ಕುಂಬಳೆ: ಕುಂಬಳೆಯಲ್ಲಿ ಹಾದುಹೋಗುವ ರಾ.ಹೆದ್ದಾರಿಯಲ್ಲಿ ಟೋಲ್ ಪ್ಲಾಜಾವನ್ನು ನಿರ್ವಹಿಸಲು ಮತ್ತು ಟೋಲ್ ಸಂಗ್ರಹಿಸಲು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು ಪ್ರಸ್ತುತ ಕೇಂದ್ರ ಸರ್ಕಾರದ ಅನುಮತಿ ಪಡೆದಿಲ್ಲ ಎಂದು ಹೈಕೋರ್ಟ್ ಹೇಳಿದೆ.
ಅವೈಜ್ಞಾನಿಕವಾಗಿ ಕುಂಬಳೆಯಲ್ಲಿ ನಿರ್ಮಿಸಲಾಗುತ್ತಿರುವ ಟೋಲ್ ಪ್ಲಾಜಾ ನಿಲ್ಲಿಸುವಂತೆ ಟೋಲ್ ವಿರೋಧಿ ಕ್ರಿಯಾ ಸಮಿತಿ ತುರ್ತು ಸಭೆ ನಡೆಸಿ ಕಾಸರಗೋಡಿನ ಬಿಜೆಪಿ ನಾಯಕತ್ವ ಹಾಗೂ ಕೇಂದ್ರ ಸರ್ಕಾರ ಮಧ್ಯಪ್ರವೇಶಿಸಿ ಕುಂಬಳೆಯಲ್ಲಿ 22 ಕಿ.ಮೀ. ಅಂತರದಲ್ಲಿ ಬರಲು ಉದ್ದೇಶಿಸಿರುವ ಟೋಲ್ ಪ್ಲಾಜಾವನ್ನು ತಡೆಯಬೇಕು ಎಂದು ಆಗ್ರಹಿಸಿದೆ.
ಕ್ರಿಯಾ ಸಮಿತಿ ಪ್ರಧಾನ ಸಂಚಾಲಕ ಸಿ.ಎ.ಜುಬೇರ್ ಅಧ್ಯಕ್ಷತೆ ವಹಿಸಿದ್ದರು. ಕ್ರಿಯಾ ಸಮಿತಿ ಸದಸ್ಯರಾದ ಅಶ್ರಫ್ ಕಾರ್ಲೆ, ನಾಸರ್ ಮೊಗ್ರಾಲ್, ಎ.ಕೆ.ಆರಿಫ್, ಲಕ್ಷ್ಮಣ ಪ್ರಭು ಕುಂಬಳೆ, ರಘುದೇವನ್, ಅಬ್ದುಲ್ಲತೀಫ್ ಕುಂಬ್ಳೆ, ತಾಜುದ್ದೀನ್ ಮೊಗ್ರಾಲ್, ಕೆ.ಬಿ.ಯೂಸುಫ್, ಪೃಥ್ವಿರಾಜ್ ಶೆಟ್ಟಿ, ಜಗನ್ನಾಥ್ ಶೆಟ್ಟಿ ಕುಂಬ್ಳೆ, ಫಾರೂಕ್ ಶಿರಿಯ, ಅಝೀಝ್ ಕಳತ್ತೂರು, ಬಿ.ಎನ್.ಮುಹಮ್ಮದಾಲಿ, ಜಮ್ಶೀರ್ ಮೊಗ್ರಾಲ್ ಮೊದಲಾದವರು ಇದ್ದರು.