ಜಿಲ್ಲೆ

ಜೂ.5ಕ್ಕೆ ರಂಗಶಂಕರದಲ್ಲಿ ‘ಕಾಯುವ ಕಾಯಕ’ : ಡುಂಡಿರಾಜ್ ಅವರ ನಾಟಕ ಪ್ರದರ್ಶನ

ಬೆಂಗಳೂರು: 44 ವರ್ಷಗಳಿಂದ ಕ್ರಿಯಾಶೀಲ ರಂಗಚಟುವಟಿಕೆ ನಡೆಸಿಕೊಂಡು ಬಂದಿರುವ ಅಂತರಂಗ ತಂಡದ ಹೊಸ ನಾಟಕ ‘ಕಾಯುವ ಕಾಯಕ’ ಜೂ.5 ರಂದು ಸಂಜೆ 7.30ಕ್ಕೆ ಜೆ.ಪಿ.ನಗರದ ರಂಗಶಂಕರದಲ್ಲಿ ಪ್ರದರ್ಶನಗೊಳ್ಳಲಿದೆ.

ಎಚ್. ಡುಂಡಿರಾಜ್ ಅವರು ರಚಿಸಿರುವ ‘ಕಾಯುವ ಕಾಯಕ’ ನಾಟಕವು ಕಾಯುವಿಕೆಯೆಂಬ ಪರಿಕಲ್ಪನೆಯಲ್ಲಿ ನಿರೀಕ್ಷೆ, ಹುಡುಕಾಟ, ಸಂಧಿಗ್ಧತೆ, ಸಂಬಂಧಗಳ ಸಂಕೀರ್ಣತೆ, ಮನಸಿನ ತೊಳಲಾಟ, ಅಸಹಾಯಕತೆ ಇವೆಲ್ಲವನ್ನೂ ಒಳಗೊಂಡಿದೆ. ಹಾಸ್ಯ, ವಿಡಂಬನೆ, ಚುಟುಕುಗಳು, ಲವಲವಿಕೆಯ ಸಂಭಾಷಣೆ ಢುಂಡಿರಾಜರ ನಾಟಕದ ವಿಶೇಷತೆ.

ಅರ್ಚನಾ ಶ್ಯಾಮ್ ಈ ನಾಟಕಕ್ಕೆ ರಂಗವಿನ್ಯಾಸ, ವಸ್ತ್ರವಿನ್ಯಾಸ ಮತ್ತು ನಿರ್ದೇಶನ ಮಾಡಿದ್ದಾರೆ. ನಾಟಕದ ಟಿಕೆಟ್‌ಗಳು ಬುಕ್ ಮೈ ಶೋ ನಲ್ಲಿ ಲಭ್ಯ ಇವೆ.