ಜಿಲ್ಲೆ

ಮಾದಕ ದ್ರವ್ಯ ವ್ಯಸನ ವಿರೋಧಿ ಶಿಬಿರ

ಸೌಮ್ಯ ಆರ್

ಹಳೆಯಂಗಡಿ: ಮಾದಕ ವಸ್ತುಗಳು ಮಕ್ಕಳ ಆರೋಗ್ಯದ ಮೇಲೆ ದುಷ್ಪಾರಿಣಾಮ ಬೀರುವ ಜತೆಗೆ ಮಾನಸಿಕ ಖಿನ್ನತೆ ಉಂಟಾಗಿ ಜೀವ ನಾಶವಾಗುವ ಭೀತಿ ಇದ್ದು, ಈ ಬಗ್ಗೆ ಜನರಲ್ಲಿ ಅರಿವು ಮೂಡಿಸುವ ಕಾರ್ಯ ಅಭಿನಂದನೀಯ ಎಂದು ವಿಶ್ರಾಂತ ಸಭಾಪಾಲಕ ರೆ.ಐಸನ್ ಪಾಲನ್ನ ಹೇಳಿದರು.

ಹಳೆಯಂಗಡಿ ಯೋಗ ಮಂದಿರದಲ್ಲಿ ಭಾರತದ ಕಾನೂನು ನೆರವು ಕೇಂದ್ರ, ವಿಜಯ ಮಾಸ್ಟರ್ ಟ್ರಸ್ಟ್, ಭಾರತದ ಕ್ರೈಸ್ತ ಚರ್ಚ್‌ಗಳ ಒಕ್ಕೂಟ ಸಹಯೋಗದಲ್ಲಿ ನಡೆದಿರುವ ಮಾದಕ ದ್ರವ್ಯ ವ್ಯಸನ ವಿರೋಧಿ ಕಾನೂನು ಮಾಹಿತಿ ಶಿಬಿರ ಉದ್ಘಾಟಿಸಿ, ಮಾತನಾಡಿದರು.

ಮಂಗಳೂರು ಭಾರತದ ಕಾನೂನು ನೆರವು ಕೇಂದ್ರ ಅಧ್ಯಕ್ಷ ಡೇನಿಯಲ್ ದೇವರಾಜ್ ಅಧ್ಯಕ್ಷತೆ ವಹಿಸಿದ್ದರು.

ಸಂಪನ್ಮೂಲ ವ್ಯಕ್ತಿಗಳಾಗಿ ಡಾ.ಮಂಜುನಾಥ್ ಗದಗ, ಮನೋವೈದ್ಯ ಡಾ.ಮಿಥುನ್, ಹೈಕೋರ್ಟ್ ವಕೀಲ ರಾಮಕೃಷ್ಣ ಭಟ್,ಹರಿಣಿ ಬಂಗೇರಾ ಮಾದಕ ದ್ರವ್ಯ ಕಾನೂನು ಮಾಹಿತಿ ನೀಡಿದರು.

ಬೊಲ್ಮ ಸಿಎಸ್ ಐ ಚರ್ಚ್ ಸಭಾಪಾಲಕ ವಿನಯಲಾಲ್ ಬಂಗೇರಾ, ಮುಲ್ಕಿ ಯುನಿಟಿ ಚರ್ಚ್ ಸಭಾಪಾಲಕ ಸ್ಟೀವನ್ ಸರ್ವೋತ್ತಮ, ಪಾಸ್ಟರ್ ರಾಜೇಶ್ ಕೋಟ್ಯಾನ್, ಸಮಾಜ ಸೇವಕಿ ನ್ಯಾನ್ಸಿ ಕರ್ಕಡ, ಸಮಾಜ ಸೇವಕಿ ಪ್ರತಿಭಾ ಕ್ರಿಸ್ತಬೆಲ್ ಪಾಲನ್ನ ಉಪಸ್ಥಿತರಿದ್ದರು.

ಒಕ್ಕೂಟ ಸದಸ್ಯೆ ಮೇರಿ ಸ್ವಪ್ನ ಸ್ವಾಗತಿಸಿದರು. ಮೂಡುಬಿದಿರೆ ಕೋರ್ಟ್‌ನ ಮಹಮ್ಮದ್ ಅಕ್ಬರ್ ನಿರೂಪಿಸಿದರು. ಪ್ರಸನ್ನಿ ವಂದಿಸಿದರು.