ಕೊಡಗು: ಭಾರತದ ಪ್ರಥಮ ಮಹಿಳಾ ಹಾಕಿ ತೀರ್ಪುಗಾರ್ತಿ ಪುಚ್ಚಿಮಂಡ ಅನುಪಮಾ ಅವರು ಭಾನುವಾರ ಕರೊನಾ ಸೋಂಕಿನಿಂದ ನಿಧರಾಗಿದ್ದಾರೆ.
ಕೊಡಗು ಜಿಲ್ಲೆ ನಾಪೋಕ್ಲು ಬೇತು ಗ್ರಾಮದ ನಿವಾಸಿಯಾಗಿದ್ದ ಪುಚ್ಚಿಮಂಡ ಅನುಪಮಾ ಬೆಂಗಳೂರಿನಲ್ಲಿ ನೆಲೆಸಿದ್ದರು. ಒಂದು ವಾರದಿಂದ ಅನಾರೋಗ್ಯಕ್ಕೀಡಾಗಿದ್ದ ಅವರಿಗೆ ಕೊರೊನಾ ಪಾಸಿಟಿವ್ ಆಗಿತ್ತು.
ಇದನ್ನೂ ಓದಿರಿ: ಕಣ್ಣುಮಿಟುಕಿಸಿ ಮೆಸೇಜ್ನಲ್ಲಿ ಮಾತನಾಡಿದ ಆಕೆಯೇ ಬಾಳಸಂಗಾತಿ ಅಂತ ಅದ್ಹೇಗಪ್ಪಾ ಅಂದ್ಕೊಂಡ್ಬಿಟ್ಟಿಯಾ!
ಈ ಹಿನ್ನೆಲೆಯಲ್ಲಿ ಶಾಂತಿ ನಗರ ಖಾಸಗಿ ಆಸ್ಪತ್ರೆಯಲ್ಲಿ ಅನುಪಮಾ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ, ಚಿಕಿತ್ಸೆ ಫಲಿಸದೆ ಬೆಳಗ್ಗೆ 9.30ಕ್ಕೆ ಮೃತಪಟ್ಟಿದ್ದಾರೆ.
ಅನುಪಮಾ ಅವರು ನೂರು ಅಂತಾರಾಷ್ಟ್ರೀಯ ಹಾಕಿ ಪಂದ್ಯದ ತೀರ್ಪುಗಾರಿಕೆ ಮಾಡಿದ್ದರು. ಅನುಪಮಾ ಸಾವಿಗೆ ಅವರು ಬಂಧು-ಬಳಗ ಹಾಗೂ ಸ್ನೇಹಿತರು ಕಂಬನಿ ಮಿಡಿದಿದ್ದಾರೆ. (ದಿಗ್ವಿಜಯ ನ್ಯೂಸ್)