ಜಿಲ್ಲೆ

ಮಾದಕ ಪದಾರ್ಥ ಸೇವನೆ ನಿಷೇಧ ದಿನಾಚರಣೆ

ಉಡುಪಿ: ಯುವಸಮೂಹ ಅಪಾರ ಸಂಖ್ಯೆಯಲ್ಲಿ ದುಷ್ಚಟಗಳ ಆಕರ್ಷಣೆಗೆ ಒಳಗಾಗುತ್ತಿದ್ದು, ಜೀವನವನ್ನು ಹಾಳು ಮಾಡಿಕೊಳ್ಳುತ್ತಿದ್ದಾರೆ. ಯುವ ಸಮೂಹ ನಾಶವಾದರೆ ದೇಶ ನಾಶವಾದಂತೆ. ಮಾದಕ ದ್ರವ್ಯಗಳ ನಿಯಂತ್ರಣ ಕೇವಲ ಸರ್ಕಾರ ಮತ್ತು ಪೊಲೀಸರಿಂದ ಸಾಧ್ಯವಿಲ್ಲ. ಇದರ ದುಷ್ಪರಿಣಾಮಗಳ ಬಗ್ಗೆ ಯುವ ಸಮಾಜಕ್ಕೆ ಅರಿವು ಮೂಡಿಸುವುದು ಅಗತ್ಯ ಎಂದು ಸಮಾನ ಮನಸ್ಕ ಕನ್ನಡಿಗರ ಅಧ್ಯಕ್ಷ ಶ್ರೀನಿವಾಸ ರಾವ್​ ಕೆ. ಹೇಳಿದರು.

ಕಡಿಯಾಳಿ ಶಾಲೆಯಲ್ಲಿ ಸಮಾನ ಮನಸ್ಕ ಕನ್ನಡಿಗರ ವೇದಿಕೆಯಿಂದ ವಿಶ್ವ ಮಾದಕ ಪದಾರ್ಥ ಸೇವನೆ ನಿಷೇಧ ದಿನಾಚರಣೆಯಲ್ಲಿ ಮಾತನಾಡಿದರು. ದೇಶದಲ್ಲಿ ಸುಮಾರು 6 ಕೋಟಿ ಯುವ ಸಮೂಹ ಧೂಮಪಾನ ಮತ್ತು ಮಾದಕ ಪದಾರ್ಥ ಸೇವನೆಗಳ ದುಷ್ಪರಿಣಾಮದಿಂದ ಬಳಲುತ್ತಿದ್ದಾರೆ. ಕ್ಯಾನ್ಸರ್​, ವಸಡು ಕ್ಯಾನ್ಸರ್​, ಕಾಮಾಲೆ, ಯಕೃತ್​ ಕ್ಯಾನ್ಸರ್​ ಮುಂತಾದ ಕಾಯಿಲೆಗಳಿಂದ ನರಳುತ್ತಿದ್ದಾರೆ ಎಂದರು.

ಶಿಕ್ಷಕಿಯರಾದ ಉಷಾ ಮತ್ತು ಶಾಂತಾ, ವೇದಿಕೆಯ ಪ್ರಮುಖರಾದ ಶೋಭಾ ಪಿ. ರಾಘವೇಂದ್ರ, ಹೇಮಲತಾ, ಶ್ರೀದೇವಿ ಚಂದ್ರಶೇಖರ್​, ರಮೇಶ್​, ವೀಣಾ, ಸುರೇಶ್​ ಡಿ. ಅನುರಾಧ ಜಿ.ಎಸ್​ ಅನಂತ್​ ವಾಸು ಪಿ. ಐಶ್ವರ್ಯ, ಉಮೇಶ್​, ರಾಮಚಂದ್ರ, ಜಗದೀಶ್​, ಶಶಿಕಲಾ, ದೀಪ, ಪ್ರಭಾ ಕೆ. ಮುಂತಾದವರು ಉಪಸ್ಥಿತರಿದ್ದರು.