ಕುಶಾಲನಗರ:
ಇಲ್ಲಿನ ಅನುಗ್ರಹ ಕಾಲೇಜಿನಲ್ಲಿ 69 ನೇ ಕನ್ನಡ ರಾಜ್ಯೋತ್ಸವವನ್ನು ಶುಕ್ರವಾರ ಆಚರಿಸಲಾಯಿತು. ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅನುಗ್ರಹ ಎಜುಕೇಶನ್ ಟ್ರಸ್ಟ್ ಅಧ್ಯಕ್ಷ ಎಸ್.ಕೆ. ಸತೀಸ್, ಕನ್ನಡ ನಾಡು ದೇಶಕ್ಕೆ ನೀಡಿದ ವಿಶೇಷ ಕೊಡುಗೆಗಳನ್ನು ಸ್ಮರಿಸುತ್ತಾ ಕನ್ನಡ ನೆಲ ಜಲ ಗಾಳಿ ಸೇವಿಸಿದ ಪ್ರತಿಯೊಬ್ಬರೂ ಬದುಕಿನುದ್ದಕ್ಕೂ ಕನ್ನಾಡಭಿಮಾನವನ್ಮು ಹೊಂದಿರಬೇಕು. ನವಂಬರ್ ತಿಂಗಳಿಗಷ್ಟೇ ಅಭಿಮಾನ ಸೀಮಿತವಾಗಬಾರದು. ವಿದ್ಯಾರ್ಥಿಗಳು ಉತ್ತಮ ಗುಣ ನಡತೆಯನ್ನು ಬೆಳೆಸಿಕೊಂಡು ಸಾಧಕರಾಗುವ ಮೂಲಕ ಕನ್ನಡ ನಾಡಿಗೆ ಕೊಡುಗೆಯನ್ನು ನೀಡುವಂತವರಾಗಬೇಕು ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಪ್ರಾಂಶುಪಾಲ ಪ್ರೊ. ಹೆಚ್.ಬಿ. ಲಿಂಗಮೂರ್ತಿ, ಕನ್ನಡನಾಡಿನ ಸಾರ, ಸತ್ವ, ಕರ್ನಾಟಕದ ಗತವೈಭವನ್ನು ಪರಿಚಯಿಸುವುದರ ಜತೆಗೆ ಕನ್ನಡವನ್ನು ಬಳಸಿದಾಗ ಮಾತ್ರ ಉಳಿಸಿ ಬೆಳೆಸುವುದಕ್ಕೆ ಸಾಧ್ಯ ಎಂದರು.
ಇದೇ ಸಂದರ್ಭದಲ್ಲಿ ಕ್ರೀಡೆಯಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿಗಳನ್ನು ಗೌರವಿಸಲಾಯಿತು. ವಿದ್ಯಾರ್ಥಿಗಳು ಕನ್ನಡದ ಹಾಡುಗಳನ್ನು ಹಾಡುವ ಮೂಲಕ ಕನ್ನಡಾಭಿಮಾನ ಮೆರೆದರು. ಕಾರ್ಯಕ್ರಮದಲ್ಲಿ ಉಪನ್ಯಾಸಕಿ ಲೀಲಾಕುಮಾರಿ ತೊಡಿಕಾನ, ಉಪನ್ಯಾಸಕ ವೃಂದ ಹಾಗೂ ವಿದ್ಯಾರ್ಥಿಗಳು ಇದ್ದರು.