ಜಿಲ್ಲೆ

ಮತಾಂತರ ನಿಷೇಧಕ್ಕೆ ಪಕ್ಷಾತೀತ ಚಿಂತನೆ: ರಾಜ್ಯ ಗೃಹ ಸಚಿವ ಆರಗ ಪ್ರತಿಪಾದನೆ

Dakshina Kannada

ಮಂಗಳೂರು: ವಿಧಾನಸಭೆಯಲ್ಲಿ ಮತಾಂತರ ನಿಷೇಧ ಕಾಯ್ದೆ ಅನುಮೋದನೆ ಪಡೆದಿದೆ, ಈಗ ನಾವೆಲ್ಲರೂ ಪಕ್ಷ ಮೀರಿ ಈ ಬಗ್ಗೆ ಚಿಂತನೆ ನಡೆಸಬೇಕು ಎಂದು ರಾಜ್ಯ ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದರು.

ಶನಿವಾರ ಮಂಗಳೂರು ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಉತ್ತಮ ಮರವನ್ನು ಗೆದ್ದಲಿನಂತೆ ಕಾಡುವ ಮತಾಂತರ ತಡೆಗೆ ಕ್ರಮ ಅತ್ಯಗತ್ಯ, ಇದಕ್ಕೆ ವಿರೋಧ ಅನಗತ್ಯ. ಧರ್ಮದ ಆಧಾರದಲ್ಲಿ ಇಂದು ಸಮಾಜ ಒಡೆದು ಹೋಗುತ್ತಿದೆ, ಮತಾಂತರ ನಿಷೇಧ ಕಾಯ್ದೆಗೆ ವಿರೋಧ ಸಹಜ ಎಂದರು. ಕಾಶ್ಮೀರದಲ್ಲಿ 370 ಕಾಯ್ದೆ ರದ್ದು ಮಾಡಲು ನಮ್ಮಿಂದ ಸಾಧ್ಯ. ಮತ ಬ್ಯಾಂಕ್ ರಾಜಕಾರಣ ಮಾಡುವವರಿಗೆ ಇದು ಸಾಧ್ಯವಿಲ್ಲ ಎಂದು ಕಾಂಗ್ರೆಸ್‌ಗೆ ತಿರುಗೇಟು ನೀಡಿದರು.

ಉಪ್ಪಿನಂಗಡಿ ಗಲಭೆಯನ್ನು ಪೊಲೀಸರು ಸಮರ್ಥವಾಗಿ ನಿಭಾಯಿಸಿದ್ದಾರೆ. ಸಮುದಾಯದ ನಡುವಿನ ಘರ್ಷಣೆಗಳನ್ನು ಪೊಲೀಸರು ಸಮರ್ಥವಾಗಿ ನಿಭಾಯಿಸುತ್ತಾರೆ ಎಂದರು. ನಕ್ಸಲರ ಶರಣಾಗತಿ ಬಗ್ಗೆ ಮಾತನಾಡಿದ ಅವರು, ಕೆಲವರು ಇದೀಗ ಶರಣಾಗಿದ್ದಾರೆ. ಈ ಭಾಗದ ನಕ್ಸಲರು ಸಮಾಜಮುಖಿಯಾಗಲು ಮುಂದೆ ಬರುತ್ತಿದ್ದಾರೆ ಎಂದರು.