಿ 218 ಪಕ್ಕದಲ್ಲಿ ಪಟ್ಟಣ ಪಂಚಾಯಿತಿಯ ಸಿಬ್ಬಂದಿ ಎಸೆಯುವ ನತ್ಯಾಜ್ಯ ಕಸವನ್ನು ಸುಡಲಾಗುತ್ತಿದೆ. ಅದರಿಂದ ಹೊರಸೂಸುವ ಅಪಾಯಕಾರಿ ಹೊಗೆಯಿಂದ ವಾಹನ ಸವಾರರಿಗೆ ಸಂಕಷ್ಟ ಎದುರಾಗಿದೆ.

ದ್ದಾರಿಯಲ್ಲಿ ವಾಹನಗಳು ಬರುವುದು ಚಾಲಕರಿಗೆ ಕಾಣಿಸದಂತಾಗಿದೆ. ಇದರಿಂದ ಜೀವಕ್ಕೆ ತೊಂದರೆ ಆಗುವುದಲ್ಲದೆ ಹೊಗೆಯಿಂದ ಅಪಘಾತ ಸಂಭವಿಸುವ ಆತಂಕ ಶುರುವಾಗಿದೆ. ಸಂಬಂಧಿತರು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡಿದ್ದಾರೆ.