Antibiotics require a loving attitude 
ಜಿಲ್ಲೆ

ಪ್ರತಿಜೀವಿ ಪ್ರೀತಿಸುವ ಮನೋಭಾವನೆ ಅಗತ್ಯ

Vijayapura - Desk - Doddanagouda Gudihindin

ಬಾದಾಮಿ: ಹವಾಗುಣ ಬದಲಾವಣೆ ಎಂಬುದು ಪ್ರತಿನಿತ್ಯದ ವಿದ್ಯಮಾನ ಎಂದು ಪ್ರಾಧ್ಯಾಪಕ ಶಶಿಧರ ಮೂಲಿಮನಿ ಹೇಳಿದರು.

ತಾಲೂಕಿನ ಯಂಕಂಚಿ ಮಣಿನಾಗರ ಗ್ರಾಮದ ಕಸ್ತೂರಬಾ ಗಾಂಧಿ ಬಾಲಕಿಯರ ವಸತಿ ಶಾಲೆಯಲ್ಲಿ ಇಕೋ ಕ್ಲಬ್ ಸಂಘದ ಅಡಿಯಲ್ಲಿ ಸಾಲುಮರದ ತಿಮ್ಮಕ್ಕ ಇಕೋ ಕ್ಲಬ್ ಉದ್ಘಾಟಿಸಿ ಮಾತನಾಡಿದ ಅವರು, ಪರಿಸರದ ಅವಘಡಗಳಿಗೆ ಮನುಷ್ಯನೇ ಕಾರಣನಾಗುತ್ತಿರುವುದು ದುರದೃಷ್ಟಕರ. ನವ ಪೀಳಿಗೆ ಪರಿಸರವನ್ನು ಪ್ರೀತಿಸಬೇಕು ಎಂದರು.

ದುರಾಸೆಯಿಂದ ಪರಿಸರ ಹಾಳು ಮಾಡುತ್ತಿದ್ದೇವೆ. ಇದು ನಿಲ್ಲಬೇಕೆಂದರೆ ಇಂದಿನ ಪೀಳಿಗೆ ಜಾಗೃತವಾಗಬೇಕು. ಪರಿಸರದ ಉಳಿವಿಗಾಗಿ ನಾವೆಲ್ಲರೂ ಸಾಲುಮರದ ತಿಮ್ಮಕ್ಕನ ರೀತಿಯಲ್ಲಿ ಕೆಲಸ ಮಾಡಬೇಕು ಎಂದರು.

ಕೆಜಿಬಿವಿ ಶಾಲೆಯ ಮುಖ್ಯಶಿಕ್ಷಕಿ ಬಸಮ್ಮ ನರಸಾಪೂರ ಅಧ್ಯಕ್ಷತೆ ವಹಿಸಿದ್ದರು. ಶಿಕ್ಷಕಿ ಅನಿತಾ ಜಾಲಗೇರಿ ಕಾರ್ಯಕ್ರಮವನ್ನು ನಿರೂಪಿಸಿದರು. ಇನಾಂ ಹುಲ್ಲಿಕೇರಿ, ಸಮೂಹ ಸಂಪನ್ಮೂಲ ವ್ಯಕ್ತಿ ಆರ್.ವಿ. ಗೌಡಪ್ಪಗೌಡ್ರ ವಂದಿಸಿದರು.