ಬೆಂಗಳೂರು:ಅಂತರಂಗ ಬಹಿರಂಗ ತಂಡದ 7ನೇ ನಿರ್ಮಾಣದ ‘ಅನುಗ್ರಹ’ ಪೌರಾಣಿಕ ನಾಟಕವು ಭಾನುವಾರ (ಏ.13) ಪ್ರದರ್ಶನಗೊಳ್ಳಲಿದೆ. ಈ ಹಿಂದೆ ಸಾಮಾಜಿಕ ನಾಟಕಗಳನ್ನು ನಿರ್ಮಿಸಿ ಪ್ರೇಕ್ಷಕರ ಮೆಚ್ಚುಗೆ ಪಡೆದಿರುವ ತಂಡವು ಇದೇ ಮೊದಲ ಬಾರಿಗೆ ಪೌರಾಣಿಕ ನಾಟಕವನ್ನು ಪ್ರಸ್ತುತಪಡಿಸುತ್ತಿದೆ.
ರಾಮಕೃಷ್ಣಪ್ಪ ರಚಿಸಿ, ಭಾಷ್ ರಾಘವೇಂದ್ರ ನಿರ್ದೇಶಿಸಿರುವ ಅನುಗ್ರಹ ನಾಟಕವು ಏಕಲವ್ಯನ ಜೀವನಾಧಾರಿತ ಕತೆ. ಇಲ್ಲಿಯವರೆವಿಗೂ ಕೇಳಿರುವ ಏಕಲವ್ಯನ ಕಥೆಗಿಂತ ಭಿನ್ನವಾದ ಆಯಾಮವನ್ನು ಲೇಖರು ಈ ನಾಟಕದಲ್ಲಿ ನೀಡಿದ್ದಾರೆ.
ಬಸವೇಶ್ವರನಗರದ ಕೆ.ಇ.ಎ. ಪ್ರಭಾತ್ ರಂಗಮಂದಿರದಲ್ಲಿ ಸಂಜೆ 7ಕ್ಕೆ ನಾಟಕ ಪ್ರದರ್ಶನ ಹಮ್ಮಿಕೊಳ್ಳಲಾಗಿದೆ. ಟಿಕೆಟ್ ಬುಕ್ಕಿಂಗ್ ಹಾಗೂ ಹೆಚ್ಚಿನ ಮಾಹಿತಿಗೆ ದೂ : 8660547776 ಸಂಪರ್ಕಿಸಬಹುದು.