ಸೂಲಿಬೆಲೆ ವಿವೇಕಾನಂದ ಪ್ರೌಢಶಾಲೆಯಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ಹಮ್ಮಿಕೊಂಡಿದ್ದ ತಂಬಾಕು ವಿರೋಧಿ ದಿನಾಚರಣೆಗೆ ಗ್ರಾಪಂ ಅಧ್ಯಕ್ಷ ಜನಾರ್ಧನರೆಡ್ಡಿ ಚಾಲನೆ ನೀಡಿದರು.  
ಜಿಲ್ಲೆ

ಯುವ ಜನರೇ ದುಶ್ಚಟಕ್ಕೆ ದಾಸರಾಗಬೇಡಿ

ಶಿವರಾಜ.ಎಂ

ವಿಜಯವಾಣಿ ಸುದ್ದಿಜಾಲ ಸೂಲಿಬೆಲೆ
ಇತ್ತೀಚಿನ ದಿನಗಳಲ್ಲಿ ಯುವ ಸಮುದಾಯ ದುಶ್ಚಟ್ಟಗಳಿಗೆ ಬಲಿಯಾಗಿ ಸಮಾಜಘಾತುಕರಾಗಿ ಪರಿವರ್ತನೆಯಾಗುತ್ತಿದ್ದಾರೆ ಎಂದು ಧರ್ಮಸ್ಥಳ ಗ್ರಾಮಾಭಿವೃದ್ದಿಯೋಜನೆಯ ಜಿಲ್ಲಾ ನಿರ್ದೇಶಕ ಅಸ್ಗರ್ ಉಮಾರಬ್ಬ ಹೇಳಿದರು.
ಸೂಲಿಬೆಲೆ ವಿವೇಕಾನಂದ ಪ್ರೌಢಶಾಲೆಯಲ್ಲಿ ದರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ವತಿಯಿಂದ ಸೋಮವಾರ ಹಮ್ಮಿಕೊಂಡಿದ್ದ ತಂಬಾಕು ವಿರೋಧಿ ದಿನಾಚರಣೆ ಉದ್ಘಾಟಿಸಿ ಮಾತನಾಡಿದರು. ಶೇ.60 ಯುವಕರು ಮಾದಕ ವಸ್ತುಗಳ ವ್ಯಸನಿಗಳಾಗುತ್ತಿದ್ದಾರೆ. ಶೇ.40ಕ್ಕೂ ಹೆಚ್ಚು ಯುವ ಸಮುದಾಯ ಇದಕ್ಕೆ ಬಲಿ ಆಗುತ್ತಿರುವುದು ಕಳವಳಕಾರಿ ವಿಷಯವಾಗಿದೆ. ಜೀವನವನ್ನು ್ಯಾಷನ್ ರೀತಿಯಲ್ಲಿ ಅನುಭವಿಸುವ ಉದ್ದೇಶದಿಂದ ಯುವ ಸಮುದಾಯ ಭವಿಷ್ಯ ಹಾಳು ಮಾಡಿಕೊಳ್ಳುತ್ತಿದೆ ಎಂದರು.
ತಂದೆ, ತಾಯಿಗಳು ನಿಮ್ಮ ಮೇಲೆ ಇಟ್ಟಿರುವ ನೀರಿಕ್ಷೆಗಳನ್ನು ಈಡೇರಿಸಿ, ಮಾದಕ ವಸ್ತುಗಳ ವ್ಯಸನಿಗಳಾದರೆ ನಿಮ್ಮ ಭವಿಷ್ಯ ಬದಲಾಯಿಸಲು ಸಾಧ್ಯವಿಲ್ಲ ಎಂದು ಸಲಹೆ ನೀಡಿದರು.

ಕ್ಯಾನ್ಸರ್ ಬರುವ ಸಂಭವ ತಂಬಾಕು ರಹಿತ ದಿನಾಚರಣೆಯನ್ನು 1983ರ ಮೇ 31 ರಂದು ಜಾರಿ ಮಾಡಲಾಯಿತು, ಮಕ್ಕಳಲ್ಲಿ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಈ ಕಾರ್ಯಕ್ರಮ ಅರ್ಥಪೂರ್ಣವಾಗಿದೆ ಎಂದು ಜಿಪಂ ಮಾಜಿ ಅಧ್ಯಕ್ಷ ವಿ.ಪ್ರಸಾದ್ ಹೇಳಿದರು. 14ರಿಂದ 21 ವಯೋಮಾನದವರು ಹೆಚ್ಚಿನದಾಗಿ ಮಾದಕ ವ್ಯಸನಿಗಳಾಗುತ್ತಿದ್ದು, ಸೀಗರೇಟ್ ಸೇದುವವರು ಹಾಗೂ ಅದರ ಹೊಗೆ ಕುಡಿಯುವವರು ಲಗ್ಸ್ ಕ್ಯಾನ್ಸರ್, ಗಂಟಲು, ಹೃದಯಘಾತದಂದ ವ್ಯಾದಿಗಳಿಗೆ ತುತ್ತಾಗುತ್ತಾರೆ ಎಂದರು.